Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Ram Charan ಜಸ್ಪ್ರೀತ್ ಬುಮ್ರಾ ಫುಟ್‌ಬಾಲ್ ಆಟಗಾರ ಎಂದ ರಾಮ್ ಚರಣ್ : ತಪ್ಪಿಗೆ ಕ್ಷಮೆಯಾಚಿಸಿದ ನಟ
ದೇಶಪ್ರಮುಖಮನರಂಜನೆ

Ram Charan ಜಸ್ಪ್ರೀತ್ ಬುಮ್ರಾ ಫುಟ್‌ಬಾಲ್ ಆಟಗಾರ ಎಂದ ರಾಮ್ ಚರಣ್ : ತಪ್ಪಿಗೆ ಕ್ಷಮೆಯಾಚಿಸಿದ ನಟ

Share
2 Min Read
SHARE

newsics.com/ನ್ಯೂಸಿಕ್ಸ್

ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ಅವರ ಮಗ ರಾಮ್ ಚರಣ್. 2007 ರಲ್ಲಿ ಬಿಡುಗಡೆಯಾದ ‘ಚಿರುತ’ ತೆಲುಗು ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡಿದರು. ಹಾಗೆಯೇ ನಟ ರಾಮ್ ಚರಣ್ ಕಳೆದ 19 ವರ್ಷಗಳಿಂದ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ರಾಮ್ ಚರಣ್ ಅವರ ಕೊನೆಯ ಚಿತ್ರ ‘ಗೇಮ್ ಚೇಂಜರ್’ ಅನ್ನು ಶಂಕರ್ ನಿರ್ದೇಶಿಸಿದರು. ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು. ಈ ಚಿತ್ರದ ನಂತರ, ರಾಮ್ ಚರಣ್ ಪುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಸಿನಿಮಾದ ಗ್ರ್ಯಾಂಡ್ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ನಟಿ ಜಾನ್ವಿ ಕಪೂರ್ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಲಘು ಸಂವಾದದಲ್ಲಿ ರಾಮ್ ಚರಣ್ ಅವರು ಭಾರತೀಯ ಕ್ರಿಕೆಟರ್​ಗಳ ಬಗ್ಗೆ ಮಾತನಾಡುವಾಗ ಒಂದು ತಪ್ಪು ಆಗಿದೆ. ಜಸ್ಪ್ರೀತ್ ಬುಮ್ರಾ ಅವರನ್ನು ಓರ್ವ ಫುಟ್​ಬಾಲ್ ಆಟಗಾರ ಎಂದು ರಾಮ್ ಚರಣ್ ಕರೆದಿದ್ದಾರೆ.

ವೇದಿಕೆಯಲ್ಲಿ ಭಾರತೀಯ ಕ್ರಿಕೆಟಿಗರನ್ನು ಕೆಲವು ಪದಗಳಲ್ಲಿ ಬಣ್ಣಿಸಲು ರಾಮ್ ಚರಣ್ ಅವರಿಗೆ ಹೇಳಲಾಯಿತು. ಈ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನವನ್ನು ‘ದೀರ್ಘಾವಧಿಯ ಲೆಂಜೆಂಡರಿ ಪಯಣ’ ಎಂದು ಕರೆದ ರಾಮ್ ಚರಣ್ ಅವರು, ಎಂ.ಎಸ್. ಧೋನಿ ಅವರನ್ನು ‘ಶಾಂತ ಮತ್ತು ಕೂಲ್’ ಎಂದು ಬಣ್ಣಿಸಿದರು. ಇನ್ನು, ರೋಹಿತ್ ಶರ್ಮಾ ಅವರನ್ನು ‘ಎಲ್ಲರ ನೆಚ್ಚಿನ ವ್ಯಕ್ತಿ’ ಎಂದ ಹೇಳಿದರು. ವಿರಾಟ್ ಕೊಹ್ಲಿ ಹೆಸರು ಬರುತ್ತಿದ್ದಂತೆ ‘ಬೆಂಕಿ’ ಎಂದು ಹೊಗಳಿಸಿದರು. ಆದರೆ ಬುಮ್ರಾ ಹೆಸರು ಬಂದಾಗ ತಪ್ಪು ಮಾಡಿದರು.

ಭಾರತದ ಖ್ಯಾತ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಹೆಸರು ಬಂದಾಗ, ರಾಮ್ ಚರಣ್ ಅವರು ತಾವು ಬುಮ್ರಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡರು. ಆದರೆ ತೀವ್ರ ಉತ್ಸಾಹದಲ್ಲಿ ಕ್ರಿಕೆಟ್ ಮತ್ತು ಫುಟ್‌ಬಾಲ್ ಕ್ರೀಡೆಯ ನಡುವೆ ಅವರು ಗೊಂದಲ ಮಾಡಿಕೊಂಡರು. ಬುಮ್ರಾ ಅವರನ್ನು ಫುಟ್‌ಬಾಲರ್ ಎಂದು ಕರೆದರು. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ರಾಮ್ ಚರಣ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ತಪ್ಪಿಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಈ ನಿಟ್ಟಿನಲ್ಲಿ ನಟ ರಾಮ್ ಚರಣ್ ತಮ್ಮ ಎಕ್ಸ್ ಪುಟದಲ್ಲಿ, “ನಾನು ಕೆಲವೊಮ್ಮೆ ಹೆಸರುಗಳನ್ನು ಮರೆತುಬಿಡುತ್ತೇನೆ. ಇದಕ್ಕಾಗಿ ನಾನು ಬುಮ್ರಾ ಜಿ ಅವರ ಬಳಿ ಕ್ಷಮೆ ಕೇಳುತ್ತೇನೆ. ಇದು ಭಾರಿ ಜನಸಮೂಹದ ನಡುವೆ ಸಂಭವಿಸಿದ ನ್ಯಾಚುರಲ್ ಮಿಸ್ಟೇಕ್ ಎಂದು ಹೇಳುತ್ತಾರೆ . ನಾನು ನಿಮ್ಮನ್ನು ನಿಜವಾಗಿಯೂ ಗೌರವಿಸುತ್ತೇನೆ; ನಾನು ನಿಮ್ಮ ಆಟದ ದೊಡ್ಡ ಅಭಿಮಾನಿ. ನೀವು ಬ್ಯಾಟ್ಸ್‌ಮನ್‌ಗಳನ್ನು ಎಡವಿ ಬೀಳುವಂತೆ ಮಾಡುತ್ತಲೇ ಇದ್ದಾಗ, ನೀವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡುತ್ತೀರಿ ಎಂದು ಪೋಸ್ಟ್ ಮಾಡಿದ್ದಾರೆ.

https://x.com/CinemasHive/status/2058275323381469465?ref_src=twsrc%5Etfw%7Ctwcamp%5Etweetembed%7Ctwterm%5E2058275323381469465%7Ctwgr%5E441e3c1b18007c7062ee399d629e91f7b5efe77f%7Ctwcon%5Es1_c10&ref_url=https%3A%2F%2Ftv9kannada.com%2Fentertainment%2Fpeddi-actor-ram-charan-calls-jasprit-bumrah-a-footballer-in-viral-video-and-apologizes-1190050.html

ಇನ್ಮುಂದೆ ವಾಟ್ಸಾಪ್ ಮೂಲಕವೇ ಸಿಗಲಿದೆ ಇಪಿಎಫ್ಒ ಸೇವೆ

 

 

 

TAGGED:Ram Charan calls Jasprit Bumrah a footballer: Actor apologises for mistake
Share This Article
Facebook Twitter Copy Link Print
Previous Article ಇನ್ಮುಂದೆ ವಾಟ್ಸಾಪ್ ಮೂಲಕವೇ ಸಿಗಲಿದೆ ಇಪಿಎಫ್ಒ ಸೇವೆ
Next Article ಇರಾನ್-ಅಮೆರಿಕ ನಡುವೆ ಮತ್ತೆ ಶಾಂತಿ ಸಂಧಾನ ಮಾತುಕತೆ : 24 ಗಂಟೆಗಳಲ್ಲಿ ಜಂಟಿ ಘೋಷಣೆ!

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?