Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ
ಕರ್ನಾಟಕದೇಶಪ್ರಮುಖ

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

Share
3 Min Read
SHARE

newsics.com/ನ್ಯೂಸಿಕ್ಸ್

ಡಿ.ಕೆ ಶಿವಕುಮಾರ್ (DK Shivakumar)  ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲ ಸಚಿವ ಸಂಪುಟ ನಡೆಸಿದ್ದು, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ ಸೇರಿದಂತೆ ಪ್ರಮುಖ ಆರು ಮಹತ್ವದ  ಘೋಷಣೆಗಳನ್ನ ಮಾಡಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಉದ್ಯೋಗದ ಸಮಸ್ಯೆ ನಿವಾರಣೆ, ರಸ್ತೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ಹಾಗೂ 2,500 ಚ.ಅಡಿ ವಿಸ್ತೀರ್ಣ ಕಟ್ಟಡಕ್ಕೆ ಅರ್ಜಿ ಹಾಕಿದವರಿಗೆ ರಿಲೀಫ್ ನೀಡಿದ್ದಾರೆ. ಇನ್ನು ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಬಿ ಖಾತಾಯಿಂದ ಎ ಖಾತೆ ಯೋಜನೆ ರಾಜ್ಯಕ್ಕೆ ವಿಸ್ತರಣೆ ಮಾಡುವುದಾಗಿ ಡಿಕೆಶಿ ಘೋಷಣೆ ಮಾಡಿದರು.

ಡಿಕೆಶಿಯ ಮೊದಲ ಘೋಷಣೆಗಳು

  • ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
  • ರಸ್ತೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ಘೋಷಣೆ
  • 2,500 ಚದರ ಅಡಿವರೆಗೂ ಒಸಿ ವಿನಾಯಿತಿ. ಇದರೊಂದಿಗೆ 2,500 ಚ.ಅಡಿ ವಿಸ್ತೀರ್ಣ ಕಟ್ಟಡಕ್ಕೆ ಅರ್ಜಿ ಹಾಕಿದವರಿಗೆ ರಿಲೀಫ್.
  • ಪ್ರತಿ‌ ಪಂಚಾಯತ್ ಗೂ ಭಾರತ್ ಜೋಡೋ ಯುವಕ ಸಂಘ ಸ್ಥಾಪನೆಗೆ 10 ಸಾವಿರ ರೂಪಾಯಿ ಘೋಷಣೆ.
  • ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿದ್ದವರಿಗೆ private employment exchange centre ಸ್ಥಾಪನೆ.
  • ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಬಿ ಖಾತಾಯಿಂದ ಎ ಖಾತೆ ಯೋಜನೆ ರಾಜ್ಯಕ್ಕೆ ವಿಸ್ತರಣೆ

ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಫ್ರೀ ಬಸ್​ ಪಾಸ್​ ನೀಡಲಾಗುವುದು ಎಂದು ಘೋಷಿಸಿದರು.  ಇದರೊಂದಿಗೆ ಬೇರೆ ಊರಿಗೆ ಹೋಗಿ ವ್ಯಾಸಂಗ ಮಾಡುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇನ್ನು  ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಬಿ ಖಾತಾಯಿಂದ ಎ ಖಾತೆ ಯೋಜನೆ ರಾಜ್ಯಕ್ಕೆ ವಿಸ್ತರಣೆ ಮಾಡುವುದಾಗಿ ಡಿಕೆಶಿ ಘೋಷಣೆ ಮಾಡಿದರು.

ಆ ಶುಭ ಗಳಿಗೆ, ಮುಹೂರ್ತ ಬಂತು

ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ ಶುಭ ಗಳಿಗೆ, ಶುಭ ಮುಹೂರ್ತ ಬರುತ್ತೆ ಎಂದು ಹೇಳುತ್ತಿದ್ದ ಇವತ್ತು ಸಂಜೆ 4.15ಕ್ಕೆ ಆ ಶುಭ ಗಳಿಗೆ, ಮುಹೂರ್ತ ಬಂತು. ಇವತ್ತು ಹೊಸ ದಿನ, ಹೊಸ ಕೆಲಸ, ಅವಕಾಶ ಆರಂಭಿಸುವ ದಿನ. ಇನ್ನೆರಡು ವರ್ಷಗಳಲ್ಲಿ ಹೊಸ ಅವಕಾಶ ಹುಡುಕುತ್ತಿದ್ದೇನೆ. ರಾಜ್ಯ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ರೈತರು, ಕಾರ್ಮಿಕರು, ಎಲ್ಲ ವರ್ಗದ ಜನರಿಗೆ ಕಳೆದ 6 ತಿಂಗಳಿಂದ ಕಾರ್ಯಕ್ರಮಗಳನ್ನ ರೂಪಿಸಿದ್ದೇನೆ ಎಂದು ಹೇಳಿದರು. ಈ ಮೂಲಕ ಮಹತ್ವದ ಕಾರ್ಯಮಗಳ ಘೋಷಣೆ ಮಾಡುವ ಸುಳಿವು ನೀಡಿದರು.

,ರಾಜ್ಯದ ಜನ ನನ್ನ ಮೇಲೆ ಅಪಾರ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ. ಈ ಹಿಂದೆ ನನ್ನ ವಿರುದ್ಧ ಟೀಕೆಗಳು ಕೂಡ ಬಂದಿವೆ. ನನ್ನ ರಾಜಕೀಯ ಅನುಭವ ಬಳಸಿಕೊಂಡು ಕೆಲಸ ಮಾಡುತ್ತೇನೆ. ಅನೇಕ ರಾಜಕೀಯ ತಂತ್ರಗಳಿಗೂ ನಾನು ಸಿಲುಕಿದ್ದೇನೆ. ತಿಹಾರ್​ ಜೈಲಿಗೂ ಸಹ ಹೋಗಿ ಬಂದಿದ್ದೇನೆ ಎಂದರು.

ಈ ಸಿಎಂ ಕುರ್ಚಿ ನನ್ನದಲ್ಲ, ಇದು ನಾಡಿನ ಜನತೆಯದ್ದು. ಹೈಕಮಾಂಡ್​ ನಾಯಕರು ನನಗೆ ಈ ಅವಕಾಶವನ್ನ ಕೊಟ್ಟಿದ್ದಾರೆ. ಸ್ವಲ್ಪ ತಡವಾಯಿತು ಆದರೂ ಶುಭ ಗಳಿಗೆ ಬಂದಿದ್ದು, ಎಲ್ಲರೂ ಜೊತೆಗೆ ಸೇರಿ ಕೆಲಸ ಮಾಡುತ್ತೇವೆ. ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವನು ನಾನು. ನಮ್ಮ ಸಂಪುಟ ಸರ್ವ ಜನಾಂಗದ ಶಾಂತಿಯ ತೋಟ ಇದ್ದಂತೆ ಎಂದು ಹೇಳಿದರು.

ಎಲ್ಲವೂ ಕಲೆಕ್ಟಿವ್ ಡಿಸಿಷನ್ ಆಗಿರುತ್ತೆ

ಹೈಕಮಾಂಡ್ ಹೇಳಿದರೆ, ವರಿಷ್ಠರು ಹೇಳಿದರೆ ಐದು ನಿಮಿಷವೂ ಕಾಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು. ಅದರಂತೆ ವರಿಷ್ಠರು ಕೊಟ್ಟ ಸೂಚನೆ ಮೇರೆಗೆ ಅವರೂ ಸ್ಥಾನವನ್ನು ನನಗೆ ಬಿಟ್ಟು ಕೊಟ್ಟಿದ್ದಾರೆ. ಗ್ರಾಮೀಣ ಹಾಗೂ ನಗರದ ಜನರ ಸಮಸ್ಯೆ ನನಗೆ ಗೊತ್ತಿದೆ. ನಾನು ಎಲ್ಲ ಸಮಸ್ಯೆಗಳನ್ನು ಬಲ್ಲೆ. ಮುಂದೆ ಏನೇ ನಿರ್ಧಾರ ತೆಗೆದುಕೊಂಡರೂ ಅದು ನನ್ನ ನಿರ್ಧಾರ ಆಗಿರಲ್ಲ. ಬದಲಾಗಿ ನನ್ನ ಇಡೀ ಸಂಪುಟದ ನಿರ್ಧಾರ ಆಗಿರುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಎಲ್ಲವೂ ಕಲೆಕ್ಟಿವ್ ಡಿಸಿಷನ್ ಆಗಿರುತ್ತದೆ. ಇವತ್ತು 14 ಜನ ಕ್ಯಾಬಿನೆಟ್ ಗೆ ಸೇರಿದ್ದು, ಸರ್ವ ಜನಾಂಗದ ಶಾಂತಿಯ ತೋಟವನ್ನು ಕ್ಯಾಬಿನೆಟ್ ಬಿಂಬಿಸುತ್ತಿದೆ. ರಾಜ್ಯದಲ್ಲಿ ಉತ್ತಮ ಬಲಿಷ್ಟ ನಾಯಕತ್ವವನ್ನು ಕೊಟ್ಟು ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

TAGGED:Free bus passes for school and college students: New CM DK 6 makes a grand announcement
Share This Article
Facebook Twitter Copy Link Print
Previous Article ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ
Next Article New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

Popular Posts

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

You Might Also Like

ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?