newsics.com/ನ್ಯೂಸಿಕ್ಸ್
ಕಾರವಾರ: ಸ್ನೇಹಿತರ ಜೊತೆ ರಿವರ್ ರ್ಯಾಫ್ಟಿಂಗ್ಗೆ ಹೋದ ಯುವಕ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ ಗುಡಿಯ ಖಾಸಗಿ ರೆಸಾರ್ಟ್ನಲ್ಲಿ ನಡೆದಿದೆ.
ಆಂದ್ರ ವಿಜಯವಾಡ ಮೂಲದ ಮಹೇಶ್ ಎಂಬುವವರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿರೋ ಸಿಲ್ವರ್ ಬಿಲ್ ರೆಸಾರ್ಟ್ಗೆ ತೆರಳಿದ್ರು. ಸ್ನೇಹಿತರ ಜೊತೆ ರಿವರ್ ರ್ಯಾಫ್ಟಿಂಗ್ಗೆ ಹೋದ ವೇಳೆ ಮಹೇಶ್ ಎಂಬುವವರಿಗೆ ಕರೆಂಟ್ ಶಾಕ್ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ರೆಸಾರ್ಟ್ನ ಆಡಳಿತ ಮಂಡಳಿಯವರ ನಿರ್ಲಕ್ಷ್ಯವೇ ಪ್ರವಾಸಿ ಯುವಕನ ಸಾವಿಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಜಲಸಾಹಸ ಕ್ರೀಡೆ ನಡೆಯುವ ಜಾಗದಲ್ಲೇ ಆಡಳಿತ ಮಂಡಳಿ ಪಂಪ್ ಸೆಟ್ ಹಾಕಿತ್ತು ಎನ್ನಲಾಗ್ತಿದೆ.
ರಿವರ್ ರ್ಯಾಫ್ಟಿಂಗ್ಗೆ ಹೋಗಿ ಬೀಟ್ನಿಂದ ನದಿಯೊಳಗೆ ಹಾರಿದಾಗ ಪ್ರವಾಸಿಗ ಮಹೇಶ್ಗೆ ಕರೆಂಟ್ ಶಾಕ್ ಹೊಡೆದಿದೆ ಎನ್ನಲಾಗ್ತಿದೆ. ಹೀಗಾಗಿ ಸಿಲ್ವರ್ ಬಿಲ್ ರೆಸಾರ್ಟ್ ಆಡಳಿತ ವ್ಯವಸ್ಥೆ ವಿರುದ್ದ ಜನರು ಆಕ್ರೋಶ ಹೊರಹಾಕಿದ್ದಾರೆ.
ಅಪಘಾತದ ಬಳಿಕ ಮಾನವೀಯತೆ ಮೆರೆದ ಚಾಲಕನಿಗೆ 1 ವರ್ಷದ ಜೈಲು ಶಿಕ್ಷೆ ಒಂದೇ ದಿನಕ್ಕೆ ಕಡಿತಗೊಳಿಸಿದ ಹೈಕೋರ್ಟ್