newsics. com
ನವದೆಹಲಿ: ಆರನೇ ತರಗತಿಯ ವಿದ್ಯಾರ್ಥಿಯೋರ್ವ ಶಾಲೆಗೆ ಪಿಸ್ತೂಲ್ ಒಯ್ದು ಶಿಕ್ಷಕರನ್ನೆಲ್ಲ ಗಾಬರಿಗೊಳಿಸಿರುವ ಘಟನೆ ನಡೆದಿದೆ.
ದೀಪಕ್ ವಿಹಾರ್‌ನ ಗ್ರೀನ್ ವ್ಯಾಲಿ ಶಾಲೆಯ ೧೦ ವರ್ಷದ ವಿದ್ಯಾರ್ಥಿಯೋರ್ವ ಪಿಸ್ತೂಲನ್ನ ಶಾಲೆಗೆ ಒಯ್ದಿದ್ದ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ವಿಷಯ ತಿಳಿದು ಗಾಬರಿಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಶಾಲೆಗೆ ಆಗಮಿಸಿ ವಿದ್ಯಾರ್ಥಿಯ ಚೀಲದಿಂದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.
ಬಂದೂಕು ವಿದ್ಯಾರ್ಥಿಯ ತಂದೆಗೆ ಸೇರಿದ್ದಾಗಿದ್ದು, ಪರವಾನಗಿ ಇದೆ ಎನ್ನಲಾಗಿದೆ. ತಂದೆ ಇತ್ತೀಚೆಗೆ ಮೃತರಾಗಿದ್ದು, ಪೊಲೀಸ್ ಠಾಣೆಗೆ ಜಪ್ತಿಮಾಡಬೇಕೆಂದು ತಾಯಿ ಪಿಸ್ತೂಲನ್ನು ಒಂದೆಡೆ ತೆಗೆದಿಟ್ಟಿದ್ದರೆನ್ನಲಾಗಿದೆ. ಆದರೆ ಆಟಿಕೆ ಎಂದುಕೊಂಡು ವಿದ್ಯಾರ್ಥಿ ಅದನ್ನ ಶಾಲೆಗೆ ಒಯ್ದಿದ್ದ ಎಂದು ತಿಳಿದುಬಂದಿದೆ.