Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Instamart LPG ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!
ಕರ್ನಾಟಕದೇಶಪ್ರಮುಖ

Instamart LPG ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!

Share
3 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ಬೆಂಗಳೂರಿಗರಿಗರು ಇನ್ಮುಂದೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಕೇವಲ ಕೆಲವೇ ನಿಮಿಷಗಳಲ್ಲಿ 5 ಕೆಜಿ ಮತ್ತು 10 ಕೆಜಿ ತೂಕದ HPCL ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆಬಾಗಿಲಿಗೇ ಆರ್ಡರ್ ಮಾಡಬಹುದಾಗಿದೆ.

ಪೈಲಟ್ ಯೋಜನೆಯಾಗಿ ಜುಲೈ 15ರಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದ್ದು, ಈ ಮೂಲಕ ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ ಬೇಡಿಕೆಯ ಮೇರೆಗೆ ಎಲ್‌ಪಿಜಿ ವಿತರಣೆ ಮಾಡುವ ಸೇವೆಗೆ HPCL ಅಧಿಕೃತವಾಗಿ ಕಾಲಿಟ್ಟಿದೆ.

ತ್ವರಿತ ವಿತರಣಾ (Quick Commerce) ವೇದಿಕೆ ಇನ್‌ಸ್ಟಾಮಾರ್ಟ್ (Instamart) ಮೂಲಕ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಆರ್ಡರ್ ಮಾಡುವ ಅವಕಾಶವನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಪರಿಚಯಿಸಿದೆ.

ಈ ಸೇವೆ ಆರಂಭವಾಗುತ್ತಿರುವ ದೇಶದ ಮೊದಲ ನಗರವಾಗಿ ಬೆಂಗಳೂರು ಆಯ್ಕೆಯಾಗಿದೆ. ಬುಧವಾರ ಘೋಷಿಸಲಾದ ಈ ಸೇವೆಯಲ್ಲಿ ಆರಂಭಿಕ ಹಂತದಲ್ಲಿ HPCLನ ಹೊಸ 10 ಕೆ.ಜಿ. ಕಾಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ‘HP Navya’ ಹಾಗೂ 5 ಕೆ.ಜಿ. ಲೋಹದ (Metal) ಎಲ್‌ಪಿಜಿ ಸಿಲಿಂಡರ್ ಲಭ್ಯವಾಗಲಿದೆ.

ಯಾರು ಬೇಕಾದರೂ ಆರ್ಡರ್​​ ಮಾಡಬಹುದು!

ಪೈಲಟ್ ಯೋಜನೆಯಾಗಿ ಜುಲೈ 15ರಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ.

ಈ ಮೂಲಕ ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ ಬೇಡಿಕೆಯ ಮೇರೆಗೆ (On-demand) ಎಲ್‌ಪಿಜಿ ವಿತರಣೆ ಮಾಡುವ ಸೇವೆಗೆ HPCL ಅಧಿಕೃತವಾಗಿ ಕಾಲಿಟ್ಟಿದೆ.

ಈ ಸೇವೆಯ ವಿಶೇಷತೆ ಎಂದರೆ, ಈ ಸಿಲಿಂಡರ್ ಖರೀದಿಸಲು ಈಗಾಗಲೇ ಗೃಹಬಳಕೆಯ ಎಲ್‌ಪಿಜಿ ಸಂಪರ್ಕ (Domestic LPG Connection) ಹೊಂದಿರಬೇಕೆಂಬ ಅವಶ್ಯಕತೆ ಇಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಣ್ಣ ಕುಟುಂಬಗಳಿಗೆ ಈ ಸೇವೆ ಹೆಚ್ಚು ಅನುಕೂಲಕರವಾಗಲಿದೆ.

ಸಿಲಿಂಡರ್ ರಿಫಿಲ್ ಬೇಕಾದರೆ, ಹೊಸ ಸಿಲಿಂಡರ್ ವಿತರಿಸುವ ವೇಳೆ ಖಾಲಿ HPCL ಸಿಲಿಂಡರ್  ಹಿಂತಿರುಗಿಸಿದರೆ ಸಾಕು.

ಈ ಬಗ್ಗೆ ಮಾಹಿತಿ ನೀಡಿರುವ ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ, ಇನ್‌ಸ್ಟಾಮಾರ್ಟ್ ಕೇವಲ ದಿನಸಿ ವಸ್ತುಗಳ ವಿತರಣೆಗೆ ಸೀಮಿತವಾಗಿಲ್ಲ. HPCL ಜತೆಗಿನ ಈ ಸಹಭಾಗಿತ್ವದ ಮೂಲಕ ಅತ್ಯಗತ್ಯ ಗೃಹಬಳಕೆಯ ಸೇವೆಯಾದ LPG ವಿತರಣೆಯನ್ನೂ ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ. ಗ್ರಾಹಕರು ನಿರೀಕ್ಷಿಸುವ ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡೇ ಈ ಸೇವೆ ಒದಗಿಸಲಾಗುತ್ತಿದೆ ಎಂದಿದ್ದಾರೆ.

HPCLನ ಅಧಿಕೃತ ವಿತರಕರ ಜಾಲದ ಮೂಲಕವೇ ಪೂರೈಕೆ

ಈ ಸೇವೆಯಡಿ ಬರುವ ಎಲ್ಲಾ ಆರ್ಡರ್‌ಗಳನ್ನು HPCLನ ಅಧಿಕೃತ ವಿತರಕರ ಜಾಲ (Authorised Distributor Network) ಮೂಲಕ ಪೂರೈಸಲಾಗುತ್ತದೆ. ಮೊದಲ ಬಾರಿಗೆ ಸಿಲಿಂಡರ್ ಖರೀದಿಸುವ ಗ್ರಾಹಕರು ವಿತರಣೆಗೂ ಮುನ್ನ ಕಡ್ಡಾಯವಾಗಿ ಗುರುತಿನ ಪರಿಶೀಲನೆ (Identity Verification) ಪೂರ್ಣಗೊಳಿಸಬೇಕಾಗುತ್ತದೆ.

  • ಇನ್‌ಸ್ಟಾಮಾರ್ಟ್ ಮೂಲಕ ಎಲ್‌ಪಿಜಿ ಸಿಲಿಂಡರ್‌ ಆರ್ಡರ್​​ಗೆ ಅವಕಾಶ
  • ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಲ್ಲಿ ಯೋಜನೆ ಜಾರಿ
  • ಈ ಸಿಲಿಂಡರ್ ಖರೀದಿಸಲು ಗೃಹಬಳಕೆಯ ಎಲ್‌ಪಿಜಿ ಸಂಪರ್ಕ ಬೇಕಿಲ್ಲ

ಆರ್ಡರ್‌ಗಳನ್ನು HPCL ನ ಅಧಿಕೃತ ವಿತರಕ ಜಾಲದ ಮೂಲಕ ಪೂರೈಸಲಾಗುವುದು, ಮೊದಲ ಬಾರಿಗೆ ಗ್ರಾಹಕರು ವಿತರಣೆಗೆ ಮೊದಲು ಗುರುತಿನ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಪ್ರಮುಖಾಂಶಗಳು
ಬೆಂಗಳೂರು ದೇಶದಲ್ಲೇ ಮೊದಲ ಬಾರಿಗೆ ತ್ವರಿತ ವಾಣಿಜ್ಯ (Quick Commerce) ಮೂಲಕ LPG ಸಿಲಿಂಡರ್ ವಿತರಣೆಯನ್ನು ಆರಂಭಿಸಿದ ನಗರವಾಗಲಿದೆ.

HPCL (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಮತ್ತು Instamart ಸಹಭಾಗಿತ್ವದಲ್ಲಿ ಈ ಸೇವೆ ಆರಂಭವಾಗಿದೆ.

ಸಾಂಪ್ರದಾಯಿಕ LPG ಸಂಪರ್ಕ ಇಲ್ಲದ ಗ್ರಾಹಕರೂ ಸಹ ಈ ಸೇವೆಯ ಮೂಲಕ ಸಿಲಿಂಡರ್ ಪಡೆಯಬಹುದು.

ಗ್ರಾಹಕರು ಮೊಬೈಲ್ ಆ್ಯಪ್ ಮೂಲಕ ಸಿಲಿಂಡರ್ ಅನ್ನು ನೇರವಾಗಿ ಆರ್ಡರ್ ಮಾಡಬಹುದು.

ಗ್ಯಾಸ್ ಏಜೆನ್ಸಿಗೆ ಭೇಟಿ ನೀಡುವುದು ಅಥವಾ ಸಾಂಪ್ರದಾಯಿಕ ಬುಕ್ಕಿಂಗ್ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯವಿಲ್ಲ.

ತುರ್ತು ಸಂದರ್ಭಗಳಲ್ಲಿ ಮತ್ತು ಅಲ್ಪಾವಧಿಯ ಬಳಕೆಗೆ ಈ ಸೇವೆ ಹೆಚ್ಚು ಅನುಕೂಲಕರವಾಗಲಿದೆ.

ಪ್ರಸ್ತುತ ಈ ಸೇವೆ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.

ನಗರ ಪ್ರದೇಶದ ಗ್ರಾಹಕರಿಗೆ ವೇಗವಾದ ಮತ್ತು ಸುಲಭವಾದ LPG ವಿತರಣಾ ವ್ಯವಸ್ಥೆಯನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಭಾರತದಲ್ಲಿ LPG ವಿತರಣಾ ಕ್ಷೇತ್ರದಲ್ಲಿ ಇದು ಮಹತ್ವದ ಬದಲಾವಣೆಯಾಗಿ ಪರಿಗಣಿಸಲಾಗಿದೆ.

Tragedy ಮಕ್ಕಳಿಗೆ ತಿಂಡಿ ಕೊಡುವಾಗ ಇರಲಿ ಎಚ್ಚರ: ಗಂಟಲಿನಲ್ಲಿ ಶೇಂಗಾ ಬೀಜ ಸಿಲುಕಿ 3 ವರ್ಷದ ಕಂದಮ್ಮ ಸಾ*ವು

 

TAGGED:LPG cylinder will be available in Instamart from now on!
Share This Article
Facebook Twitter Copy Link Print
Previous Article Tragedy ಮಕ್ಕಳಿಗೆ ತಿಂಡಿ ಕೊಡುವಾಗ ಇರಲಿ ಎಚ್ಚರ: ಗಂಟಲಿನಲ್ಲಿ ಶೇಂಗಾ ಬೀಜ ಸಿಲುಕಿ 3 ವರ್ಷದ ಕಂದಮ್ಮ ಸಾ*ವು

Popular Posts

Instamart LPG ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!

3 Min Read

Tragedy ಮಕ್ಕಳಿಗೆ ತಿಂಡಿ ಕೊಡುವಾಗ ಇರಲಿ ಎಚ್ಚರ: ಗಂಟಲಿನಲ್ಲಿ ಶೇಂಗಾ ಬೀಜ ಸಿಲುಕಿ 3 ವರ್ಷದ ಕಂದಮ್ಮ ಸಾ*ವು

1 Min Read

Bomb Threat ಬಾಂಬ್ ಬೆದರಿಕೆ ಇಮೇಲ್; ಪಾಸ್‌ಪೋರ್ಟ್ ಹಾಗೂ ಅಂಚೆ ಕಚೇರಿಗಳಲ್ಲಿ ಬಿಗಿ ಬಂದೋಬಸ್ತ್

2 Min Read

UGCET Result ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ; ಜುಲೈ 24ರವರೆಗೆ ಪ್ರವೇಶಕ್ಕೆ ಅವಕಾಶ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Electrical Safety Tips ಮಳೆಗಾಲದಲ್ಲಿ ಕರೆಂಟ್ ಶಾಕ್ ಹೊಡೆಯುವ ಭಯವೇ? ಹಾಗಿದ್ದರೆ ತಕ್ಷಣ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ

2 Min Read
ಪ್ರಮುಖಕರ್ನಾಟಕದೇಶ

SIR ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕ ವಿಸ್ತರಣೆ: ಹೊಸ ವೇಳಾಪಟ್ಟಿ ಪ್ರಕಟ

2 Min Read
ಪ್ರಮುಖಕರ್ನಾಟಕ

UT Khader 15 ನಿಮಿಷ ಲೇಟಾದ್ರೆ 108 ಆ್ಯಂಬುಲೆನ್ಸ್‌ಗೆ ₹5,000 ಫೈನ್; ಆರೋಗ್ಯ ಇಲಾಖೆಯಿಂದ ಹೊಸ ನಿಯಮ ಜಾರಿ

2 Min Read
ಪ್ರಮುಖCrimeಕರ್ನಾಟಕ

Staff Suspended ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ: 8 ಅಧಿಕಾರಿಗಳು ಸಸ್ಪೆಂಡ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?