newsics.com/ನ್ಯೂಸಿಕ್ಸ್
ಮುಂಬೈ: ಸಾಲದ ಅವಧಿಗಿಂತ ಮುಂಚಿತವಾಗಿ ಪಾವತಿ ಮಾಡುವುದು, ಕ್ರೆಡಿಟ್ ಸ್ಕೋರ್ ಅಪ್ಡೇಟ್ ಮತ್ತು ನಾಮಿನೇಷನ್ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆರ್ಬಿಐ ಹಲವು ಪ್ರಮುಖ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳಲ್ಲಿ ಕೆಲವು ಈಗಾಗಲೇ ಜಾರಿಗೆ ಬಂದಿದ್ದರೆ, ಇನ್ನು ಕೆಲವು ಈ ವರ್ಷದ ಜುಲೈ ಮಧ್ಯಭಾಗದಿಂದ ಜಾರಿಗೆ ಬರಲಿವೆ.
1.ಫೋರ್ಕ್ಲೋಸರ್ ಚಾರ್ಜ್ ರದ್ದು
ಫ್ಲೋಟಿಂಗ್ ಬಡ್ಡಿದರದಲ್ಲಿ ರೀಟೇಲ್ ಸಾಲ ಪಡೆದವರಿಗೆ ಇದೀಗ ದೊಡ್ಡ ವಿನಾಯಿತಿ ಸಿಕ್ಕಿದೆ. ಈ ವರ್ಷದ ಜನವರಿ 1 ರಿಂದ ಮಂಜೂರಾದ ಅಥವಾ ನವೀಕರಿಸಲಾದ ಗೃಹ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಮತ್ತು ವಾಹನ ಸಾಲಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅವಧಿಗಿಂತ ಮುಂಚಿತವಾಗಿ ಪಾವತಿಸಲು ಅವಕಾಶ ನೀಡಲಾಗಿದೆ.
2. ವಾರಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ಅಪ್ಡೇಟ್
ಕ್ರೆಡಿಟ್ ಸ್ಕೋರ್ ವ್ಯವಸ್ಥೆಯಲ್ಲೂ ಆರ್ಬಿಐ ದೊಡ್ಡ ಬದಲಾವಣೆ ಮಾಡಿದೆ. ಸದ್ಯಕ್ಕೆ ತಿಂಗಳಿಗೊಮ್ಮೆ ಮಾತ್ರ ಅಪ್ಡೇಟ್ ಆಗುತ್ತಿದ್ದ ಕ್ರೆಡಿಟ್ ಸ್ಕೋರ್ಗಳು, ಜುಲೈ 1 ರಿಂದ ವಾರಕ್ಕೊಮ್ಮೆ ಅಪ್ಡೇಟ್ ಆಗಲಿವೆ.
ಇಎಂಐ (EMI) ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರ ಕ್ರೆಡಿಟ್ ಸ್ಕೋರ್ ಇನ್ಮುಂದೆ ವೇಗವಾಗಿ ಸುಧಾರಿಸುತ್ತದೆ.
3. ಒಂದೇ ಖಾತೆಗೆ ನಾಲ್ವರು ನಾಮಿನಿಗಳು!
ಬ್ಯಾಂಕ್ ಖಾತೆಗಳು, ಫಿಕ್ಸೆಡ್ ಡಿಪಾಸಿಟ್ ಮತ್ತು ಲಾಕರ್ಗಳ ನಾಮಿನೇಷನ್ ಪ್ರಕ್ರಿಯೆಯನ್ನು ಆರ್ಬಿಐ ಸರಳಗೊಳಿಸಿದೆ. ಇನ್ಮುಂದೆ ಬ್ಯಾಂಕ್ ಗ್ರಾಹಕರು ಒಟ್ಟಿಗೆ ಅಥವಾ ಹಂತ ಹಂತವಾಗಿ ನಾಲ್ಕು ಜನರನ್ನು ನಾಮಿನಿಗಳಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಖಾತೆದಾರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಹಣ ಅಥವಾ ಆಸ್ತಿಯನ್ನು ವಾರಸುದಾರರಿಗೆ ವರ್ಗಾಯಿಸುವುದು ಅತ್ಯಂತ ಸುಲಭವಾಗಲಿದೆ.
4. ಚಿನ್ನದ ಸಾಲದ ಅವಧಿ ವಿಸ್ತರಣೆ
ಚಿನ್ನದ ಒಡವೆಗಳ ಮೇಲೆ ಸಾಲ ಪಡೆಯುವ ಆಭರಣ ವ್ಯಾಪಾರಿಗಳಿಗೂ ಆರ್ಬಿಐ ಸಮಾಧಾನಕರ ಸುದ್ದಿ ನೀಡಿದೆ. ಚಿನ್ನದ ಭದ್ರತೆಯ ಮೇಲೆ ಪಡೆಯುವ ಸಾಲದ ಮರುಪಾವತಿ ಅವಧಿಯನ್ನು ಪ್ರಸ್ತುತ ಇರುವ 180 ದಿನಗಳಿಂದ 270 ದಿನಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ನಗದು ನಿರ್ವಹಣೆ ಮಾಡಿಕೊಳ್ಳಲು ಹೆಚ್ಚಿನ ಸಮಯ ಸಿಗಲಿದೆ.
Nitin Nabin ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್: ಇಂದು ನಾಯಕರೊಂದಿಗೆ ಸಭೆ