newsics.com
ಯುವಿ ರೇಡಿಯೇಷನ್ನಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಹೆಚ್ಚು ಜನರು ಸನ್ಸ್ಕ್ರೇನ್ನನ್ನು ಬಳಸುತ್ತಾರೆ. ಮುಖದ ಕಾಂತಿಯೂ ಕಡುಬಿಸಿಲನಲ್ಲೂ ಕೆಡದಂತೆ ಕಾಪಾಡಿಕೊಳ್ಳಲು ಹಲವು ರೀತಿಯ ಹಲವು ಬ್ರ್ಯಾಂಡ್ ಗಳ ಸನ್ ಸ್ಕ್ರೀನ್ ಗಳನ್ನು ಮಹಿಳೆಯರು ಉಪಯೋಗಿಸುತ್ತಾರೆ. ಆದ್ರೆ ಇತ್ತೀಚೆಗೆ ಸ್ವತಂತ್ರವಾಗಿ ಲ್ಯಾಬರೋಟರಿ ಒಂದು ಕೈಗೊಂಡ ಸಂಶೋಧನೆಯ ಪ್ರಕಾರ ಸನ್ಸ್ಕ್ರೀನ್ ಅತಿಯಾದ ಬಳಕೆಯಿಂದ ಹಲವು ರೀತಿಯ ಕ್ಯಾನ್ಸರ್ಗಳು ಬರಬಹುದು ಎಂದು ಹೇಳಿದೆ.
ಈ ಅಧ್ಯಯನವು ಹೇಳುವ ಪ್ರಕಾರ ಹಲವು ಸನ್ಸ್ಕ್ರೀನ್ಗಳು ಬೆಂಜೆನ್ ಅನ್ನುವ ಕೆಮಿಕಲ್ ಅನ್ನು ತಮ್ಮ ಉತ್ಪಾದನೆಯಲ್ಲಿ ಬಳಸುತ್ತವೆ. ಇದು ಚರ್ಮದ ಮೇಲೆ ಅನೇಕ ರೀತಿಯ ಪ್ರಭಾವವನ್ನು ಬೀರುತ್ತದೆ. ಆರಂಭದಲ್ಲಿ ಸೂರ್ಯನ ಕಿರಣಗಳಿಂದ ನಮ್ಮ ತ್ವಚೆಯನ್ನು ರಕ್ಷಿಸಿದರು ಕೂಡ ಮುಂದೆ ಇದೇ ಒಂದು ರಾಸಾಯನಿಕ ವಸ್ತು ಹಲವು ರೀತಿಯ ಚರ್ಮದ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಸನ್ ಸ್ಕ್ರೀನ್ ಗಳಿಗೆ ಪ್ರಮುಖವಾಗಿ ಬಳಸುವ ರಾಸಾಯನಿಕ ವಸ್ತುಗಳು ಅಂದ್ರೆ ಅದು ಕಾರ್ಕಿನಾಜೆನ್ ಬೆಂಜೆನ್. ಇವು ನಿಮ್ಮ ತ್ವಚೆಯ ಮೇಲೆ ಋಣಾತ್ಮಕರ ಪರಿಣಾಮ ಬೀರುವ ಸಾಧ್ಯತೆ ಜಾಸ್ತಿ ಎಂದು ಅಧ್ಯಯನದಲ್ಲಿ ವರದಿಯಾಗಿದೆ.
ಹೀಗಾಗಿ ಜಾಹಿರಾತುಗಳಲ್ಲಿ ಬರುವ ಎಲ್ಲಾ ಸನ್ ಸ್ಕ್ರೀನ್ ಗಳನ್ನು ನಂಬಬಾರದು. ಪ್ರಮುಖವಾಗಿ ಸ್ಕಿನ್ ಕ್ಯಾನ್ಸರ್ಗೆ ಕಾರಣವಾಗುವುದೇ ಸೂರ್ಯನಿಂದ ಹೊರಸೂಸುವ ಯುವಿ ರೆಡಿಯೇಷನ್ ಎಂದು ಹೇಳಲಾಗುತ್ತದೆ.