Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Chanakya ಕೋಪ ಬಂದಾಗ ಹೀಗೆ ಮಾಡಿ…
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Chanakya ಕೋಪ ಬಂದಾಗ ಹೀಗೆ ಮಾಡಿ…

Share
2 Min Read
SHARE

newsics.com | ನ್ಯೂಸಿಕ್ಸ್

ಮನುಷ್ಯನ ದೊಡ್ಡ ಶತ್ರು ಕೋಪ. ಇದು ಸಂಬಂಧವನ್ನು ಹಾಳು ಮಾತ್ರವಲ್ಲ ನಾವು ಜೀವನಪರ್ಯಂತ ವಿಷಾದಿಸುವಂತೆ ಮಾಡುತ್ತವೆ. ಚಾಣಕ್ಯರ ಪ್ರಕಾರ ಕೋಪವು ಬೆಂಕಿಯಾಗಿದ್ದು, ಆ ಕೋಪ ಮೊದಲು ನಮ್ಮನ್ನೇ ಸುಟ್ಟು ಹಾಕುತ್ತದೆ. ಹಾಗಾಗಿ ಕೋಪವನ್ನು ನಿಯಂತ್ರಿಸುವುದು ತುಂಬಾನೇ ಮುಖ್ಯ.

ವ್ಯಕ್ತಿಯು ತನ್ನ ಕೋಪವನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ಮತ್ತು ನಿಯಂತ್ರಿಸಲು ಕಲಿತರೆ, ಅವನು ಜೀವನದಲ್ಲಿ ಅನೇಕ ತೊಂದರೆಗಳನ್ನು ತಪ್ಪಿಸಬಹುದು ಎಂದು ಚಾಣಕ್ಯರು ಹೇಳಿದ್ದಾರೆ. ಜೊತೆಗೆ ಅವರು ಕೋಪವನ್ನು ನಿಯಂತ್ರಿಸಲು ಒಂದಷ್ಟು ಸಲಹೆಗಳನ್ನು ಕೂಡ ನೀಡಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ, ತನ್ನ ಕೋಪವನ್ನು ಜಯಿಸಬಲ್ಲ ವ್ಯಕ್ತಿಯು ಜೀವನದ ಅನೇಕ ಸವಾಲುಗಳನ್ನು ಹೆಚ್ಚಿನ ಬುದ್ಧಿವಂತಿಕೆಯಿಂದ ಜಯಿಸಬಹುದು. ಸ್ವಯಂ ನಿಯಂತ್ರಣ, ತಾಳ್ಮೆ ಮತ್ತು ವಿವೇಕವು ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಕೋಪವು ಪ್ರಾಬಲ್ಯ ಸಾಧಿಸಲು ಬಿಡುವ ಬದಲು ಅದನ್ನು ನಿಯಂತ್ರಿಸುವ ಕಲೆಯನ್ನು ಕಲಿಯುವುದು ನಿಜವಾದ ಬುದ್ಧಿವಂತಿಕೆ ಮತ್ತು ಬಲವಾದ ವ್ಯಕ್ತಿತ್ವದ ಸಂಕೇತವೆಂದು ಅವರು ಹೇಳಿದ್ದಾರೆ.

ಶಾಂತಚಿತ್ತರಾಗಿ:

ಕೋಪ ಬಂದಾಗ ತಕ್ಷಣ ಪ್ರತಿಕ್ರಿಯಿಸುವ ಬದಲು, ಸ್ವಲ್ಪ ಸಮಯ ಶಾಂತವಾಗಿರಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ, ಸ್ವಲ್ಪ ನೀರು ಕುಡಿಯಿರಿ ಅಥವಾ ಸ್ವಲ್ಪ ಸಮಯದವರೆಗೆ ಪರಿಸ್ಥಿತಿಯಿಂದ ದೂರವಿರಿ. ಈ ಸಣ್ಣ ವಿರಾಮವು ದೊಡ್ಡ ವಾದವನ್ನು ತಪ್ಪಿಸಬಹುದು.

Vastu Tips ತುಳಸಿ ಗಿಡದಲ್ಲಿ ಅತಿಯಾಗಿ ಮೊಗ್ಗು ಬೆಳೆದರೆ ಏನರ್ಥ? ವಾಸ್ತು ದೋಷ ನಿವಾರಣೆಗೆ ಇಲ್ಲಿದೆ ದಿವ್ಯ ಪರಿಹಾರಗಳು!

ಯೋಚಿಸಿ ಮಾತನಾಡಿ: 

ಕೋಪದಲ್ಲಿ ಮಾತನಾಡುವ ಕಠಿಣ ಮಾತುಗಳು ಸಂಬಂಧಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಒಮ್ಮೆ ಮಾತನಾಡಿದ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಏನನ್ನಾದರೂ ಹೇಳುವ ಮೊದಲು, ಅದು ನಿಜವಾಗಿಯೂ ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ಯೋಚಿಸುವುದು ಮುಖ್ಯ.

ಸಮಸ್ಯೆಯ ಮೂಲ ಅರಿಯಿರಿ: 

ಪ್ರತಿಯೊಬ್ಬರ ನಡವಳಿಕೆಯ ಹಿಂದೆಯೂ ಒಂದು ಕಾರಣವಿರಬಹುದು. ಒಬ್ಬ ವ್ಯಕ್ತಿಯ ನಡವಳಿಕೆ ನಿಮಗೆ ಕೋಪ ತರಿಸುತ್ತಿದೆ ಎಂದಾದ್ರೆ ಆ ವ್ಯಕ್ತಿಯ ಮೇಲೆ ಕೋಪಗೊಳ್ಳುವ ಬದಲು, ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇದರಿಂದ ಸಂಬಂಧ ಹಾಳಾಗುವುದಿಲ್ಲ.

ಛಲದ ಕೋಪವಾಗಿರಲಿ: 

ಚಾಣಕ್ಯರ ಸಿದ್ಧಾಂತದ ಪ್ರಕಾರ, ನಕಾರಾತ್ಮಕ ಭಾವನೆಗಳನ್ನು ಸ್ಫೂರ್ತಿಯಾಗಿ ಪರಿವರ್ತಿಸಬೇಕು. ಕಠಿಣ ಪರಿಶ್ರಮ, ಸ್ವ-ಅಭಿವೃದ್ಧಿ ಮತ್ತು ಗುರಿಗಳತ್ತ ಸಾಗಲು ಕೋಪವನ್ನು ಶಕ್ತಿಯಾಗಿ ಬಳಸುವುದು ಹೆಚ್ಚು ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ.

ಸಮಾಧಾನದ ನಿರ್ಧಾರವಿರಲಿ: 

ಕೋಪದ ಸ್ಥಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ತಪ್ಪಾಗಿರುತ್ತವೆ. ಆದ್ದರಿಂದ, ಮನಸ್ಸು ಶಾಂತವಾದ ನಂತರವೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಕೋಪದಿಂದಾಗುವ ಹಾನಿಗಳೇನು?

ಅತಿಯಾದ ಕೋಪವು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಒತ್ತಡವನ್ನು ಹೆಚ್ಚಿಸುತ್ತದೆ, ಸಂಬಂಧಗಳಲ್ಲಿ ಬಿರುಕುಗಳನ್ನು ಮೂಡಿಸುತ್ತದೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು. ಮತ್ತು ಕೋಪ  ವ್ಯಕ್ತಿಯ ಖ್ಯಾತಿಯ ಮೇಲೂ ಪರಿಣಾಮ ಬೀರಬಹುದು. ಕೆಲವೊಮ್ಮೆ, ಒಂದು ಕ್ಷಣದ ಕೋಪವು ಸುಂದರ ಸಂಬಂಧಗಳನ್ನು ನಾಶಪಡಿಸಬಹುದು.

Vastu Shastra ಮನೆಗೆ ಪದೇ ಪದೇ ಹಾವು ಬರ್ತಿರೋದರ ಹಿಂದೆ ಅಡಗಿದೆ ನಿಗೂಢ ರಹಸ್ಯ, ವಾಸ್ತು ಶಾಸ್ತ್ರ ಹೇಳೋದೇನು?

TAGGED:#chanakya #anger #controle #decission #lifestyle
Share This Article
Facebook Twitter Copy Link Print
Previous Article Health | Low sperm count ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕುಸಿತ ಸಮಸ್ಯೆ ಹೆಚ್ಚಳ! ತಜ್ಞರು ಹೇಳಿದ್ದೇನು?
Next Article ASTRO ಇಂದು ಆಯುಷ್ಮಾನ್- ಸೌಭಾಗ್ಯ ಯೋಗ: ಈ ರಾಶಿಗಳ ಜನರಿಗೆ ಭಾರೀ ನೆಮ್ಮದಿ

Popular Posts

PSI Arrest ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಮಂಕಿ ಠಾಣೆ ಪಿಎಸ್‌ಐ ಬಂಧನ

1 Min Read

Magical car ಬೆಂಗಳೂರಿನ ಹೈವೇಯಲ್ಲಿ ತಡರಾತ್ರಿ ಟೆಕ್ಕಿ ಬೈಕ್ ಬೆನ್ನತ್ತಿದ ಚಾಲಕನಿಲ್ಲದ ಮಾಯಾವಿ ಕಾರು! ಚಳಿಯಲ್ಲೂ ಬೆವರಿದ ರೈಡರ್…

2 Min Read

Misbehave in metro ಮೆಟ್ರೋದಲ್ಲಿ ಮಹಿಳೆ ಅಂಗಾಂಗ ಸ್ಪರ್ಶಿಸಿದ ಸಹಪ್ರಯಾಣಿಕ! ವಿಡಿಯೋ ನೋಡಿ

1 Min Read

Ramacharitamanasa ರಾಮಮಂದಿರದಲ್ಲಿದ್ದ 5 ಕೋಟಿ ಮೌಲ್ಯದ ಚಿನ್ನಲೇಪಿತ ರಾಮಚರಿತಮಾನಸ ಗ್ರಂಥ ಸುರಕ್ಷಿತವಾಗಿದ್ಯಾ? ದಾನಿಯ ಆತಂಕ

1 Min Read

You Might Also Like

ದೇಶಪ್ರಮುಖ

Student robs woman ಆನ್‌ಲೈನ್ ಗೇಮ್ ಗೀಳು: ಮಹಿಳೆಯನ್ನು ಲೂಟಿ ಮಾಡಿ ಬಾವಿಗೆ ತಳ್ಳಿದ ವಿದ್ಯಾರ್ಥಿ, 21 ಗಂಟೆ ಬಾವಿಯಲ್ಲಿದ್ದು ಬದುಕುಳಿದ ಮಹಿಳೆ!

2 Min Read
ಕರ್ನಾಟಕಪ್ರಮುಖ

Abhimanyu’s tooth is broken! ಅಭಿಮನ್ಯುವಿಗೆ ದಂತಭಗ್ನ! ಈ ಬಾರಿಯೂ ಅಂಬಾರಿ ಹೊರಲಿದ್ದಾನಾ?

1 Min Read
ಕರ್ನಾಟಕಪ್ರಮುಖ

Crime news ಹಣ, ಮೊಬೈಲ್‌ಗಾಗಿ ಪೀಡಿಸಿದ ಗೆಳೆಯನನ್ನೇ ಹತ್ಯೆಗೈದ ಯುವಕ!

1 Min Read
ದೇಶಪ್ರಮುಖ

Ketan grandfather dies ಕೇತನ್ ಸಾವಿನ ಚಿಂತೆ, ಹೃದಯಾಘಾತದಿಂದ ತಾತ ದೇವಿಚಂದ್ ಸಾವು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?