Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Mumbai Rian ಮುಂಬೈನಲ್ಲಿ ಭಾರೀ‌ ಮಳೆ: 8 ಜನ ಸಾವು, ಶಾಲೆಗಳಿಗೆ ರಜೆ, ಜನಜೀವನ ಅಸ್ತವ್ಯಸ್ತ, ವಿಡಿಯೋ ನೋಡಿ
ದೇಶಪ್ರಮುಖವೈರಲ್

Mumbai Rian ಮುಂಬೈನಲ್ಲಿ ಭಾರೀ‌ ಮಳೆ: 8 ಜನ ಸಾವು, ಶಾಲೆಗಳಿಗೆ ರಜೆ, ಜನಜೀವನ ಅಸ್ತವ್ಯಸ್ತ, ವಿಡಿಯೋ ನೋಡಿ

Share
3 Min Read
SHARE

newsics.com | ನ್ಯೂಸಿಕ್ಸ್

ಮುಂಬೈ(ಮಹಾರಾಷ್ಟ್ರ): ದೇಶದ ವಾಣಿಜ್ಯ ನಗರಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮೂರು ಅಂತಸ್ತಿನ ಕಟ್ಟಡ ಕುಸಿದು ಆರು ಜನ ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನ ಮಾನಖುರ್ದ್​ನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅಧಿಕಾರಿಗಳ ಪ್ರಕಾರ, ಈ ಘಟನೆ ರಾತ್ರಿ 8.30 ರ ಸುಮಾರಿಗೆ ಮಂಡಲ ಪ್ರದೇಶದ ಹನುಮಾನ್ ಮಂದಿರದ ಹಿಂದೆ ಇರುವ ಜನತಾ ನಗರದಲ್ಲಿ ಸಂಭವಿಸಿದೆ.
ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಶತಾಬ್ಧಿ ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪ್ಪಿದ್ದಾರೆ. ಇನ್ನೂ ರಾಜವಾಡಿ ಆಸ್ಪತ್ರೆಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಓರ್ವ ಗಾಯಾಳುಗೆ ರಾಜವಾಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಮೂರು ಅಂತಸ್ತಿನ ರಚನೆಯ ಭಾಗವಾಗಿರುವ ಎರಡರಿಂದ ಮೂರು ವಸತಿ ಕಟ್ಟಡಗಳು ಕುಸಿದು ಬಿದ್ದಿದ್ದು, ಮುಂಬೈ ಅಗ್ನಿಶಾಮಕ ದಳ, ಪೊಲೀಸರು, BMC ವಾರ್ಡ್ ಕಚೇರಿ ಮತ್ತು ‘108’ ಆಂಬ್ಯುಲೆನ್ಸ್ ಸೇವೆಗಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ NDRF ತಂಡ ಕೂಡ ಆಗಮಿಸಿ ಅವಶೇಷಗಳಡಿ ಸಿಲುಕಿರುವ ಶಂಕೆಯಲ್ಲಿ ರಕ್ಷಣಾ ಕಾಯಾರ್ಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶದ ವಾಣಿಜ್ಯ ನಗರಿಯಲ್ಲಿ ಭಾರಿ ಮಳೆಯಾಗುತ್ತಿದೆ. ಧಾರಾಕಾರ ವರ್ಷಧಾರೆ ಹಾಗೂ ಬಿರುಗಾಳಿಯ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಥಾಣೆ, ರತ್ನಗಿರಿ, ರಾಯಗಡ ಜಿಲ್ಲೆಗಳ ಶಾಲೆಗಳಿಗೆ ಸೋಮವಾರ ರಜೆ ನೀಡಲಾಗಿದೆ.
ಮಳೆ ಹಿನ್ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿ, ಪುರಸಭೆ ಆಡಳಿತವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ನಾಗರಿಕರು ಅಗತ್ಯವಿದ್ದರೆ ಮಾತ್ರ ತಮ್ಮ ಮನೆಗಳಿಂದ ಹೊರಬರುವಂತೆ ಮುಂಬೈ ಮಹಾನಗರ ಪಾಲಿಕೆಯು ಸೂಚನೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ, ಗ್ರೇಟರ್ ಮುಂಬೈ ಪ್ರದೇಶ ಮತ್ತು ಅದರ ಉಪನಗರಗಳಲ್ಲಿ ಸುಮಾರು 150 ರಿಂದ 170 ಮಿಮೀ ಮಳೆಯಾಗಿದೆ. ಗಂಟೆಗೆ 72ರಿಂದ 75 ಕಿಮೀ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಈ ಪ್ರದೇಶದಾದ್ಯಂತ 142 ಮರಗಳು ಅಥವಾ ಕೊಂಬೆಗಳು ಬಿದ್ದ ಘಟನೆಗಳು ವರದಿಯಾಗಿವೆ. ಈ ಪರಿಸ್ಥಿತಿಯ ನಡುವೆ, ಮುಂಬೈ ಮಹಾನಗರ ಪಾಲಿಕೆಯು ವಾರಾಂತ್ಯದಲ್ಲಿ ವಿವಿಧ ಸಂಸ್ಥೆಗಳ ಸುಮಾರು 10,000 ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ, ಗ್ರೇಟರ್ ಮುಂಬೈ ಪ್ರದೇಶ ಮತ್ತು ಅದರ ಉಪನಗರಗಳಲ್ಲಿ ಸುಮಾರು 150 ರಿಂದ 170 ಮಿಮೀ ಮಳೆಯಾಗಿದೆ. ಗಂಟೆಗೆ 72ರಿಂದ 75 ಕಿಮೀ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಈ ಪ್ರದೇಶದಾದ್ಯಂತ 142 ಮರಗಳು ಅಥವಾ ಕೊಂಬೆಗಳು ಬಿದ್ದ ಘಟನೆಗಳು ವರದಿಯಾಗಿವೆ. ಈ ಪರಿಸ್ಥಿತಿಯ ನಡುವೆ, ಮುಂಬೈ ಮಹಾನಗರ ಪಾಲಿಕೆಯು ವಾರಾಂತ್ಯದಲ್ಲಿ ವಿವಿಧ ಸಂಸ್ಥೆಗಳ ಸುಮಾರು 10,000 ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ವರದಿಯಾಗಿದೆ.
ಕುರ್ಲಾ ಕಮಾನಿಯಲ್ಲಿರುವ ಗೋಮ್ಸ್ ಟೌನ್ ಕಟ್ಟಡದ ಬಳಿ ಮರವೊಂದು ಬಿದ್ದು 63 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ, ಆರೆಕಾಲೋನಿ ಪ್ರದೇಶದಲ್ಲಿ 18 ವರ್ಷದ ಯುವಕನೋರ್ವ ಮರ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ, ಆರೆ ಡೈರಿ ಬಳಿ ನಿರ್ಮಾಣ ಹಂತದಲ್ಲಿದ್ದ ಖಾಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ.
ಸೋಮವಾರ ಥಾಣೆ ಜಿಲ್ಲೆಗೂ ‘ಆರೆಂಜ್ ಅಲರ್ಟ್’ ನೀಡಲಾಗಿದ್ದು, ಜಿಲ್ಲೆಯಾದ್ಯಂತ ಎಲ್ಲಾ ಅಂಗನವಾಡಿಗಳು ಹಾಗೂ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಶ್ರೀಕೃಷ್ಣ ಪಾಂಚಾಲ್ ತಡರಾತ್ರಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಜಿಲ್ಲೆಯ ತುರ್ತು ಪ್ರತಿಕ್ರಿಯೆಗೆ ಸಂಬಂಧಪಟ್ಟವರು ಸಿದ್ಧವಾಗಿರಲು ಸೂಚನೆ ನೀಡಲಾಗಿದೆ.

ಇದಲ್ಲದೆ, ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ವಿಪತ್ತು ನಿರ್ವಹಣಾ ವಿಭಾಗ, ಅಗ್ನಿಶಾಮಕ ಇಲಾಖೆ ಮತ್ತು ಇತರ ಸಂಬಂಧಿತ ಇಲಾಖೆಗಳಿಗೆ ಜಾಗರೂಕರಾಗಿರಲು ನಿರ್ದೇಶನ ನೀಡಿದೆ. ನಾಗರಿಕರು ತೀರಾ ಅಗತ್ಯವಿಲ್ಲದಿದ್ದರೆ ತಮ್ಮ ಮನೆಗಳಿಂದ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ.
ರತ್ನಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಸಾಮಾನ್ಯ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಸೋಮವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ನಿರಂತರ ಮಳೆಯಿಂದಾಗಿ ಜಗಬುಡಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಪಟ್ಟಣಕ್ಕೆ ಪ್ರವಾಹದ ಅಪಾಯ ಎದುರಾಗಿದೆ. ಅಲ್ಲದೆ, ವಶಿಷ್ಠಿ ನದಿಯೂ ಎಚ್ಚರಿಕೆಯ ಮಟ್ಟವನ್ನು ಮೀರಿದೆ. ಪ್ರವಾಹ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು, ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಕ್ರಮ ತೆಗೆದುಕೊಂಡಿದೆ ಮತ್ತು ನಾಗರಿಕರು ಜಾಗರೂಕರಾಗಿರಲು ಒತ್ತಾಯಿಸಿದೆ.

#WATCH | Mumbai, Maharashtra: Morning visuals from the spot after two to three shanties in a 'ground-plus-three' structure collapsed in Mankhurd's Janata Nagar. A total of 6 people died and one person was injured. pic.twitter.com/PEpyXOycOW

— ANI (@ANI) July 6, 2026

 

 

TAGGED:Heavy rains in Mumbai: 8 people deadlife disruptedschools closedWatch Video
Share This Article
Facebook Twitter Copy Link Print
Previous Article Pak beauty cream ಪಾಕಿಸ್ತಾನದ ‘ಗೋರಿ ಬ್ಯೂಟಿ ಕ್ರೀಮ್’ ಬಳಸಿದವರಿಗೆ‌ ಕಿಡ್ನಿ ಸಮಸ್ಯೆ; ತಕ್ಷಣ ನಿಷೇಧಕ್ಕೆ ಮಹಾರಾಷ್ಟ್ರ ಆದೇಶ!
Next Article Iranians’ outrage ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಹತ್ಯೆಗೆ ಟೆಹ್ರಾನ್‌ನಲ್ಲಿ ಬಹಿರಂಗ ಕರೆ: ಖಮೇನಿ ಅಂತ್ಯಕ್ರಿಯೆ ವೇಳೆ ಭುಗಿಲೆದ್ದ ಆಕ್ರೋಶ

Popular Posts

Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ

2 Min Read

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

3 Min Read

Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

1 Min Read

Tender coconut trouble ಎಳನೀರಿನಿಂದ‌ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು

1 Min Read

You Might Also Like

ಕರ್ನಾಟಕದೇಶಪ್ರಮುಖ

Ayodhye ರಾಮಮಂದಿರದ ಹುಂಡಿ ಹಣ ದುರುಪಯೋಗ : ಗರ್ಲ್ ಫ್ರೆಂಡ್ ಗೆ ಐಫೋನ್, ಮನೆ, ಕಾರು ಖರೀದಿಸಿದ ಆರೋಪಿ

2 Min Read
ಕರ್ನಾಟಕದೇಶಪ್ರಮುಖ

Mobile ಆ್ಯಪ್ ಮೂಲಕ ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು SIR: ಇಲ್ಲಿವೆ 4 ಸರಳ ಹಂತಗಳು

3 Min Read
ಕರ್ನಾಟಕದೇಶಪ್ರಮುಖ

Ayodhye ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಚಂಪತ್‌ ರಾಯ್‌ ರಾಜೀನಾಮೆ ಅಂಗೀಕರಿಸಿದ ಟ್ರಸ್ಟ್

1 Min Read
ದೇಶಪ್ರಮುಖ

Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?