Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ
ಲೈಫ್‌ಸ್ಟೈಲ್

ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಟೂತ್‌ಬ್ರಷ್‌ನಿಂದ ಹಿಡಿದು ಸ್ಕಿನ್‌ಕೇರ್‌ ಉತ್ಪನ್ನಗಳವರೆಗೆ ನಾವು ನಮ್ಮ ನಿತ್ಯ ಬಳಕೆಯ ಕೆಲವೊಂದು ವಸ್ತುಗಳನ್ನು ಬಾತ್‌ರೂಮ್‌ನಲ್ಲಿ ಇಟ್ಟುಬಿಡುತ್ತೇವೆ. ಆದರೆ ಈ ರೀತಿ ಎಲ್ಲಾ ವಸ್ತುಗಳನ್ನು ಸ್ನಾನಗೃಹದಲ್ಲಿ ಸ್ಟೋರ್‌ ಮಾಡಬಾರದಂತೆ, ಏಕೆಂದರೆ  ಸ್ನಾನಗೃಹದ ತೇವಯುಕ್ತ ಮತ್ತು ಮುಚ್ಚಿದ ವಾತಾವರಣದಲ್ಲಿ, ಕೆಲವು ವಸ್ತುಗಳು ಕ್ರಮೇಣ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸಂತಾನೋತ್ಪತ್ತಿಯ ಸ್ಥಳಗಳಾಗುತ್ತವೆ, ಇದು ಸೋಂಕುಗಳು ಮತ್ತು ಅಲರ್ಜಿಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಅಲ್ಲದೆ ಬಾತ್‌ರೂಮ್‌ನ ತೇವಾಂಶವು ಕೆಲವೊಂದು ವಸ್ತುಗಳನ್ನು ಬಹುಬೇಗನೆ ಹಾಳು ಮಾಡುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಕೆಲವೊಂದು ವಸ್ತುಗಳನ್ನು ಬಾತ್‌ರೂಮ್‌ನಲ್ಲಿ ಸ್ಟೋರ್‌ ಮಾಡುವುದನ್ನು ತಪ್ಪಿಸಿ.

ಈ ವಸ್ತುಗಳನ್ನು ಬಾತ್‌ರೂಮ್‌ನಲ್ಲಿ ಇಡಬೇಡಿ:

ಟವೆಲ್‌ಗಳು ಮತ್ತು ಕೊಳಕು ಬಟ್ಟೆಗಳು: ಬಾತ್‌ರೂಮ್‌ನಲ್ಲಿ ಟವೆಲ್‌ ಮತ್ತು ಕೊಳಕು ಬಟ್ಟೆಗಳನ್ನು ಇಡಬಾರದು. ಇಲ್ಲಿನ ತೇವಯುಕ್ತ ವಾತಾವರಣವು ಟವೆಲ್‌ ಮತ್ತು ಕೊಳಕು ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸಂತಾನೋತ್ಪತ್ತಿ ಮಾಡಲು ಸೂಕ್ತ ಸ್ಥಳವನ್ನು ಒದಗಿಸುತ್ತದೆ. ಅದರಲ್ಲೂ ಬಳಕೆ ಮಾಡಿದ ಟವೆಲ್‌ಗಳನ್ನು ಒಣಗಿಸುವ ಸಲುವಾಗಿ ಬಾತ್‌ರೂಮ್‌ನಲ್ಲಿಯೇ ನೇತು ಹಾಕಿದರೆ ಕೋಲಿಯಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಟವೆಲ್‌ಗಳಲ್ಲಿ ಸಂಗ್ರಹವಾಗಬಹುದು. ಇದು ಚರ್ಮದ ಅಲರ್ಜಿಗಳು, ಶಿಲೀಂಧ್ರಗಳ ಸೋಂಕುಗಳು ಮತ್ತು ಮೊಡವೆಗಳಿಗೆ ಕಾರಣವಾಗಬಹುದು.

ಮೇಕಪ್ ಮತ್ತು ಸ್ಕಿನ್‌ಕೇರ್‌ ಉತ್ಪನ್ನಗಳು: ಹೆಚ್ಚಿನ ಮಹಿಳೆಯರು ಸ್ನಾನಗೃಹದ ಕನ್ನಡಿಯ ಮುಂದೆ ಮೇಕಪ್‌ ಮತ್ತು ಸ್ಕಿನ್‌ಕೇರ್‌ ಉತ್ಪನ್ನಗಳನ್ನು ಇಟ್ಟುಬಿಡುತ್ತಾರೆ. ಬಾತ್‌ರೂಮ್‌ನ ಶಾಖ ಮತ್ತು ತೇವಾಂಶ ಈ ಉತ್ಪನ್ನಗಳ ವಿನ್ಯಾಸವನ್ನು ಹಾಳು ಮಾಡುತ್ತದೆ. ಅಲ್ಲದೆ ಲಿಕ್ವಿಡ್ ಫೌಂಡೇಶನ್ ಮತ್ತು ಲಿಪ್ಸ್ಟಿಕ್‌ಗಳಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗಬಹುದು. ಇದು ಚರ್ಮದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮೇಕಪ್‌ ಉತ್ಪನ್ನಗಳನ್ನು ಬಾತ್‌ರೂಮ್‌ನಲ್ಲಿ ಇಡಬೇಡಿ.

ಟೂತ್ ಬ್ರಷ್: ಬಹುತೇಕ ಎಲ್ಲರೂ ಟೂತ್‌ಬ್ರಷ್‌ಗಳನ್ನು ಸ್ನಾನಗೃಹದಲ್ಲೇ ಸಂಗ್ರಹಿಸಿಡುತ್ತಾರೆ. ಟೂತ್‌ಬ್ರಷ್‌ಗಳನ್ನು ಯಾವಾಗಲೂ ಒಣ ಸ್ಥಳಗಳಲ್ಲಿ ಸಂಗ್ರಹಿಸಿಡುವುದು ಸೂಕ್ತ ಏಕೆಂದರೆ ಸ್ನಾನಗೃಹದ ತೇವಾಂಶ ಹಲ್ಲುಜ್ಜುವ ಬ್ರಷ್‌ಗಳಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಇದು ಬಾಯಿಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಔಷಧಿಗಳು: ಸ್ನಾನಗೃಹದಲ್ಲಿ ಔಷಧಿಗಳನ್ನು ಸಂಗ್ರಹಿಸಿಡಬಾರದು. ಬಾತ್‌ರೂಮ್‌ನ ತಾಪಮಾನವು ನಿರಂತರವಾಗಿ ಏರಿಳಿತಗೊಳ್ಳುತ್ತದೆ. ಇಲ್ಲಿನ ಆರ್ದ್ರತೆ ಮತ್ತು ಶಾಖವು ಔಷಧಿಗಳು ತಮ್ಮ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳಲು, ಹಾಳಾಗಲು ಕಾರಣವಾಗಬಹುದು. ಮಲಗುವ ಕೋಣೆಯಲ್ಲಿ ಸುರಕ್ಷಿತ ಕ್ಯಾಬಿನೆಟ್‌ನಲ್ಲಿ ಔಷಧಿಗಳನ್ನು ಸಂಗ್ರಹಿಸುವುದು ಯಾವಾಗಲೂ ಉತ್ತಮ.

ಜಲನಿರೋಧಕವಲ್ಲದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು: ಅನೇಕ ಜನರು ಸಂಗೀತ ಕೇಳಲು ತಮ್ಮ ಫೋನ್‌ಗಳು ಅಥವಾ ಸ್ಪೀಕರ್‌ಗಳನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗುತ್ತಾರೆ. ವಾಟರ್‌ಪ್ರೂಫ್‌ ರೇಟಿಂಗ್‌ಗಳಿಲ್ಲದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ನೀರು ಬಿದ್ದರೆ ಅವುಗಳ ಆಂತರಿಕ ಸರ್ಕ್ಯೂಟ್‌ಗಳನ್ನು ಹಾನಿಗೊಳಗಾಗುತ್ತದೆ. ಇದರಿಂದ ಗ್ಯಾಜೆಟ್‌ಗಳು ಬೇಗನೇ ಹಾಳಾಗುತ್ತವೆ ಅಲ್ಲದೆ ಇದು ಶಾರ್ಟ್ ಸರ್ಕ್ಯೂಟ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ.

ರೇಜರ್‌ಗಳು ಮತ್ತು ಬ್ಲೇಡ್‌ಗಳು: ಸ್ನಾನಗೃಹದ ತೇವಾಂಶದ ಕಾರಣದಿಂದಾಗಿ ಇಲ್ಲಿ ರೇಜರ್‌ಗಳು ಮತ್ತು ಬ್ಲೇಡ್‌ಗಳನ್ನು ಸಂಗ್ರಹಿಸಿಟ್ಟರೆ ಅವು ಬೇಗನೆ ತುಕ್ಕು ಹಿಡಿಯುತ್ತವೆ. ಅಂತಹ ರೇಜರ್‌ನಿಂದ ಶೇವಿಂಗ್ ಮಾಡುವುದರಿಂದ ಚರ್ಮದ ಕಡಿತ ಮತ್ತು ಸೋಂಕಿನ ಅಪಾಯ ಉಂಟಾಗುತ್ತದೆ.

ಆಭರಣಗಳು: ಚಿನ್ನ, ಬೆಳ್ಳಿ ಅಥವಾ ಕೃತಕ ಆಭರಣಗಳನ್ನು ಸ್ನಾನಗೃಹದಲ್ಲಿ ಇಡುವುದರಿಂದ ಅವು ಮಸುಕಾಗಬಹುದು. ತೇವಾಂಶವು ಲೋಹಗಳ ಆಕ್ಸಿಡೀಕರಣ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಇದರಿಂದಾಗಿ ಅವು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ. ನಿಮ್ಮ ಅಮೂಲ್ಯವಾದ ಆಭರಣಗಳನ್ನು ಯಾವಾಗಲೂ ಡ್ರೆಸ್ಸಿಂಗ್ ಟೇಬಲ್ ಅಥವಾ ಲಾಕರ್‌ನಲ್ಲಿ ಸಂಗ್ರಹಿಸಿ.

ಡಿಕೆಶಿ ಕ್ಯಾಬಿನೆಟ್‌ನ 14 ಸಂಭಾವ್ಯ ಸಚಿವರು ಇವರೇ ನೋಡಿ!

TAGGED:Don't keep these things in the bathroom by mistake
Share This Article
Facebook Twitter Copy Link Print
Previous Article ಡಿಕೆಶಿ ಕ್ಯಾಬಿನೆಟ್‌ನ 14 ಸಂಭಾವ್ಯ ಸಚಿವರು ಇವರೇ ನೋಡಿ!
Next Article DK CLP leader ಡಿಕೆ ಸಿಎಲ್‌ಪಿ ನಾಯಕ: ಸಿಎಂ ಸ್ಥಾನಕ್ಕೆ ಅಧಿಕೃತ ಮುದ್ರೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?