newsics.com/ನ್ಯೂಸಿಕ್ಸ್
ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಧನ್ಯವಾದ ತಿಳಿಸಲು ದೆಹಲಿಗೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಡರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ ದೆಹಲಿ ಪ್ರವಾಸದ ವೇಳೆ ಅವರು ಸಚಿವರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಸಿಎಂ ಪದಗ್ರಹಣದ ಸಂದರ್ಭದಲ್ಲಿ ಯಾರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂಬ ಗೊಂದಲಕ್ಕೆ ತೆರೆ ಎಳೆಯಲು ದೆಹಲಿಗೆ ಹೋಗುವಾಗಲೇ ಪಟ್ಟಿಯೊಂದನ್ನು ರೆಡಿ ಮಾಡಿಕೊಂಡಿದ್ದ ಡಿಕೆಶಿ, ಹೈಕಮಾಂಡ್ ಜೊತೆ ಚರ್ಚಿಸಿ ಅದನ್ನು ಫೈನಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದೇವನಹಳ್ಳಿ ಏರ್ಪೋರ್ಟ್ನಿಂದ ಬೆಂಗಳೂರಿನ ಸದಾಶಿವನಗರದ ಮನೆಗೆ ಹೊರಟ ಡಿಕೆ ಶಿವಕುಮಾರ್ ಅವ್ರು ತಡರಾತ್ರಿಯೇ ಮಹತ್ವದ ಮೀಟಿಂಗ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸದಾಶಿವನಗರದ ನಿವಾಸಕ್ಕೆ ಆಗಮಿಸಿದ್ದ ಸಚಿವ ಚಲುವರಾಯಸ್ವಾಮಿ, ಶಾಸಕ ರವಿ ಗಾಣಿಗ ಹಾಗೂ MLC ಗೂಳಿಗೌಡ ಹಾಗೂ ಕದಲೂರು ಉದಯ್ ಜೊತೆ ಸಭೆ ನಡೆದಿದೆ.
ಮಧ್ಯರಾತ್ರಿ ಡಿಕೆಶಿ ಜೊತೆ ಸುಮಾರು 1 ಗಂಟೆಗಳ ಕಾಲ ಮಂಡ್ಯ ಭಾಗದ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ. ಸಿಎಲ್ಪಿ ಸಭೆ, ಸಚಿವ ಸ್ಥಾನದ ವಿಚಾರ ಸೇರಿ ಪ್ರಮಾಣವಚನದ ಸಿದ್ದತೆ ಹಾಗೂ ಹೈಕಮಾಂಡ್ ನಾಯಕರೊಂದಿಗೆ ಭೇಟಿ ಕುರಿತಾಗಿ ಡಿಕೆಶಿ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದೆಂಥ ವಿಚಿತ್ರ? ಮಗಳ ಕೊಲೆ ಆರೋಪದಲ್ಲಿ ತಂದೆ, ಮಗನಿಗೆ ಜೈಲು, ಮರಳಿ ಬಂದ ಯುವತಿ!