newsics.com | ನ್ಯೂಸಿಕ್ಸ್
ಮೆಟ್ರೋ ಪ್ರಯಾಣಿಕನೊಬ್ಬ ತನ್ನ ಹಿಂಭಾಗದಲ್ಲಿ ಮಗು ಎತ್ತಿಕೊಂಡು ನಿಂತಿದ್ದ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ ವಿಡಿಯೊವೊಂದು ವೈರಲ್ ಆಗಿದೆ.
ಪ್ರಯಾಣಿಕನ ನಡವಳಿಕೆಯನ್ನು ಸಹ ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಜಾಗೃತಿ ಅತ್ಯಂತ ಅಗತ್ಯವಾಗಿದೆ.
ಮೆಟ್ರೋ ರೈಲಿನಲ್ಲಿ ಮಗು ಹಿಡಿದುಕೊಂಡು ನಿಂತಿದ್ದ ಮಹಿಳೆಯ ಮುಂದೆ ಓರ್ವ ಪುರುಷ ನಿಂತಿರುತ್ತಾನೆ. ಆತ ಬೇಕೆಂದೇ ಕೈಯನ್ನು ಹಿಂದೆ ಚಾಚಿ ಮಹಿಳೆಯ ಖಾಸಗಿ ಅಂಗಾಂಗ ಸ್ಪರ್ಶಿಸುತ್ತಿರುತ್ತಾನೆ. ಮಗುವನ್ನು ಎತ್ತಿಕೊಂಡಿರುವ ಆ ಮಹಿಳೆಗೆ ಇದು ಗೊತ್ತೇ ಆಗುವುದಿಲ್ಲ.
ಆದರೆ ಸಹಪ್ರಯಾಣಿಕರೊಬ್ಬರು ಇದನ್ನು ಗಮನಿಸಿ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿರುತ್ತಾರೆ. ಹಾಗೂ ಯಾಕೆ ಈ ರೀತಿ ವರ್ತಿಸುತ್ತಿದ್ದೀರಿ ಎಂದು ಆ ವ್ಯಕ್ತಿಯನ್ನು ಪ್ರಶ್ನೆ ಮಾಡುತ್ತಾರೆ. ಆಗ ಆತ ಕೈ ಹಿಂಪಡೆಯುತ್ತಾನೆ. ಈ ವಿಡಿಯೋ ಇಲ್ಲಿದೆ ನೋಡಿ.
This man was caught on camera allegedly attempting to touch a woman inappropriately on her priv@tè p@rts while she was standing behind him on crowded public transport.
Thanks to the person who recorded the incident~footage like this can help expose inappropriate behavior,… pic.twitter.com/QTI6yyFHpX
— Admire Makusha (@fallrise__) July 4, 2026