Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

Share
2 Min Read
SHARE

newsics.com / ನ್ಯೂಸಿಕ್ಸ್

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ಪಾವತಿಸಲು ವಿಫಲರಾದಾಗ ವಿಧಿಸುವ ಜೈಲು ಶಿಕ್ಷೆಯ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ.

ಇಂತಹ ಪ್ರಕರಣದಲ್ಲಿ ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಇಂತಹ ಸಂದರ್ಭಗಳಲ್ಲಿ ವಿಧಿಸುವ ಜೈಲು ಶಿಕ್ಷೆಯು ಆ ಅಪರಾಧಕ್ಕೆ ನಿಗದಿಪಡಿಸಲಾದ ಗರಿಷ್ಠ ಮೂಲ ಶಿಕ್ಷೆಯ ನಾಲ್ಕನೇ ಒಂದು ಭಾಗವನ್ನು ಮೀರಬಾರದು. ಅಂದರೆ, 6 ತಿಂಗಳಿಗಿಂತ ಅಧಿಕವಿರುವಂತಿಲ್ಲ ಎಂದು ಪೀಠ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 65 ಮತ್ತು ನೂತನ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 8(3) ಅನ್ನು ಉಲ್ಲೇಖಿಸಿದ ನ್ಯಾಯಾಲಯವು ಶಿಕ್ಷೆಯ ಮಿತಿಯನ್ನು ವಿವರಿಸಿದೆ. “ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ಚೆಕ್ ಬೌನ್ಸ್ ಅಪರಾಧಕ್ಕೆ ಗರಿಷ್ಠ 2 ವರ್ಷಗಳ ಜೈಲು ಶಿಕ್ಷೆ ಅಥವಾ ಚೆಕ್ ಮೊತ್ತದ ದುಪ್ಪಟ್ಟು ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಆದ್ದರಿಂದ, ಐಪಿಸಿ ಸೆಕ್ಷನ್ 65 ರ ನಿಯಮದಂತೆ, ದಂಡ ಪಾವತಿಸದಿದ್ದಾಗ ವಿಧಿಸುವ ಜೈಲು ಶಿಕ್ಷೆಯು ಗರಿಷ್ಠ ಶಿಕ್ಷೆಯ (2 ವರ್ಷ) 1/4 ರಷ್ಟು, ಅಂದರೆ 6 ತಿಂಗಳನ್ನು ಮೀರುವಂತಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ದಂಡ ಪಾವತಿಸದಿದ್ದಾಗ ವಿಧಿಸುವ ಜೈಲು ಶಿಕ್ಷೆಯು ಹೆಚ್ಚುವರಿ ಶಿಕ್ಷೆಯಲ್ಲ, ಬದಲಾಗಿ ಅದೊಂದು ದಂಡ ವಸೂಲಿಗೆ ಇರುವ ಒತ್ತಾಯದ ಕ್ರಮವಷ್ಟೇ. ಇದನ್ನು ಮೂಲ ಶಿಕ್ಷೆಯನ್ನು ಹೆಚ್ಚಿಸುವ ಅಸ್ತ್ರವಾಗಿ ಬಳಸಬಾರದು. ಕೇವಲ ಹಣ ಪಾವತಿಸಲು ಅಸಮರ್ಥನಾದ ಎಂಬ ಕಾರಣಕ್ಕೆ ವ್ಯಕ್ತಿಯನ್ನು ದೀರ್ಘಕಾಲ ಬಂಧನದಲ್ಲಿಡುವುದು ಶಾಸಕಾಂಗದ ಆಶಯಕ್ಕೆ ವಿರುದ್ಧವಾಗಿದೆ.

“ಒಂದು ವೇಳೆ ಆರೋಪಿಯ ಬಳಿ ದಂಡ ಕಟ್ಟಲು ಹಣವಿದ್ದರೆ ಆತ ಜೈಲಿನಲ್ಲಿ ಕೊಳೆಯಲು ಇಷ್ಟಪಡುತ್ತಿರಲಿಲ್ಲ. ಹಣವಿಲ್ಲದ ಕಾರಣಕ್ಕೆ ಆತನನ್ನು ಜೈಲಿನಲ್ಲಿರಿಸುವುದರಿಂದ ಯಾರಿಗೂ ಲಾಭವಿಲ್ಲ. ಇದರಿಂದ ದೂರುದಾರರಿಗೆ ಕೇವಲ ವಿಕೃತ ಹಾಗೂ ದಂಡನಾತ್ಮಕ ತೃಪ್ತಿ ಸಿಗಬಹುದೇ ಹೊರತು ಕಾನೂನಿನಲ್ಲಿ ಇದಕ್ಕೆ ಮಾನ್ಯತೆಯಿಲ್ಲ” ಎಂದು ಪೀಠ ಕಟುವಾಗಿ ನುಡಿದಿದೆ.

ಅರ್ಜಿದಾರನು 2017ರಲ್ಲಿ ಕಂಪನಿಯೊಂದರಿಂದ 10 ಕೋಟಿ ರೂ. ಸಾಲ ಪಡೆದಿದ್ದ. ಈ ಒಂದೇ ವಹಿವಾಟಿಗೆ ಸಂಬಂಧಿಸಿದಂತೆ 50 ಲಕ್ಷ ರೂ., 3.5 ಕೋಟಿ ರೂ. ಮತ್ತು 5 ಕೋಟಿ ರೂ. ಮೊತ್ತದ ಮೂರು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿದ್ದವು. ದಂಡ ಪಾವತಿಸದ ಕಾರಣಕ್ಕೆ ಪ್ರತಿಯೊಂದು ಪ್ರಕರಣದಲ್ಲೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಲಾ 3 ತಿಂಗಳ ಡೀಫಾಲ್ಟ್ ಜೈಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಆತ ಈಗಾಗಲೇ ದಂಡ ಪಾವತಿಸದ ಕಾರಣಕ್ಕಾಗಿ 6 ತಿಂಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದ. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದ.
ಮೂರು ಪ್ರಕರಣಗಳಲ್ಲಿ ವಿಧಿಸಲಾದ ಶಿಕ್ಷೆಯನ್ನು ಸಮೀಕರಿಸಿ, ಆರೋಪಿಯು ಈಗಾಗಲೇ ಜೈಲಿನಲ್ಲಿ ಕಳೆದ ಸಮಯವನ್ನೇ ಶಿಕ್ಷೆ ಎಂದು ಪರಿಗಣಿಸಲಾಗಿದೆ” ಎಂದು ಆದೇಶ ನೀಡಿದ್ದಾರೆ. ಅಲ್ಲದೆ, ಆದೇಶದ ಪ್ರತಿ ತಲುಪಿದ 4 ದಿನಗಳ ಒಳಗೆ ಅರ್ಜಿದಾರನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ಈ ತೀರ್ಪು ಕೇವಲ ಜೈಲು ಶಿಕ್ಷೆಯ ಮಿತಿಗೆ ಸಂಬಂಧಿಸಿದ್ದಾಗಿದ್ದು, ಬಾಕಿ ಹಣದ ವಸೂಲಾತಿಗಾಗಿ ದೂರುದಾರರು ಅಥವಾ ರಾಜ್ಯ ಸರ್ಕಾರವು ನಡೆಸುವ ಕಾನೂನು ಪ್ರಕ್ರಿಯೆಗಳಿಗೆ ಈ ಆದೇಶ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

TAGGED:Jail sentence cannot exceed 6 months in cheque bounce cases: High Court verdict
Share This Article
Facebook Twitter Copy Link Print
Previous Article No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!
Next Article Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

Popular Posts

Father’s Day 2026: ತಮ್ಮ ತಂದೆಯ ಹೆಜ್ಜೆಗುರುತುಗಳಲ್ಲಿ ಸಾಗುತ್ತಿರುವ ದಕ್ಷಿಣ ಭಾರತದ 7 ಸ್ಟಾರ್ ನಟರು

2 Min Read

ನಾಳೆ NEET-UG ಮರುಪರೀಕ್ಷೆ: ಇಂದು ದೇಶವ್ಯಾಪಿ ಮೆಗಾ ಮಾಕ್‌ಡ್ರಿಲ್‌, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read

ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

1 Min Read

You Might Also Like

ಪ್ರಮುಖಮನರಂಜನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್

2 Min Read
ಕರ್ನಾಟಕಪ್ರಮುಖ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read
ಪ್ರಮುಖಕರ್ನಾಟಕಮನರಂಜನೆ

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?