Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನನ್ನ ಕ್ರೇಜ್ ನೋಡಿ ಟಾಪ್ ಹೀರೋಗಳು ಅಸೂಯೆ ಪಟ್ಟಿದ್ರು : ನಟಿ ವಿಜಯಶಾಂತಿ
ದೇಶಪ್ರಮುಖಮನರಂಜನೆ

ನನ್ನ ಕ್ರೇಜ್ ನೋಡಿ ಟಾಪ್ ಹೀರೋಗಳು ಅಸೂಯೆ ಪಟ್ಟಿದ್ರು : ನಟಿ ವಿಜಯಶಾಂತಿ

Share
1 Min Read
SHARE

newsics.com/ನ್ಯೂಸಿಕ್ಸ್

ಚಿತ್ರರಂಗದಲ್ಲಿ ಅನೇಕ ನಾಯಕಿಯರು ಇದ್ದರೂ, ಕೆಲವರು ಮಾತ್ರ ತಲೆಮಾರುಗಳವರೆಗೆ ಜನರ ಮೇಲೆ ಪ್ರಭಾವ ಬೀರುತ್ತಾರೆ. ದಕ್ಷಿಣ ಭಾರದತ ಲೇಡಿ ಆಕ್ಷನ್ ಸೂಪರ್‌ಸ್ಟಾರ್ ವಿಜಯಶಾಂತಿ ಕೂಡ ಈ ವರ್ಗಕ್ಕೆ ಸೇರುತ್ತಾರೆ. ಪುರುಷ ಪ್ರಾಬಲ್ಯದ ಉದ್ಯಮದಲ್ಲಿ ವಿಜಯಶಾಂತಿ ಅವರು ಲೇಡಿ ಸೂಪರ್‌ಸ್ಟಾರ್ ಮತ್ತು ಲೇಡಿ ಅಮಿತಾಬ್ ಎಂದು ಖ್ಯಾತಿ ಪಡೆಯುವಷ್ಟು ಕ್ರೇಜ್‌ ಹುಟ್ಟುಹಾಕಿದ್ದರು. ವಿಜಯಶಾಂತಿ ಸಿನಿಮಾಗಳಿಂದ ದೂರವಿದ್ದರೂ, ಆ ಕ್ರೇಜ್ ಇನ್ನೂ ಹಾಗೆಯೇ ಇದೆ.

ಸ್ಟಾರ್ ಹೀರೋಗಳಿಗೆ ಸಮನಾಗಿ ಅವರು ಕ್ರೇಜ್ ಸಂಪಾದಿಸಿದ್ದರು. ಒಂದು ಕಾಲದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ವಿಜಯಶಾಂತಿ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ‘ಕರ್ತವ್ಯಂ’, ‘ಓಸೇಯ್ ರಾಮುలಮ್ಮ’ ಚಿತ್ರಗಳು ಅವರನ್ನು ಉತ್ತುಂಗಕ್ಕೆ ಕೊಂಡೊಯ್ದವು.

ಇದರಿಂದಾಗಿ ವಿಜಯಶಾಂತಿ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಬೆಳೆದರು. ಈ ಬೆಳವಣಿಗೆಯನ್ನು ನೋಡಿ ಕೆಲ ಟಾಪ್ ಹೀರೋಗಳು ಅಸೂಯೆಪಟ್ಟಿದ್ದರು ಎಂಬ ಮಾತುಗಳಿವೆ. ಸಂದರ್ಶನವೊಂದರಲ್ಲಿ, ನೀವು ಸ್ಟಾರ್ ಆಗಿ ಬೆಳೆಯುವುದನ್ನು ನೋಡಿ ಅಂದಿನ ಮೆಗಾಸ್ಟಾರ್ ಒಬ್ಬರು ಹೊಟ್ಟೆಕಿಚ್ಚು ಪಟ್ಟಿದ್ದರು ಎಂಬ ಸುದ್ದಿ ನಿಜವೇ? ಎಂದು ನಿರೂಪಕರು ಪ್ರಶ್ನಿಸಿದ್ದರು.

ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ನಮ್ಮ ಹೀರೋಗಳು ವಿಶಾಲ ಮನಸ್ಸಿನಿಂದ ಯೋಚಿಸುವುದಿಲ್ಲ. ದೊಡ್ಡ ಮನಸ್ಸು ಮಾಡುವವರು ಯಾರೂ ಇಲ್ಲ. ಒಬ್ಬರನ್ನು ನೋಡಿ ಯಾಕೆ ಹೆದರುತ್ತಾರೋ, ಅಸೂಯೆ ಪಡುತ್ತಾರೋ ಅರ್ಥವಾಗುವುದಿಲ್ಲ. ನಮ್ಮ ಜೊತೆ ಕೆಲಸ ಮಾಡಿದ ನಾಯಕಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾಳೆ ಎಂದು ಖುಷಿಪಡುವವರು ಇಲ್ಲ. ನಮ್ಮ ಹೀರೋಗಳು ಬದಲಾಗುವುದಿಲ್ಲ, ಅವರು ಬದಲಾಗುತ್ತಾರೆ ಎಂದು ನಿರೀಕ್ಷಿಸುವುದೇ ವ್ಯರ್ಥ ಎಂದಿದ್ದಾರೆ ವಿಜಯಶಾಂತಿ.

ನಮ್ಮ ಹೀರೋಗಳು ಮನಸ್ಥಿತಿಯಲ್ಲಿ ಇನ್ನೂ ಬೆಳೆದಿಲ್ಲ ಎಂದು ವಿಜಯಶಾಂತಿ ಹೇಳಿದರು. ಅಂತಹವರಿಂದ ನಿಮಗೆ ನೇರವಾಗಿ ತೊಂದರೆಯಾದ ಸಂದರ್ಭಗಳಿವೆಯೇ ಎಂದು ಕೇಳಿದಾಗ, ‘ಶತ್ರುಗಳು ಯಾವಾಗಲೂ ಹಿಂದಿನಿಂದಲೇ ಹೊಡೆಯುತ್ತಾರೆ’ ಎಂದರು. ಆದರೆ ಕೆಲ ಹೀರೋಗಳ ಬಗ್ಗೆ ನನಗೆ ತಿಳಿಯಿತು. ಅವರ ಬಗ್ಗೆ ತಿಳಿದಾಗ, ‘ಇಂಥವರ ಜೊತೆನಾ ನಾನು ನಟಿಸಿದ್ದು’ ಎಂದು ಅಸಹ್ಯವಾಯಿತು ಎಂದು ವಿಜಯಶಾಂತಿ ಹೇಳಿದ್ದಾರೆ.ಅಂತಹ ಇಬ್ಬರು-ಮೂವರು ಹೀರೋಗಳು ಚಿತ್ರರಂಗದಲ್ಲಿದ್ದಾರೆ. ಅವರೆಲ್ಲರೂ ಟಾಪ್ ಹೀರೋಗಳೇ ಎಂದು ವಿಜಯಶಾಂತಿ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ರಿವರ್ ರ್‍ಯಾಫ್ಟಿಂಗ್​ಗೆ ಹೋದ ಪ್ರವಾಸಿನಿಗೆ ಕರೆಂಟ್ ಶಾಕ್ ಹೊಡೆದು ಸಾವು

TAGGED:Top heroes were jealous of my craze: Actress Vijayashanti
Share This Article
Facebook Twitter Copy Link Print
Previous Article ರಿವರ್ ರ್‍ಯಾಫ್ಟಿಂಗ್​ಗೆ ಹೋದ ಪ್ರವಾಸಿನಿಗೆ ಕರೆಂಟ್ ಶಾಕ್ ಹೊಡೆದು ಸಾವು
Next Article ಇನ್ಮುಂದೆ ವಾಟ್ಸಾಪ್ ಮೂಲಕವೇ ಸಿಗಲಿದೆ ಇಪಿಎಫ್ಒ ಸೇವೆ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?