Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ವಿಯೆಟ್ನಾಂ ಕ್ರೂಸ್‌ನಲ್ಲಿ ಭಾರತೀಯರಿಗೆ ಪ್ರತ್ಯೇಕ ವ್ಯವಸ್ಥೆ ಯಾಕೆ?ಮೊದಲು ವರ್ಣಭೇದ ಅಂದುಕೊಂಡರು… 5 ನಿಮಿಷದಲ್ಲಿ ನಿಜ ಗೊತ್ತಾಗಿ ನಾಚಿಕೊಂಡರು!
ವಿದೇಶವೈರಲ್

ವಿಯೆಟ್ನಾಂ ಕ್ರೂಸ್‌ನಲ್ಲಿ ಭಾರತೀಯರಿಗೆ ಪ್ರತ್ಯೇಕ ವ್ಯವಸ್ಥೆ ಯಾಕೆ?ಮೊದಲು ವರ್ಣಭೇದ ಅಂದುಕೊಂಡರು… 5 ನಿಮಿಷದಲ್ಲಿ ನಿಜ ಗೊತ್ತಾಗಿ ನಾಚಿಕೊಂಡರು!

Share
1 Min Read
SHARE

ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ಮೂಲದ ದಂಪತಿ ಹನ್ನಾ ಸೂಸನ್ ಮತ್ತು ಅಥುಲ್ ತೇಜ್ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಾ ಲಾಂಗ್ ಬೇ ಮತ್ತು ನಿನ್ ಬಿನ್ ಪ್ರದೇಶಗಳ ಕ್ರೂಸ್ ಪ್ರವಾಸದ ವೇಳೆ ಭಾರತೀಯ ಪ್ರವಾಸಿಗರನ್ನು ಪ್ರತ್ಯೇಕವಾಗಿ ಕೂರಿಸಿ, ಸುರಕ್ಷತಾ ಸೂಚನೆಗಳ ಬದಲು ‘ನಡವಳಿಕೆ ಪಾಠ’ ಹೇಳಿದ್ದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

ಕ್ರೂಸ್‌ಗೆ ಏರಿದ ಬಳಿಕ ಭಾರತೀಯರ ಗುಂಪಿಗೆ ಸಿಬ್ಬಂದಿ ಮೂಲಭೂತ ಶಿಷ್ಟಾಚಾರಗಳ ಬಗ್ಗೆ ವಿಶೇಷ ಸೂಚನೆಗಳನ್ನು ನೀಡಿದ್ದರು. ಬಫೇನಲ್ಲಿ ಆಹಾರ ತೆಗೆದುಕೊಳ್ಳುವ ವಿಧಾನ, ಕೈಯಿಂದ ಆಹಾರ ಮುಟ್ಟಬಾರದು, ಟಾಂಗ್‌ಗಳನ್ನು ಹೇಗೆ ಬಳಸಬೇಕು ಎಂಬ ವಿವರಗಳನ್ನು ತಿಳಿಸಲಾಗಿತ್ತು.

ಆರಂಭದಲ್ಲಿ ಇದನ್ನು ಭಾರತೀಯರ ವಿರುದ್ಧದ ತಾರತಮ್ಯ ಅಥವಾ ವರ್ಣಭೇದ ಎಂದು ದಂಪತಿ ಭಾವಿಸಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅವರ ಅಭಿಪ್ರಾಯ ಬದಲಾಗಿದೆ.

ಬಫೇ ಆರಂಭವಾದ ಕೆಲವೇ ಹೊತ್ತಿನಲ್ಲಿ ಭಾರತೀಯ ಪ್ರವಾಸಿಗರೊಬ್ಬರು ಆಹಾರ ನೀಡಲು ಸ್ವಲ್ಪ ತಡವಾಗಿದ್ದಕ್ಕೆ ಸಿಬ್ಬಂದಿಯ ಮೇಲೆ ಜೋರಾಗಿ ಕೂಗಾಡಲು ಆರಂಭಿಸಿದ್ದಾರಂತೆ. ಕ್ರೂಸ್‌ನಲ್ಲಿ ಅಡುಗೆಮನೆಯಿಂದ ಆಹಾರ ತರಲು ಸಮಯ ಬೇಕಾಗುತ್ತದೆ ಎಂದು ಸಿಬ್ಬಂದಿ ವಿವರಿಸಿದರೂ ಅವರು ಕೋಪಗೊಂಡು ಗದ್ದಲ ಮಾಡಿದ್ದನ್ನು ಕಂಡು ದಂಪತಿಗೆ ಮೊದಲೇ ನೀಡಿದ್ದ ಸೂಚನೆಗಳ ಅರ್ಥ ಗೊತ್ತಾಗಿದೆ.

“ಆ ಕ್ಷಣದಲ್ಲಿ ಯಾಕೆ ಭಾರತೀಯರಿಗೆ ಮಾತ್ರ ಆ ಪಾಠ ಹೇಳಲಾಗಿತ್ತು ಎಂಬುದು ಅರ್ಥವಾಯಿತು. ಕೆಳ ಮಹಡಿಯಲ್ಲಿ ಇದ್ದ ಇತರ ದೇಶಗಳ ಪ್ರವಾಸಿಗರು ದೃಶ್ಯಾವಳಿಗಳನ್ನು ಆನಂದಿಸುತ್ತಿದ್ದರೆ, ನಾವು ಮಾತ್ರ ಒಳಗೆ ಕುಳಿತು ಶಿಷ್ಟಾಚಾರ ತರಗತಿ ಕೇಳುತ್ತಿದ್ದೆವು” ಎಂದು ದಂಪತಿ ಹೇಳಿದ್ದಾರೆ.

ತಮ್ಮ ವಿಡಿಯೋ ಅಂತ್ಯದಲ್ಲಿ ಅವರು ಭಾರತೀಯ ಪ್ರವಾಸಿಗರಿಗೆ ಮನವಿ ಮಾಡಿದ್ದು, “ವಿದೇಶ ಪ್ರವಾಸದ ವೇಳೆ ಗೌರವದಿಂದ ವರ್ತಿಸಿ. ನಿಮ್ಮ ನಡೆ-ನುಡಿ ನಿಮ್ಮ ದೇಶದ ಪ್ರತಿನಿಧಿತ್ವ ಮಾಡುತ್ತದೆ ಎಂಬುದನ್ನು ಮರೆಯಬೇಡಿ” ಎಂದು ಕರೆ ನೀಡಿದ್ದಾರೆ.

 

TAGGED:#Vietnam #IndianTourists #TravelNews #BengaluruCouple #ViralVideo #HaLongBay #Tourism #SocialMedia #TravelEtiquette #IndiaAbroad
Share This Article
Facebook Twitter Copy Link Print
Previous Article ಮೈಸೂರಲ್ಲೂ ಕಂಬಳ ಸಂಭ್ರಮಕ್ಕೆ ಸಿದ್ಧತೆ; ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು
Next Article ವಂದೇ ಭಾರತ್‌ನಲ್ಲಿ ಪ್ರಯಾಣಿಸಿದ ವಿದೇಶಿ ಮಹಿಳೆ ಹೇಳಿದ್ದೇನು? ಭಾರತ ರೈಲ್ವೆ ಬಗ್ಗೆ ವೈರಲ್ ವಿಡಿಯೋ!

Popular Posts

ಗೃಹಲಕ್ಷ್ಮಿ ಗೋಲ್‌ಮಾಲ್: 19 ಸಾವಿರ ಫಲಾನುಭವಿಗಳಿಗೆ ಒಂದೇ ಖಾತೆ! ಕೋಟಿಗಟ್ಟಲೆ ಹಣ ಜಮಾ

2 Min Read

ಕಾಡಿದ ಖಿನ್ನತೆ: ಜೀವ ಕಳೆದುಕೊಂಡ ಯುವ ನಿರ್ದೇಶಕ ಮಂಜುನಾಥ್

1 Min Read

AI ಬಳಸಿ ಸ್ಪರ್ಧಿಗಳನ್ನೇ ಅಳಿಸಿದ ಅಭ್ಯರ್ಥಿ! ಸರ್ಕಾರಿ ಉದ್ಯೋಗಕ್ಕಾಗಿ RPSC ಪೋರ್ಟಲ್ ಹ್ಯಾಕ್

1 Min Read

‘ಈಥಾ’ ಟೀಸರ್ ರಿಲೀಸ್: ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಮಿಂಚು!

1 Min Read

You Might Also Like

ವೈರಲ್ಲೈಫ್‌ಸ್ಟೈಲ್

ಮೊದಲು ಬೆಂಗಳೂರು ಇಷ್ಟವಾಗಿರಲಿಲ್ಲ, ಈಗ ಬಿಡಲು ಮನಸ್ಸೇ ಆಗುತ್ತಿಲ್ಲ; ಯುವತಿಯ ಭಾವನಾತ್ಮಕ ಪೋಸ್ಟ್ ವೈರಲ್

1 Min Read
Crimeಈ ದಿನವೈರಲ್

₹100 ಪ್ರಯಾಣಕ್ಕೆ ₹2,400 ವಸೂಲಿ! ಬೆಂಗಳೂರಿಗೆ ಮೊದಲ ಬಾರಿಗೆ ಬಂದ ಯುವಕರಿಗೆ ಆಟೋ ಚಾಲಕನ ಕಿರುಕುಳ

1 Min Read
ವೈರಲ್ಪ್ರಮುಖ

ರಸ್ತೆಯಲ್ಲೇ ಬೆತ್ತಲಾದ ಯುವತಿ: ಕ್ಯಾಬ್ ಚಾಲಕನ ಮೇಲೆ ಹಲ್ಲೆ, ವೈರಲ್ ವಿಡಿಯೋ ನೋಡಿ

1 Min Read
ವಿದೇಶಪ್ರಮುಖ

ಎಲಾನ್ ಮಸ್ಕ್ ನೀಡಿದ್ದ 125 ಕೋಟಿ ರೂ. ಬಿಗ್​ ಆಫರ್​ ತಿರಸ್ಕರಿಸಿದ್ದೇಕೆ ಆಶ್ಲೇ?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?