Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

Share
2 Min Read
SHARE

newsics.com/ನ್ಯೂಸಿಕ್ಸ್

ಮರಳುಗಾರಿಕೆ ಕುರಿತು ಹಲವು ವರ್ಷಗಳಿಂದ ಇದ್ದ ವಿವಾದ ಬಗೆಹರಿಸಲು ತೆರಳಿದ ಬಿಜೆಪಿ ಮುಖಂಡನ ಕಾರಿಗೆ ಎರಡು ಲಾರಿ ಡಿಕ್ಕಿ ಮಾಡಿಸಿ ಬಳಿಕ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ಚತ್ತೀಸಘಡದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿ ಬಿಜೆಪಿ ಮುಖಂಡ ಸೇರಿ ಮೂವರು ತೆರಳುತ್ತಿದ್ದಾಗ ದುರ್ಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಸಜೀವ ದಹನವಾಗಿದ್ದಾರೆ.

ಚತ್ತೀಸಘಡದ ಜನಪದ ಪಂಚಾಯತ್ ಮಾಜಿ ಅಧ್ಯಕ್ಷ ಭಾರತ್ ಸಿಂಗ್ ಅಲಿಯಾಸ್ ಲಲ್ಲಾ ಸಿಂಗ್ ಸಜೀವ ದಹನವಾಗಿದ್ದಾರೆ. ನೌಗಿನ್ ಗ್ರಾಮದಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿತ್ತು. ಎರಡು ಗುಂಪುಗಳ ನಡುವೆ ಜಗಳದಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ದೂರು ದಾಖಲಾಗಿತ್ತು. ಪ್ರಕರಣದಿಂದ ಮರಳುಗಾರಿಕೆಗೆ ಬ್ರೇಕ್ ಬಿದ್ದಿತ್ತು. ಕಳೆದ ಕೆಲ ವರ್ಷಗಳಿಂದ ಈ ಸಮಸ್ಯೆ ಹಾಗೇ ಮುಂದುವರಿದಿತ್ತು. ಈ ಕುರಿತು ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷನಾಗಿ, ಬಿಜೆಪಿ ಮುಖಂಡನಾಗಿ ಈ ಸಮಸ್ಯೆ ಬಗೆಹರಿಸಲು ಎರಡು ಗುಂಪುಗಳ ನಡುವೆ ಮಾತುಕತೆ ನಡೆಸಿದ್ದರು.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುರ್ಷ್ಕರ್ಮಿಗಳು
ಸಂಧಾನ ವಿಚಾರವಾಗಿ ಮಾತನಾಡಲು ಮತ್ತಿಬ್ಬರ ಜೊತೆ ಭಾರತ್ ಸಿಂಗ್ ಕಾರಿನಲ್ಲಿ ತೆರಳಿದ್ದಾರೆ. ಸೋನ್ಹತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ಮರಳು ಮಾಫಿಯಾ ದಂಧೆಕೋರರು ಲಾರಿ ಮೂಲಕ ಆಗಮಿಸಿ ಭಾರತ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಭಾರತ್ ಸಿಂಗ್ ಎಸ್ಕೇಪ್ ಆಗಬಾರದು ಅನ್ನೋ ಕಾರಣಕ್ಕೆ ಮತ್ತೊಂದು ಲಾರಿಯನ್ನು ಬಳಸಿ ಕಾರು ಟ್ರಾಪ್ ಮಾಡಲಾಗಿದೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.

ಕಾರು ಡಿಕ್ಕಿಯಾದ ಪರಿಣಾಮ ಗಾಯಗೊಂಡ ಭಾರತ್ ಸಿಂಗ್ ಸೇರಿದಂತೆ ಮೂವರು ತಕ್ಷಣವೇ ಕಾರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲ ಹೊರಬರದಂತೆ ತಡೆಯಲು ಮತ್ತೊಂದು ಲಾರಿ ಮೂಲಕವೂ ಅಪಘಾತ ಮಾಡಿಸಲಾಗಿದೆ. ಗಾಯಗೊಂಡ ಮೂವರು ಏನಾಗುತ್ತಿದೆ ಅನ್ನೋವಷ್ಟರಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿದೆ. ಈ ಪ್ರಕರಣ ಸಂಬಂಧ 9 ಮಂದಿ ವಿರುದ್ದ ದೂರು ದಾಖಲಾಗಿದೆ. ಘಟನೆಯನ್ನು ಚತ್ತೀಸಘಡ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದೆ.

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

TAGGED:car-trapped him and committed the crimeMiscreants burnt alive BJP leader who went to resolve the problem
Share This Article
Facebook Twitter Copy Link Print
Previous Article ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ
Next Article ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?