newsics.com / ನ್ಯೂಸಿಕ್ಸ್
ಕಾಸರಗೋಡಿನಲ್ಲಿ 16 ವರ್ಷದ ಬಾಲಕಿ ಮೇಲೆ ಮನೆಯಲ್ಲಿ ಮಲಗಿದ್ದಾಗ ಅತ್ಯಾಚಾರ ನಡೆಸಿದ ಪ್ರಕರಣದ ಆಘಾತಕಾರಿ ವಿವರಗಳು ಈಗ ದೇವರಸ್ವಂತ ನಾಡು ಕೇರಳಂ ಅನ್ನು ಬೆಚ್ಚಿ ಬೀಳಿಸಿದೆ. 25 ವರ್ಷದ ಸ್ನೇಹಾ ಮರ್ಲಿನ್ (Sneha Merlin) ಬಾಲಕಿಯ (Girl) ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎನ್ನಲಾಗಿದೆ.
16 ವರ್ಷದ ಬಾಲಕಿಯ ತಾಯಿಯ ಸ್ನೇಹಿತೆಯಾಗಿರುವ ಸ್ನೇಹಾ ಮರ್ಲಿನ್ ಒಂದು ವರ್ಷದಿಂದ ಬಾಲಕಿಯ ಮನೆಯಲ್ಲಿ ವಾಸಿಸುತ್ತಿದ್ದರು. ಬಾಲಕಿಯ ಹೇಳಿಕೆಯ ಪ್ರಕಾರ, ಆಕೆಯ ತಾಯಿ ಮನೆಯಲ್ಲಿದ್ದಾಗಲೂ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.
ಮಾದಕವಸ್ತು ಕಳ್ಳಸಾಗಣೆ ಪ್ರಕರಣದ ಆರೋಪಿಯಾಗಿರುವ ಸ್ನೇಹಾ ಮತ್ತು ಹುಡುಗಿಯ ತಾಯಿ ಕಣ್ಣೂರು ಜೈಲಿನಲ್ಲಿ ಭೇಟಿಯಾಗಿದ್ದಾರೆ.
16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಂದೆ ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಸ್ನೇಹಾಳನ್ನು ಆಶ್ರಯ ಗೃಹಕ್ಕೆ ಸ್ಥಳಾಂತರಿಸಿದ ನಂತರ ಬಾಲಕಿ ತನ್ನ ಮೇಲಿನ ದೌರ್ಜನ್ಯವನ್ನು ಬಹಿರಂಗಪಡಿಸಿದ್ದಾಳೆ.
ಮನೆಯಲ್ಲಿ ಮಲಗಿದ್ದಾಗ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೂರಿನ ಮೇರೆಗೆ 25 ವರ್ಷದ ಯುವತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇಲ್ಪರಂಬ ಪೊಲೀಸರು ಸ್ನೇಹಾ ಮೆರ್ಲಿನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಸ್ನೇಹಾ ಮೆರ್ಲಿನ್ ವಿರುದ್ಧದ ಪೋಕ್ಸೋ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.
ಘಟನೆಯ ಸಮಯದಲ್ಲಿ, ಹುಡುಗಿ ಭಯದಿಂದಾಗಿ ಯಾರಿಗೂ ಈ ಸಂಗತಿಯನ್ನು ಬಹಿರಂಗಪಡಿಸಲಿಲ್ಲ ಎನ್ನಲಾಗಿದೆ. ಕೌನ್ಸೆಲಿಂಗ್‌ಗೆ ಒಳಪಡುವಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಲ್ಲಿಪರಂಬದ ತಳಿಪರಂಬದ ಮೂಲದ ಸ್ನೇಹಾ ಮೆರ್ಲಿನ್ ವಿರುದ್ಧ ಮೂರು ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಈ ಮೂರೂ ಪ್ರಕರಣಗಳು ತಳಿಪರಂಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಬಾಲಕಿ ಬ್ಯಾಗ್ನಲ್ಲಿತ್ತು ಅಶ್ಲೀಲ ಚಿತ್ರಗಳಿದ್ದ ಮೊಬೈಲ್
12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸ್ನೇಹಾ ಮೆರ್ಲಿನ್ ಅವರನ್ನು ಮಾರ್ಚ್ 14, 2025 ರಂದು ಬಂಧಿಸಲಾಯಿತು.
ಶಾಲಾ ವಿದ್ಯಾರ್ಥಿನಿಯ ಬ್ಯಾಗ್‌ನಿಂದ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೊಬೈಲ್ ಫೋನ್ ಅನ್ನು ಶಿಕ್ಷಕರು ವರದಿ ಮಾಡಿದ ನಂತರ ಚೈಲ್ಡ್ ಲೈನ್ ನಡೆಸಿದ ಕೌನ್ಸೆಲಿಂಗ್ ಸಮಯದಲ್ಲಿ ದೌರ್ಜನ್ಯದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿತು.
I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ
Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ
Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ