ಊಟ ಕೇಳಿದ್ದಕ್ಕೆ ಭಿಕ್ಷುಕ ದಂಪತಿಗಳ ಮೇಲೆ ಹಲ್ಲೆ ಮಾಡಿದ ಹೋಟೆಲ್ ಮಾಲೀಕ

newsics.com/ನ್ಯೂಸಿಕ್ಸ್ ಊಟ ಕೇಳಿದರೆಂಬ ಕಾರಣಕ್ಕೆ ಭಿಕ್ಷುಕ ದಂಪತಿಗಳ ಹೋಟೆಲ್ ಮಾಲೀಕನೋರ್ವ ಮನ ಬಂದಂತೆ ನಡೆಸಿದ ಅಮಾನವೀಯ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋವರ್ಧನ ಹೋಟೆಲ್‌ನಲ್ಲಿ ನಡೆದಿದೆ. ಈ ಘಟನೆ ಸಂಬಂಧ ವಾಚ್‌ಮನ್, ಹೋಟೆಲ್ ಮಾಲೀಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಟೆಲ್ ಮಾಲೀಕ ಗಣೇಶ ನಾಯ್ಕ್, ಸೆಕ್ಯೂರಿಟಿ ಗಣೇಶ ಬಂಧಿತ ಆರೋಪಿಗಳು. ರಮೇಶ ದ್ಯಾಮಣ್ಣ ಅಲೆಮಾರಿ ಹಾಗೂ ದ್ಯಾಮವ್ವ ರಮೇಶ ಅಲೆಮಾರಿ ಹಲ್ಲೆಗೊಳಗಾದ ದಂಪತಿಗಳು. ಹಲ್ಲೆಯಿಂದ ಅಸ್ವಸ್ಥಗೊಂಡಿದ್ದು ವೃದ್ಧ ದಂಪತಿಗಳನ್ನು ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. … Continue reading ಊಟ ಕೇಳಿದ್ದಕ್ಕೆ ಭಿಕ್ಷುಕ ದಂಪತಿಗಳ ಮೇಲೆ ಹಲ್ಲೆ ಮಾಡಿದ ಹೋಟೆಲ್ ಮಾಲೀಕ