Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Bomb Threat ಬಾಂಬ್ ಬೆದರಿಕೆ ಇಮೇಲ್; ಪಾಸ್‌ಪೋರ್ಟ್ ಹಾಗೂ ಅಂಚೆ ಕಚೇರಿಗಳಲ್ಲಿ ಬಿಗಿ ಬಂದೋಬಸ್ತ್
ಪ್ರಮುಖCrimeದೇಶ

Bomb Threat ಬಾಂಬ್ ಬೆದರಿಕೆ ಇಮೇಲ್; ಪಾಸ್‌ಪೋರ್ಟ್ ಹಾಗೂ ಅಂಚೆ ಕಚೇರಿಗಳಲ್ಲಿ ಬಿಗಿ ಬಂದೋಬಸ್ತ್

Share
2 Min Read
SHARE

newsics.com | ನ್ಯೂಸಿಕ್ಸ್

ಗಾಂಧಿನಗರ: ಗುಜರಾತ್‌ನ ಪ್ರಮುಖ ನಗರಗಳಲ್ಲಿರುವ ಪಾಸ್‌ಪೋರ್ಟ್ ಕಚೇರಿಗಳು ಮತ್ತು ಅಂಚೆ ಕಚೇರಿಗಳಿಗೆ ಬಾಂಬ್ ಇಡುವುದಾಗಿ ಬಂದಿರುವ ಅನಾಮಧೇಯ ಇಮೇಲ್ ಇಡೀ ರಾಜ್ಯದಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ರಾಜ್ಯದ ಭದ್ರತಾ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ತೀವ್ರ ಕಟ್ಟೆಚ್ಚರ ವಹಿಸಿದ್ದು, ಇಡೀ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ವಿಶೇಷವಾಗಿ ಸೂರತ್, ನವಸಾರಿ, ಭರೂಚ್ ಮತ್ತು ನರ್ಮದಾ ಜಿಲ್ಲೆಗಳ ಕಚೇರಿಗಳಿಗೆ ಈ ಬೆದರಿಕೆ ಇಮೇಲ್‌ಗಳು ಬಂದಿದ್ದು, ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

ಬೆದರಿಕೆ ಕರೆ ಬಂದ ತಕ್ಷಣವೇ ಪೊಲೀಸರು ಬಿಗಿಯಾದ ಬಂದೋಬಸ್ತ್ ಕೈಗೊಂಡು ಕಾರ್ಯಾಚರಣೆ ನಡೆಸಿದರು. ಸೂರತ್‌ನ ಉಮ್ರಾ ಪ್ರದೇಶದ ಪಾಸ್‌ಪೋರ್ಟ್ ಕಚೇರಿ ಹಾಗೂ ನಾನ್‌ಪುರದ ಮುಖ್ಯ ಅಂಚೆ ಕಚೇರಿಯಲ್ಲಿ ಬಾಂಬ್ ಪತ್ತೆ ದಳ (BDDS) ಮತ್ತು ಶ್ವಾನದಳ ತೀವ್ರ ಶೋಧ ನಡೆಸಿತು. ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ತಕ್ಷಣವೇ ಹೊರಗೆ ಕಳುಹಿಸಿ ತಪಾಸಣೆ ನಡೆಸಲಾಯಿತು.

ನವಸಾರಿಯ ಪ್ರಮುಖ ಅಂಚೆ ಕಚೇರಿಯಲ್ಲೂ ಹೀಗೆಯೇ ತಪಾಸಣೆ ನಡೆಸಲಾಯಿತು. ನರ್ಮದಾ ಜಿಲ್ಲೆಯ ರಾಜಪೀಪ್ಲಾದ ಮುಖ್ಯ ಅಂಚೆ ಕಚೇರಿ ಹಾಗೂ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ದೇವಧಾ ಅವರ ನೇತೃತ್ವದಲ್ಲೇ ಬಿಗಿ ತಪಾಸಣೆ ನಡೆಯಿತು. ರಾಜ್‌ಪಿಪ್ಲಾ ಟೌನ್ ಪೊಲೀಸ್, ವಿಶೇಷ ಕಾರ್ಯಾಚರಣೆ ಗುಂಪು (SOG) ಹಾಗೂ ಬಾಂಬ್ ದಳಗಳು ಪಾರ್ಸೆಲ್ ವಿಭಾಗ ಸೇರಿದಂತೆ ಪ್ರತಿಯೊಂದು ಮೂಲೆಯನ್ನೂ ಜಾಲಾಡಿದರು.

ಗಂಟೆಗಳ ಕಾಲ ನಡೆದ ಈ ತೀವ್ರ ಶೋಧದ ನಂತರ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗದ ಕಾರಣ ಅಧಿಕಾರಿಗಳು ಮತ್ತು ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ. ತಪಾಸಣೆಯ ಬಳಿಕ ಎಂದಿನಂತೆ ಕಚೇರಿಗಳ ಕೆಲಸ ಕಾರ್ಯಗಳು ಮುಂದುವರಿದಿವೆ.

ಈ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಗೃಹ ಇಲಾಖೆಯು ಇಮೇಲ್ ಕಳುಹಿಸಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಆದೇಶಿಸಿದೆ. ಸದ್ಯ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ಇಮೇಲ್ ಬಂದಿರುವ ಐಪಿ (IP) ವಿಳಾಸವನ್ನು ಆಧರಿಸಿ ತಾಂತ್ರಿಕ ಹಾಗೂ ಡಿಜಿಟಲ್ ಪುರಾವೆಗಳ ಮೂಲಕ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 

UGCET Result ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ; ಜುಲೈ 24ರವರೆಗೆ ಪ್ರವೇಶಕ್ಕೆ ಅವಕಾಶ

TAGGED:#Gujarat #Bomb Threat #Passport Office #High Alert #news #newsics
Share This Article
Facebook Twitter Copy Link Print
Previous Article UGCET Result ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ; ಜುಲೈ 24ರವರೆಗೆ ಪ್ರವೇಶಕ್ಕೆ ಅವಕಾಶ
Next Article Tragedy ಮಕ್ಕಳಿಗೆ ತಿಂಡಿ ಕೊಡುವಾಗ ಇರಲಿ ಎಚ್ಚರ: ಗಂಟಲಿನಲ್ಲಿ ಶೇಂಗಾ ಬೀಜ ಸಿಲುಕಿ 3 ವರ್ಷದ ಕಂದಮ್ಮ ಸಾ*ವು

Popular Posts

Instamart LPG ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!

3 Min Read

Tragedy ಮಕ್ಕಳಿಗೆ ತಿಂಡಿ ಕೊಡುವಾಗ ಇರಲಿ ಎಚ್ಚರ: ಗಂಟಲಿನಲ್ಲಿ ಶೇಂಗಾ ಬೀಜ ಸಿಲುಕಿ 3 ವರ್ಷದ ಕಂದಮ್ಮ ಸಾ*ವು

1 Min Read

Bomb Threat ಬಾಂಬ್ ಬೆದರಿಕೆ ಇಮೇಲ್; ಪಾಸ್‌ಪೋರ್ಟ್ ಹಾಗೂ ಅಂಚೆ ಕಚೇರಿಗಳಲ್ಲಿ ಬಿಗಿ ಬಂದೋಬಸ್ತ್

2 Min Read

UGCET Result ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ; ಜುಲೈ 24ರವರೆಗೆ ಪ್ರವೇಶಕ್ಕೆ ಅವಕಾಶ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Electrical Safety Tips ಮಳೆಗಾಲದಲ್ಲಿ ಕರೆಂಟ್ ಶಾಕ್ ಹೊಡೆಯುವ ಭಯವೇ? ಹಾಗಿದ್ದರೆ ತಕ್ಷಣ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ

2 Min Read
ಪ್ರಮುಖಕರ್ನಾಟಕದೇಶ

SIR ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕ ವಿಸ್ತರಣೆ: ಹೊಸ ವೇಳಾಪಟ್ಟಿ ಪ್ರಕಟ

2 Min Read
ಪ್ರಮುಖಕರ್ನಾಟಕ

UT Khader 15 ನಿಮಿಷ ಲೇಟಾದ್ರೆ 108 ಆ್ಯಂಬುಲೆನ್ಸ್‌ಗೆ ₹5,000 ಫೈನ್; ಆರೋಗ್ಯ ಇಲಾಖೆಯಿಂದ ಹೊಸ ನಿಯಮ ಜಾರಿ

2 Min Read
ಪ್ರಮುಖCrimeಕರ್ನಾಟಕ

Staff Suspended ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ: 8 ಅಧಿಕಾರಿಗಳು ಸಸ್ಪೆಂಡ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?