newsics.com
ನಟಿ ದೀಪಿಕಾ ಪಡುಕೋಣೆಯ ಒಂದು ಸೆಕೆಂಡ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ.
ವಿಡಿಯೋ ಶೇರ್ ಮಾಡಿದ ಒಂದು ತಾಸಿನಲ್ಲಿಯೇ ಲಕ್ಷ ಲಕ್ಷ ವ್ಯೂಸ್, ಲೈಕ್ಸ್, ಶೇರ್ಸ್ ಕಂಡಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂಥದ್ದೇನು ಇದ್ಯಪ್ಪಾ ಎಂದು ಕೇಳಿದರೆ ನಟಿ ದೀಪಿಕಾ ಪಡುಕೋಣೆ ಒಂದು ಸೆಕೆಂಡ್ನಲ್ಲಿ ಕಣ್ಣನ್ನು ಒಮ್ಮೆ ಕಣ್ಣುಮಿಟುಕಿಸಿದ್ದಾರೆ ಅಷ್ಟೇ! ಇಷ್ಟೇನಾ ಎಂದು ಕೇಳಬಹುದು. ಆದರೆ ಚಿತ್ರತಾರೆಯರನ್ನು ಆರಾಧಿಸುವ ದೊಡ್ಡ ವರ್ಗವೇ ಇದೆ ಎನ್ನುವುದನ್ನು ಈ ವ್ಯೂಸ್, ಲೈಕ್ಸ್, ಶೇರ್ಸ್ ಆಗಿರುವುದನ್ನು ನೋಡಿದರೇನೇ ತಿಳಿಯುತ್ತದೆ
ಸದ್ಯ ದೀಪಿಕಾ ಪಡುಕೋಣೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ವೈರಲ್ ಆಗ್ತಿರೋ ವಿಡಿಯೋ ಈಕೆ ಗರ್ಭಿಣಿ ಆಗುವುದಕ್ಕಿಂತ ಮುಂಚಿನದ್ದೋ ಅಥವಾ ನಂತರದ್ದೋ ಗೊತ್ತಿಲ್ಲ. ಕಾರ್ಯಕ್ರಮಕ್ಕೆ ರೆಡಿಯಾಗುತ್ತಿರುವ ವೇಳೆ, ಈ ವಿಡಿಯೋವನ್ನು ಮಾಡಲಾಗಿದೆ.