ಪಶ್ಚಿಮ ಆಫ್ರಿಕಾದ ಘಾನಾದಿಂದ ಆಸ್ಟ್ರೇಲಿಯಾಕ್ಕೆ 320 ಕೆಜಿ ಮೆಥಾಂಫೆಟಮೈನ್ ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಬ್ರಿಟಿಷ್ ನಟಿ Emma Hussey (34) ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ.
ವರದಿಗಳ ಪ್ರಕಾರ, ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಇದ್ದಿಲಿನ ಚೀಲಗಳಲ್ಲಿ ಅಡಗಿಸಿ ಕಂಟೇನರ್ ಮೂಲಕ ಸಾಗಿಸಲು ಯತ್ನಿಸಲಾಗಿತ್ತು. ಈ ಡ್ರಗ್ಸ್ ಸಾಗಾಟ ಜಾಲದಲ್ಲಿ ದಕ್ಷಿಣ ಆಸ್ಟ್ರೇಲಿಯಾದ ದಂಪತಿ ಸೇರಿದಂತೆ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
E20 ಧಾರಾವಾಹಿಯಲ್ಲಿ ‘ನಾಜ್’ ಪಾತ್ರದ ಮೂಲಕ ಹಾಗೂ Hummingbird ಸಿನಿಮಾದಲ್ಲಿ ನಟಿಸಿ ಗುರುತಿಸಿಕೊಂಡಿರುವ ಎಮಾ ಹುಸೇನ್, ಇದೀಗ ಭಾರೀ ಡ್ರಗ್ಸ್ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿದ್ದಾರೆ.
ಪತ್ತೆಯಾದ ಮೆಥಾಂಫೆಟಮೈನ್‌ನ ಅಂದಾಜು ಮೌಲ್ಯ ಸುಮಾರು 296 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (ಸುಮಾರು ₹2,000 ಕೋಟಿ) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಾಬೀತಾದರೆ ಜೀವಾವಧಿ ಶಿಕ್ಷೆಯವರೆಗೂ ವಿಧಿಸುವ ಸಾಧ್ಯತೆ ಇದೆ.
ಈ ಹಿಂದೆ ನ್ಯಾಯಾಲಯವು ಎಮಾ ಹುಸೇನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.