Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Bengaluru New Cricket Stadium ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂನ ವಿಶೇಷತೆಗಳೇನು?
ಕರ್ನಾಟಕಪ್ರಮುಖ

Bengaluru New Cricket Stadium ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂನ ವಿಶೇಷತೆಗಳೇನು?

Share
2 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಸೂರ್ಯನಗರ 4ನೇ ಹಂತದ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 943 ಕೋಟಿ ವೆಚ್ಚದಲ್ಲಿ ನೂತನ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ.

ಒಟ್ಟು 75 ಎಕರೆ (ಸುಮಾರು 1,21,713 ಚದರ ಮೀಟರ್) ವಿಶಾಲವಾದ ಜಾಗದಲ್ಲಿ ಈ ಕ್ರೀಡಾಂಗಣ ತಲೆಯೆತ್ತಲಿದೆ. ಇದರಲ್ಲಿ ಕ್ರೀಡಾಂಗಣದ ಮುಖ್ಯ ಪೋಡಿಯಂ ವಲಯವೇ 12,750 ಚದರ ಮೀಟರ್ ವ್ಯಾಪ್ತಿಯನ್ನು ಹೊಂದಿರಲಿದೆ.

ಕ್ರೀಡಾಂಗಣದಲ್ಲಿ ಆಧುನಿಕ ಸೌಲಭ್ಯಗಳು, ಹಾಸ್ಪಿಟಾಲಿಟಿ ಲೌಂಜ್‌ಗಳು, ವಿಐಪಿ ಬಾಕ್ಸ್‌ಗಳು ಹಾಗೂ ಮೀಡಿಯಾ ಸೌಲಭ್ಯಗಳನ್ನು ಒಳಗೊಂಡಂತೆ ಪ್ರೇಕ್ಷಕರ ಅನುಭವವನ್ನು ಉತ್ತಮಗೊಳಿಸುವ ವ್ಯವಸ್ಥೆಗಳು ಇರಲಿವೆ. ಜತೆಗೆ ಭಾರಿ ಜನಸಂದಣಿ ನಿರ್ವಹಣೆಗೆ ಅಗತ್ಯವಾದ ಸುರಕ್ಷತಾ ವ್ಯವಸ್ಥೆ ಈ ಕ್ರೀಡಾಂಗಣ ಹೊಂದಿರಲಿದೆ.

 

ಮೊದಲ ಹಂತದಲ್ಲಿ 943 ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ, ವಿದ್ಯುತ್‌ ಸೌಲಭ್ಯ ಇತ್ಯಾದಿಗಳನ್ನು ಕಲ್ಪಿಸಲಾಗುತ್ತದೆ. ಎರಡನೇ ಹಂತದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತದೆ. ಇದರಲ್ಲಿ ಒಳಾಂಗಣ, ಹೊರಾಂಗಣ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಲ್ಲದೆ ಸಮಾವೇಶ ಕೇಂದ್ರ, ಸುಸಜ್ಜಿತವಾದ ಹೋಟೆಲ್ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ.

80,000 ಆಸನಗಳು. ಇದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ (1,32,000 ಸಾಮರ್ಥ್ಯ) ಬಿಟ್ಟರೆ ಭಾರತದ 2ನೇ ಅತಿದೊಡ್ಡ ಮತ್ತು ವಿಶ್ವದ ಮೂರನೇ ಅತಿದೊಡ್ಡ ಕ್ರೀಡಾಂಗಣ ಎನಿಸಿಕೊಳ್ಳಲಿದೆ.

ಮೊದಲ ಹಂತದ ಸ್ಟೇಡಿಯಂ ಕಾಮಗಾರಿಗಾಗಿ ₹943 ಕೋಟಿಯಿಂದ ₹950 ಕೋಟಿ ವೆಚ್ಚ ಮಾಡಲಾಗುತ್ತಿದೆ.

 

ಸಾಮಾನ್ಯವಾಗಿ ಇಂತಹ ಬೃಹತ್ ಕ್ರೀಡಾಂಗಣಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಥವಾ ಬಿಸಿಸಿಐ (BCCI) ನಿರ್ಮಿಸುತ್ತವೆ. ಆದರೆ, ಈ ಪ್ರಾಜೆಕ್ಟ್‌ನ ವಿಶೇಷತೆಯೆಂದರೆ ಇದನ್ನು ಸಂಪೂರ್ಣವಾಗಿ ಕರ್ನಾಟಕ ಗೃಹ ಮಂಡಳಿ (KHB) ತನ್ನದೇ ಆದ ಸ್ವಂತ ನಿಧಿಯಿಂದ ನಿರ್ಮಿಸುತ್ತಿದೆ. ರಾಜ್ಯ ಸರ್ಕಾರದಿಂದ ಇದಕ್ಕೆ ಯಾವುದೇ ಪ್ರತ್ಯೇಕ ಬಜೆಟ್ ಅನುದಾನವನ್ನು ಪಡೆದುಕೊಳ್ಳುತ್ತಿಲ್ಲ.

ಇದು ಕೇವಲ ಕ್ರಿಕೆಟ್‌ಗೆ ಸೀಮಿತವಾಗಿರದೆ, ಮುಂದಿನ ದಿನಗಳಲ್ಲಿ ಸಂಪೂರ್ಣ ಕ್ರೀಡಾ ಹಬ್ ಆಗಿ ಬದಲಾಗಲಿದೆ. ಎರಡನೇ ಹಂತದಲ್ಲಿ ಇಲ್ಲಿ ಒಟ್ಟು 24 ವಿವಿಧ ಕ್ರೀಡೆಗಳಿಗೆ ಜಾಗತಿಕ ಮಟ್ಟದ ಸೌಲಭ್ಯ ಸಿಗಲಿದೆ.

3,000 ಆಸನ ಸಾಮರ್ಥ್ಯದ ಅತ್ಯಾಧುನಿಕ ಆಡಿಟೋರಿಯಂ.

ಒಲಿಂಪಿಕ್ ಗುಣಮಟ್ಟದ ಈಜುಕೊಳ.

ಅಥ್ಲೆಟಿಕ್ ಟ್ರ್ಯಾಕ್‌ಗಳು, ಒಳಾಂಗಣ ಕ್ರೀಡಾಂಗಣಗಳು.

ಕ್ರೀಡಾಪಟುಗಳಿಗೆ ತರಬೇತಿ ಕೇಂದ್ರಗಳು, ವಸತಿ ನಿಲಯಗಳು ಮತ್ತು ಹೋಟೆಲ್ ಸೌಲಭ್ಯಗಳು.

ಕ್ರೀಡಾ ಇತಿಹಾಸ ಸಾರುವ ಹೆರಿಟೇಜ್ ಹಾಲ್ ಆಫ್ ಫೇಮ್.

ಕ್ರಿಕೆಟ್ ಮಾತ್ರವಲ್ಲದೆ, ಈ ಸ್ಟೇಡಿಯಂನ್ನು ಬಹುಉದ್ದೇಶೀಯ ವೇದಿಕೆಯಾಗಿ ರೂಪಿಸುವ ಯೋಜನೆಯೂ ಇದೆ. ಸಂಗೀತ ಕಾರ್ಯಕ್ರಮಗಳು, ಸಮ್ಮೇಳನಗಳು, ಸಾರ್ವಜನಿಕ ಸಭೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳಿಗೂ ಇದನ್ನು ಬಳಸುವ ಉದ್ದೇಶವಿದೆ.

IAS ಕನಸ್ಸು ಕಿತ್ತುಕೊಂಡ ಬೆಂಗಳೂರಿನ ರಸ್ತೆ : ಟ್ರಾಫಿಕ್ ನಿಂದ 6 ವಿದ್ಯಾರ್ಥಿಗಳು ಪರೀಕ್ಷೆ ಮಿಸ್

TAGGED:What are the special features of the country's 2nd largest cricket stadium?
Share This Article
Facebook Twitter Copy Link Print
Previous Article IAS ಕನಸು ಕಿತ್ತುಕೊಂಡ ಬೆಂಗಳೂರಿನ ರಸ್ತೆ: ಟ್ರಾಫಿಕ್‌ನಿಂದ 6 ವಿದ್ಯಾರ್ಥಿಗಳಿಗೆ ಪರೀಕ್ಷೆ ಮಿಸ್
Next Article ಹಾರ್ಮುಜ್ ಜಲಸಂಧಿ ತೆರೆಯಲ್ಪಡಲಿದೆ : ಟ್ರಂಪ್ ಮಹತ್ವದ ಘೋಷಣೆ

Popular Posts

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

You Might Also Like

ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?