Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Fire Mishap ಮರಕ್ಕೆ ಡಿಕ್ಕಿ ಹೊಡೆದು ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್; ಹಾಲಿನ ಲಾರಿಗೂ ವ್ಯಾಪಿಸಿದ ಬೆಂಕಿ
ಪ್ರಮುಖಕರ್ನಾಟಕ

Fire Mishap ಮರಕ್ಕೆ ಡಿಕ್ಕಿ ಹೊಡೆದು ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್; ಹಾಲಿನ ಲಾರಿಗೂ ವ್ಯಾಪಿಸಿದ ಬೆಂಕಿ

Share
1 Min Read
SHARE

newsics.com | ನ್ಯೂಸಿಕ್ಸ್

ಚಿಕ್ಕಬಳ್ಳಾಪುರ: ಅತಿ ವೇಗವಾಗಿ ಬಂದ ಪೆಟ್ರೋಲ್‌ ಟ್ಯಾಂಕರ್‌ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಹೊತ್ತಿ ಉರಿದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಬಳಿ ಸಂಭವಿಸಿದೆ. ಅತಿಯಾದ ವೇಗವೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪೆಟ್ರೋಲ್‌ ಟ್ಯಾಂಕರ್‌ಗೆ ಡಿಕ್ಕಿಯಾಗುತ್ತಿದ್ದಂತೆ ಇಂಧನ ಸೋರಿಕೆಯಾಗಿ ಭಾರಿ ಪ್ರಮಾಣದ ಅಗ್ನಿ ಜ್ವಾಲೆ ಸೃಷ್ಟಿಯಾಗಿದೆ. ಇದೇ ವೇಳೆ ಅದರ ಪಕ್ಕದಲ್ಲೇ ರಿವರ್ಸ್‌ ತೆಗೆದುಕೊಳ್ಳುತ್ತಿದ್ದ ಹಾಲಿನ ಟ್ಯಾಂಕರ್‌ ಲಾರಿಗೂ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಎರಡೂ ಟ್ಯಾಂಕರ್ ಲಾರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ಲಾರಿಗೆ ಬೆಂಕಿ ತಗುಲುತ್ತಿದ್ದಂತೆ ಇಬ್ಬರೂ ಲಾರಿಗಳ ಚಾಲಕರು ಸಮಯಪ್ರಜ್ಞೆ ಮೆರೆದು, ವಾಹನದಿಂದ ಹೊರಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಈ ದುರ್ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Namma Metro ಮೆಟ್ರೋ ಪ್ರಯಾಣಿಕರೇ ಗಮನಿಸಿ: ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ, ರೈಲು ಸಂಚಾರ ವಿಳಂಬ

TAGGED:#Doddaballapur #lorry #Fire mishap #milk tanker #Bangalore
Share This Article
Facebook Twitter Copy Link Print
Previous Article Namma Metro ಮೆಟ್ರೋ ಪ್ರಯಾಣಿಕರೇ ಗಮನಿಸಿ: ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ, ರೈಲು ಸಂಚಾರ ವಿಳಂಬ
Next Article Crime Case ಪ್ರೇಯಸಿಗಾಗಿ ಅಮೆರಿಕದಲ್ಲಿ ಪತ್ನಿ ಕೊ*ಲೆ; ಹೆಣದ ಫೋಟೋ ಲವ್ವರ್‌ಗೆ ಕಳಿಸಿದ ಭಾರತೀಯ ಮೂಲದ ಟೆಕ್ಕಿ

Popular Posts

Justice Nagaprasanna ತಡೆ ತೆರವುಗೊಳಿಸಿದ ಹೈಕೋರ್ಟ್: ಅರ್ಜಿದಾರ ನ್ಯಾಯವಾದಿಗೆ ರಕ್ಷಣೆ ನೀಡಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ನ್ಯಾ.ನಾಗಪ್ರಸನ್ನ

1 Min Read

E85 fuel ಶೀಘ್ರದಲ್ಲೇ ಫ್ಲೆಕ್ಸ್-ಫ್ಯುಯೆಲ್ ಕಾರುಗಳಿಗಾಗಿ ಸಿಗಲಿದೆ ಇ85 ಎಥೆನಾಲ್ ಇಂಧನ

3 Min Read

CM made poori ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ! ವೈರಲ್ ವಿಡಿಯೋ ನೋಡಿ

1 Min Read

Fire tragedy ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 28 ಮಂದಿ ಸಾವು, ಹಲವರಿಗೆ ಗಾಯ

2 Min Read

You Might Also Like

ಕರ್ನಾಟಕಪ್ರಮುಖ

Government Bus ಇನ್ಮುಂದೆ ಸರ್ಕಾರಿ ಬಸ್‌ಗಳಲ್ಲಿ ಧೂಮಪಾನ ಮಾಡಿದರೆ, ಗುಟ್ಕಾ ಜಗಿದರೆ, ಉಗುಳಿದರೆ ಭಾರೀ ದಂಡ!

1 Min Read
ಕರ್ನಾಟಕದೇಶಪ್ರಮುಖ

Medical seat fraud ಮೆಡಿಕಲ್ ಸೀಟ್ ವಂಚನೆ: ಮಾಜಿ ಸಚಿವ ಆರ್‌.ಎಲ್.ಜಾಲಪ್ಪ ಸೊಸೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ

1 Min Read
ದೇಶಪ್ರಮುಖ

TCS ಲೈಂಗಿಕ ಕಿರುಕುಳ ಕೇಸ್: ಗರ್ಭಿಣಿ ನಿಧಾ ಖಾನ್‌ಗೆ ಜಾಮೀನು

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Swati’s second marriage ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವಾತಿ ರೆಡ್ಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?