Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಎಲಾನ್ ಮಸ್ಕ್ ನೀಡಿದ್ದ 125 ಕೋಟಿ ರೂ. ಬಿಗ್​ ಆಫರ್​ ತಿರಸ್ಕರಿಸಿದ್ದೇಕೆ ಆಶ್ಲೇ?
ವಿದೇಶಪ್ರಮುಖ

ಎಲಾನ್ ಮಸ್ಕ್ ನೀಡಿದ್ದ 125 ಕೋಟಿ ರೂ. ಬಿಗ್​ ಆಫರ್​ ತಿರಸ್ಕರಿಸಿದ್ದೇಕೆ ಆಶ್ಲೇ?

Share
4 Min Read
SHARE

newsics.com/ನ್ಯೂಸಿಕ್ಸ್

ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಹಾಗೂ ಮಾಜಿ ಹೋರಾಟಗಾರ್ತಿ ಆಶ್ಲೇ ಸೇಂಟ್ ಕ್ಲೇರ್ ಅವರು ವಿಶ್ವದ ಮೊದಲ ಟ್ರಿಲಿಯನೇರ್​ ಎಲಾನ್ ಮಸ್ಕ್ ಜತೆಗಿನ ತಮ್ಮ ಸಂಬಂಧ ಮತ್ತು ಮಗುವಿನ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸದೇ ರಹಸ್ಯವಾಗಿ ಇಡಲು ತಮಗೆ ನೀಡಲಾಗಿದ್ದ ಕೋಟ್ಯಂತರ ಡಾಲರ್ ಮೌಲ್ಯದ ಹಣಕಾಸಿನ ಆಫರ್​ ಅನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.

27 ವರ್ಷದ ಆಶ್ಲೇ ಅವರು ಪತ್ರಕರ್ತ ಡಾನ್ ಲೆಮನ್ ಅವರ ‘ಡಾನ್ ಲೆಮನ್ ಶೋ’ ಪಾಡ್‌ಕಾಸ್ಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಹಣಕ್ಕಿಂತ ಹೆಚ್ಚಾಗಿ ನಾನು ನನ್ನ ನೈತಿಕತೆ ಮತ್ತು ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಸ್ಕ್ ಅವರ ಸಂಪತ್ತು ನಿರ್ವಹಣಾಧಿಕಾರಿ ಜ್ಯಾರೆಡ್ ಬಿರ್ಚಾಲ್ ಅವರು ಕೋಟ್ಯಂತರ ರೂಪಾಯಿಗಳ ಆಫರ್ ಅನ್ನು ಮೊದಲು ನನ್ನ ಮುಂದಿಟ್ಟಿದ್ದರು. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಅತ್ಯಂತ ಗೌಪ್ಯವಾಗಿ ಇಡಬೇಕಾದ ಇಂತಹ ಮಹತ್ವದ ಒಪ್ಪಂದದ ಪ್ರಸ್ತಾವನೆಯನ್ನು ಸಿಗ್ನಲ್ ಆಯಪ್‌ನ ‘ಡಿಸಪಿಯರಿಂಗ್ ಮೆಸೇಜಸ್’ (ಸ್ವಯಂಚಾಲಿತವಾಗಿ ಅಳಿಸಿಹೋಗುವ ಸಂದೇಶಗಳು) ಮೂಲಕ ಕಳುಹಿಸಲಾಗಿತ್ತು. ಇದನ್ನು ನೋಡಿ ನನಗೆ ಶಾಕ್​ ಆಗಿತ್ತು ಎಂದು ಆಶ್ಲೇ ಹೇಳಿದ್ದಾರೆ.
ಇನ್ನೂ ಆರಂಭದಲ್ಲೇ ಸ್ವತಃ ಮಸ್ಕ್ ಅವರೇ ಒಂದು ದೊಡ್ಡ ಮೊತ್ತವನ್ನು ಮುಂಗಡವಾಗಿ ಪಾವತಿಸಲು ನಿರ್ಧರಿಸಿದ್ದರು ಎಂಬ ವದಂತಿ ಇದ್ದು, ಈ ಕುರಿತು ಮಾತನಾಡಿರುವ ಆಶ್ಲೇ, ಮಸ್ಕ್​ ಅವರು ಆರಂಭದಲ್ಲಿ ಜ್ಯಾರೆಡ್ ಮತ್ತು ನನಗೆ ಒಂದು ಸಂದೇಶ ಕಳುಹಿಸಿದ್ದರು. ಅದರಲ್ಲಿ, ಮನೆ ಖರೀದಿ ಮತ್ತು ತುರ್ತು ಬಂಡವಾಳಕ್ಕಾಗಿ ಆಶ್ಲೇ ಅವರಿಗೆ ತಕ್ಷಣವೇ $15 ಮಿಲಿಯನ್ (ಸುಮಾರು 125 ಕೋಟಿ ರೂ.ಗಿಂತ ಹೆಚ್ಚು) ವರ್ಗಾಯಿಸಿ ಎಂದು ತಿಳಿಸಲಾಗಿತ್ತು. ಆದರೆ, ಇದಾದ ಕೆಲವು ದಿನಗಳ ನಂತರ ಜ್ಯಾರೆಡ್ ನನಗೆ ಫೋನ್ ಮಾಡಿ ಸತತ ಎರಡು ಗಂಟೆಗಳ ಕಾಲ ಮಾತನಾಡಿದರು. ಅಲ್ಲದೆ, ಈ ಹಣವನ್ನು ಪಡೆಯಬೇಕಾದರೆ ನಾನು ‘ನಾನ್-ಡಿಸ್ಕ್ಲೋಷರ್ ಅಗ್ರಿಮೆಂಟ್’ (NDA – ವಿಷಯವನ್ನು ರಹಸ್ಯವಾಗಿಡುವ ಒಪ್ಪಂದ) ಒಂದಕ್ಕೆ ಕಡ್ಡಾಯವಾಗಿ ಸಹಿ ಮಾಡಬೇಕಾಗುತ್ತದೆ ಎಂಬ ವಿಷಯವನ್ನು ತಿಳಿಸಿದರು ಎಂದು ಒಪ್ಪಂದದ ಹಿಂದಿನ ಅಸಲಿ ಸಂಗತಿಯನ್ನು ಆಶ್ಲೇ ಬಿಚ್ಚಿಟ್ಟಿದ್ದಾರೆ.
ಮಸ್ಕ್ ಜೊತೆಗಿನ ಸಂಬಂಧದ ಬಗ್ಗೆ ಸಂಪೂರ್ಣವಾಗಿ ಮೌನ ಕಾಯ್ದುಕೊಳ್ಳಲು ಒಪ್ಪಿಕೊಂಡರೆ, ತಮಗೆ $15 ಮಿಲಿಯನ್ (ಸುಮಾರು 125 ಕೋಟಿ ರೂ.) ಮುಂಗಡ ಹಣದ ಜೊತೆಗೆ ಮುಂದಿನ 20 ವರ್ಷಗಳವರೆಗೆ ಪ್ರತಿ ತಿಂಗಳು $100,000 (ಸುಮಾರು 83 ಲಕ್ಷ ರೂ.) ನೀಡುವುದಾಗಿ ಆಫರ್ ಮಾಡಲಾಗಿತ್ತು ಎಂದು ಆಶ್ಲೇ ಆರೋಪಿಸಿದ್ದಾರೆ. ಆದರೆ, ಈ ಒಪ್ಪಂದದ ನಿಯಮಗಳು ಅತ್ಯಂತ ಕಠಿಣವಾಗಿದ್ದವು. ಇದರ ಪ್ರಕಾರ ಆಶ್ಲೇ ಅವರು ಎಲಾನ್ ಮಸ್ಕ್, ಅವರ ಉದ್ಯೋಗಿಗಳು ಅಥವಾ ಅವರ ಕಂಪನಿಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವಂತಿರಲಿಲ್ಲ ಎಂದು ಆಶ್ಲೇ ಹೇಳಿಕೊಂಡಿದ್ದಾರೆ.

ಇಷ್ಟೊಂದು ದೊಡ್ಡ ಮೊತ್ತದ ಹಣಕಾಸಿನ ಆಫರ್ ಇದ್ದರೂ ಸಹ, ಆಶ್ಲೇ ಅದಕ್ಕೆ ಮಣಿಯದೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಉಳಿದರು. ತಾವು ಈ ಒಪ್ಪಂದಕ್ಕೆ ಸಹಿ ಮಾಡಲು ಸಾಧ್ಯವಿಲ್ಲ ಎಂದು ಜ್ಯಾರೆಡ್‌ಗೆ ಸ್ಪಷ್ಟವಾಗಿ ತಿಳಿಸಿದರು. ಈ ಒಪ್ಪಂದ ನನ್ನ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಲ್ಲ. ನಾನು ನೈತಿಕತೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿರುವ ಆಶ್ಲೇ, ಇಂತಹ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿ ಕೋಟ್ಯಂತರ ರೂಪಾಯಿ ಪಡೆಯುವುದಕ್ಕಿಂತ, ನನ್ನ ಇಬ್ಬರು ಮಕ್ಕಳೊಂದಿಗೆ ಒಂದು ಸಣ್ಣ ಸ್ಟುಡಿಯೋ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವುದೇ ಮೇಲು ಎಂದು ಅವರಿಗೆ ತಿಳಿಸಿದ್ದಾಗಿ ಹೇಳಿದ್ದಾಗಿ ಆಶ್ಲೇ ತಿಳಿಸಿದ್ದಾರೆ.
ಈ ಹಿಂದಿನ ಸಂಬಂಧದಿಂದ ಹುಟ್ಟಿದ ಹಿರಿಯ ಮಗು ಸೇರಿದಂತೆ ಇಬ್ಬರು ಮಕ್ಕಳ ತಾಯಿಯಾಗಿರುವ ಆಶ್ಲೇ, ತಮ್ಮ ಕುಟುಂಬದ ಹಿತದೃಷ್ಟಿಯಿಂದ ಯಾವುದು ಸರಿಯೋ ಅದನ್ನೇ ಮಾಡಿರುವುದಾಗಿ ಹೇಳಿದ್ದಾರೆ. ಆಶ್ಲೇ ಅವರು ಮೊದಲ ಬಾರಿಗೆ 2025ರ ಫೆಬ್ರವರಿಯಲ್ಲಿ ತಮ್ಮ ಐದು ತಿಂಗಳ ಮಗ ‘ರೋಮುಲಸ್’ಗೆ ಎಲಾನ್ ಮಸ್ಕ್ ಅವರೇ ತಂದೆ ಎಂಬುದನ್ನು ಬಹಿರಂಗವಾಗಿ ಘೋಷಿಸಿದ್ದರು. ತಾವು ಗರ್ಭಿಣಿಯಾದಾಗಿನಿಂದ ಮಸ್ಕ್ ಅವರ ನಡವಳಿಕೆ ಬದಲಾಗಿತ್ತು ಮತ್ತು ಅವರು ಮೊದಲು ಹೇಳಿದ್ದಕ್ಕಿಂತ ಭಿನ್ನವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆಶ್ಲೇ ಈ ಹಿಂದೆ ಟಿಕ್‌ಟಾಕ್‌ನಲ್ಲಿ ಬಹಿರಂಗಪಡಿಸಿದ್ದರು. ಆಶ್ಲೇ ಈ ವಿಷಯ ಪ್ರಕಟಿಸಿದ ಕೆಲವೇ ವಾರಗಳಲ್ಲಿ, ನ್ಯೂರಾಲಿಂಕ್ ಕಾರ್ಯನಿರ್ವಾಹಕಿ ಶಿವೋನ್ ಜಿಲಿಸ್ ಅವರೊಂದಿಗೂ ತಮಗೆ ಮತ್ತೊಬ್ಬ ಮಗನಿದ್ದಾನೆ ಎಂಬುದನ್ನು ಮಸ್ಕ್ ಖಚಿತಪಡಿಸಿದ್ದರು. ಇದರೊಂದಿಗೆ ನಾಲ್ಕು ಬೇರೆ ಬೇರೆ ಮಹಿಳೆಯರ ಮೂಲಕ ಎಲಾನ್ ಮಸ್ಕ್ ಒಟ್ಟು 14 ಮಕ್ಕಳ ತಂದೆಯಾಗಿದ್ದಾರೆ.
ಮತ್ತೊಂದೆಡೆ, ಮಸ್ಕ್ ಅವರು ತಮ್ಮ ಮೇಲೆ ಆಶ್ಲೇ ಮಾಡಿರುವ ಆರೋಪಗಳನ್ನು ಈ ಹಿಂದೆಯೇ ನಿರಾಕರಿಸಿದ್ದಾರೆ. ಆ ಮಗು ತಮ್ಮದೇ ಎಂಬುದು ಖಚಿತವಾಗದಿದ್ದರೂ ಸಹ, ಮಸ್ಕ್ ಈಗಾಗಲೇ ಆಶ್ಲೇ ಅವರಿಗೆ $2.5 ಮಿಲಿಯನ್ (ಸುಮಾರು 20 ಕೋಟಿ ರೂ.) ಪಾವತಿಸಿದ್ದಾರೆ. ಇದರ ಜೊತೆಗೆ, ತಾವು ವರ್ಷಕ್ಕೆ $500,000 (ಸುಮಾರು 4 ಕೋಟಿ ರೂ.) ಪಾವತಿಸುತ್ತಿರುವುದಾಗಿ 2025ರ ಮಾರ್ಚ್‌ನಲ್ಲಿ ಮಸ್ಕ್ ಹೇಳಿದ್ದರು. ಪ್ರಸ್ತುತ ಇಬ್ಬರೂ ಈ ವಿಷಯವಾಗಿ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಈ ರಹಸ್ಯ ಒಪ್ಪಂದವನ್ನು ತಿರಸ್ಕರಿಸಿದ ನಂತರ ತಾವು ಮಸ್ಕ್ ಜೊತೆ ನೇರವಾಗಿ ಮಾತನಾಡಿಲ್ಲ ಎಂಬುದನ್ನು ಆಶ್ಲೇ ಅವರು ಡಾನ್ ಲೆಮನ್ ಎದುರು ಖಚಿತಪಡಿಸಿದ್ದಾರೆ. ವಿಶೇಷವೆಂದರೆ, ಎಲಾನ್ ಮಸ್ಕ್ ವಿಶ್ವದ ಮೊದಲ ‘ಟ್ರಿಲಿಯನೇರ್’ (ಲಕ್ಷ ಕೋಟಿ ಒಡೆಯ) ಎಂದು ಹೊರಹೊಮ್ಮಿರುವ ಬೆನ್ನಲ್ಲೇ ಈ ಹೊಸ ವಿವಾದಗಳು ಮುಂಚೂಣಿಗೆ ಬಂದಿವೆ,

ಊಟ ಕೇಳಿದ್ದಕ್ಕೆ ಭಿಕ್ಷುಕ ದಂಪತಿಗಳ ಮೇಲೆ ಹಲ್ಲೆ ಮಾಡಿದ ಹೋಟೆಲ್ ಮಾಲೀಕ

 

TAGGED:That matters more to me than money... Why did Ashley reject the massive ₹125 crore offer from Elon Musk?
Share This Article
Facebook Twitter Copy Link Print
Previous Article ಊಟ ಕೇಳಿದ್ದಕ್ಕೆ ಭಿಕ್ಷುಕ ದಂಪತಿಗಳ ಮೇಲೆ ಹಲ್ಲೆ ಮಾಡಿದ ಹೋಟೆಲ್ ಮಾಲೀಕ
Next Article ಇನ್ನೆರಡು ದಿನದಲ್ಲಿ ಗೃಹಲಕ್ಷ್ಮಿ ಅರ್ಜಿ ಆರಂಭ, ಈ ದಾಖಲೆಗಳು ರೆಡಿ ಇರಲಿ

Popular Posts

ಕಾಡಿದ ಖಿನ್ನತೆ: ಜೀವ ಕಳೆದುಕೊಂಡ ಯುವ ನಿರ್ದೇಶಕ ಮಂಜುನಾಥ್

1 Min Read

AI ಬಳಸಿ ಸ್ಪರ್ಧಿಗಳನ್ನೇ ಅಳಿಸಿದ ಅಭ್ಯರ್ಥಿ! ಸರ್ಕಾರಿ ಉದ್ಯೋಗಕ್ಕಾಗಿ RPSC ಪೋರ್ಟಲ್ ಹ್ಯಾಕ್

1 Min Read

‘ಈಥಾ’ ಟೀಸರ್ ರಿಲೀಸ್: ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಮಿಂಚು!

1 Min Read

ಮೊದಲು ಬೆಂಗಳೂರು ಇಷ್ಟವಾಗಿರಲಿಲ್ಲ, ಈಗ ಬಿಡಲು ಮನಸ್ಸೇ ಆಗುತ್ತಿಲ್ಲ; ಯುವತಿಯ ಭಾವನಾತ್ಮಕ ಪೋಸ್ಟ್ ವೈರಲ್

1 Min Read

You Might Also Like

ಪ್ರಮುಖಪ್ರಮುಖ

ಜುಲೈ 1ರಿಂದ ಬದಲಾಗಲಿವೆ 7 ಪ್ರಮುಖ ನಿಯಮಗಳು! LPG, ರೈಲ್ವೆ ಟಿಕೆಟ್‌ನಿಂದ ಆಧಾರ್‌ವರೆಗೆ ಹೊಸ ಅಪ್‌ಡೇಟ್‌

1 Min Read
ದೇಶಪ್ರಮುಖಮನರಂಜನೆವಿದೇಶವೈರಲ್

Pak knocked out ಸೆಲಬ್ರೇಷನ್ ಅಭ್ಯಾಸ ಮಾಡಿದ್ದ ಪಾಕ್ ಟೀಂ ಟಿ20 ವಿಶ್ವಕಪ್‌ನಿಂದಲೇ ಔಟ್! ಫುಲ್ ಟ್ರೋಲ್, ವಿಡಿಯೋ ನೋಡಿ

2 Min Read
ದೇಶಪ್ರಮುಖವಿದೇಶ

Actress Nora ಅತಿ ಹೆಚ್ಚು ಸರ್ಚ್ ಆದ ಬಾಲಿವುಡ್ ಬೆಡಗಿ! ನಂಬರ್ 1 ಆಗಲಿದ್ದಾರೆ ನೋರಾ

2 Min Read
ವೈರಲ್ವಿದೇಶ

ಮದ್ಯದ ನಶೆಯಲ್ಲಿ ರಸ್ತೆಯ ಮಧ್ಯೆ ಮಲಗಿದ ಯುವತಿ! ಕೈಯಲ್ಲಿ ಸಿಗರೇಟ್, ಪಕ್ಕದಲ್ಲೇ ಮದ್ಯದ ಬಾಟಲಿ; ಟ್ರಾಫಿಕ್ ಜಾಮ್ ವಿಡಿಯೋ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?