Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > U T Khader ರಾಜ್ಯದ ಆಂಬುಲೆನ್ಸ್ ಚಾಲಕರಿಗೆ ಡೆಡ್‌ಲೈನ್: ಕರೆಬಂದ 15‌ ನಿಮಿಷದಲ್ಲಿ ಹಾಜರಾಗದಿದ್ರೆ ಡ್ರೈವರ್‌ಗೆ 5 ಸಾವಿರ ರೂ. ದಂಡ!
ಕರ್ನಾಟಕಪ್ರಮುಖ

U T Khader ರಾಜ್ಯದ ಆಂಬುಲೆನ್ಸ್ ಚಾಲಕರಿಗೆ ಡೆಡ್‌ಲೈನ್: ಕರೆಬಂದ 15‌ ನಿಮಿಷದಲ್ಲಿ ಹಾಜರಾಗದಿದ್ರೆ ಡ್ರೈವರ್‌ಗೆ 5 ಸಾವಿರ ರೂ. ದಂಡ!

Share
1 Min Read
SHARE

newsics.com | ನ್ಯೂಸಿಕ್ಸ್

ಉಡುಪಿ: ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ವೇಗಗೊಳಿಸಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ.

ಇನ್ಮುಂದೆ ತುರ್ತು ಕರೆ ಬಂದ ಕೇವಲ 15 ನಿಮಿಷಗಳಲ್ಲಿ 108 ಆಂಬುಲೆನ್ಸ್ಗಳು ನಿಗದಿತ ಸ್ಥಳಕ್ಕೆ ತಲುಪಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿ ವಿಳಂಬ ಮಾಡಿದರೆ, ಸಂಬಂಧಪಟ್ಟ ಆಂಬುಲೆನ್ಸ್ ಚಾಲಕರಿಗೆ 5,000 ರೂಪಾಯಿ ಭಾರಿ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಆಂಬುಲೆನ್ಸ್ ಸೇವೆಗಳ ಮಾರ್ಗಸೂಚಿಯ ಪ್ರಕಾರ ತುರ್ತು ಕರೆ ಬಂದ 20 ನಿಮಿಷಗಳ ಒಳಗೆ ವಾಹನ ಸ್ಥಳಕ್ಕೆ ತಲುಪಬೇಕಿರುತ್ತದೆ. ಜೀವ ಉಳಿಸುವಲ್ಲಿ ಅತ್ಯಂತ ನಿರ್ಣಾಯಕವಾಗಿರುವ ‘ಗೋಲ್ಡನ್ ಅವರ್’ (ಚಿನ್ನದ ಸಮಯ) ಪರಿಕಲ್ಪನೆಯನ್ನು ಆಧರಿಸಿ ಈ ನಿಯಮ ರೂಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತಷ್ಟು ಕಠಿಣ ನಿಯಮ ರೂಪಿಸಲಾಗುತ್ತಿದ್ದು, ಕಾಲಮಿತಿಯನ್ನು 15 ನಿಮಿಷಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆಪತ್ತಿನಲ್ಲಿರುವಾಗ ಮೊದಲ 15 ನಿಮಿಷಗಳಲ್ಲಿ ಚಾಲಕರು ಸ್ಥಳಕ್ಕೆ ಧಾವಿಸಿದರೆ ಶೇಕಡಾ 90 ರಷ್ಟು ಆರೋಗ್ಯ ಸಮಸ್ಯೆಗಳನ್ನು ಹಾಗೂ ಪ್ರಾಣಾಪಾಯವನ್ನು ತಡೆಯಲು ಸಾಧ್ಯವಾಗುತ್ತದೆ. ಸದ್ಯ ರಾಜ್ಯಾದ್ಯಂತ 700 ರಿಂದ 800 ಆಂಬುಲೆನ್ಸ್ಗಳು ಕಾರ್ಯಾಚರಣೆಯಲ್ಲಿದ್ದು, ಇಡೀ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವ ಅಗತ್ಯವಿದೆ. ಈ ಹೊಸ ದಂಡದ ನಿಯಮ ಹಾಗೂ ಮಾರ್ಗಸೂಚಿಗಳ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಇಡೀ ಪ್ರಕ್ರಿಯೆ ಸಂಪೂರ್ಣವಾಗಿ ಜಾರಿಗೆ ಬರಲು ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

 

TAGGED:Deadline for state ambulance drivers
Share This Article
Facebook Twitter Copy Link Print
Previous Article GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article Pak beauty cream ಪಾಕಿಸ್ತಾನದ ‘ಗೋರಿ ಬ್ಯೂಟಿ ಕ್ರೀಮ್’ ಬಳಸಿದವರಿಗೆ‌ ಕಿಡ್ನಿ ಸಮಸ್ಯೆ; ತಕ್ಷಣ ನಿಷೇಧಕ್ಕೆ ಮಹಾರಾಷ್ಟ್ರ ಆದೇಶ!

Popular Posts

Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ

2 Min Read

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

3 Min Read

Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

1 Min Read

Tender coconut trouble ಎಳನೀರಿನಿಂದ‌ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು

1 Min Read

You Might Also Like

ಕರ್ನಾಟಕದೇಶಪ್ರಮುಖ

Ayodhye ರಾಮಮಂದಿರದ ಹುಂಡಿ ಹಣ ದುರುಪಯೋಗ : ಗರ್ಲ್ ಫ್ರೆಂಡ್ ಗೆ ಐಫೋನ್, ಮನೆ, ಕಾರು ಖರೀದಿಸಿದ ಆರೋಪಿ

2 Min Read
ಕರ್ನಾಟಕದೇಶಪ್ರಮುಖ

Mobile ಆ್ಯಪ್ ಮೂಲಕ ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು SIR: ಇಲ್ಲಿವೆ 4 ಸರಳ ಹಂತಗಳು

3 Min Read
ಕರ್ನಾಟಕದೇಶಪ್ರಮುಖ

Ayodhye ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಚಂಪತ್‌ ರಾಯ್‌ ರಾಜೀನಾಮೆ ಅಂಗೀಕರಿಸಿದ ಟ್ರಸ್ಟ್

1 Min Read
ದೇಶಪ್ರಮುಖ

Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?