newsics.com | ನ್ಯೂಸಿಕ್ಸ್
ಬೆಂಗಳೂರು: ಚಂದನವನದ ನಟಿ ಕೃಷಿ ತಾಪಂಡ ಮನೆಯಲ್ಲೇ ಸ್ನೇಹಿತ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಶಾಕ್ ಅವರಿಗೆ ಕುಟುಂಬವಿದ್ದು, ಪತ್ನಿ ಮತ್ತು ಮಗ ಇದ್ದಾರೆ. ವೈಶಾಕ್ ಸಾವಿನ ಬೆನ್ನಲ್ಲೇ ಆರ್ ಆರ್ ನಗರ ಠಾಣೆಗೆ ಪತ್ನಿ ಮೇಘನಾ ದೂರು ನೀಡಿದ್ದಾರೆ.
ದೂರಿನಲ್ಲಿ ವೈಶಾಕ್ ಮತ್ತು ಕೃಷಿ ತಾಪಂಡ ಅನೈತಿಕ ಸಂಬಂಧದ ಬಗ್ಗೆಯೂ ಉಲ್ಲೇಖಿಸಿರುವ ಮೇಘನಾ ಅವರು, ಕಳೆದ ಒಂದು ತಿಂಗಳಿನಿಂದ ವೈಶಾಕ್ ಮತ್ತು ನನ್ನ ನಡುವೆ ಮನಸ್ತಾನ ಉಂಟಾಗಿತ್ತು.
ಮಗನ ಬಗ್ಗೆ ಮೆಸೇಜ್ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎಂದಿದ್ದಾರೆ. ವೈಶಾಕ್ ಅವರದ್ದು ವೀರಭದ್ರನಗರದಲ್ಲಿ ಆಟೋಮೊಬೈಲ್ ಶಾಪ್ ಇತ್ತು ಎಂದೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಕೃಷಿ ಬೆಡ್ ಮೇಲೆ ವೈಶಾಕ್ ಮೃತದೇಹ
ಬುಧವಾರ ರಾತ್ರಿ 11 ಗಂಟೆಯ ಹೊತ್ತಿಗೆ ವೈಶಾಕ್ ತಂದೆಗೆ ಅಂದರೆ ನಮ್ಮ ಮಾವನವರಿಗೆ ಪೊಲೀಸರು ಕರೆ ಮಾಡಿ, ಎಲಿಗೆಂಟ್ ಟೆರಸ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಂ.403 ರಲ್ಲಿ ನಿಮ್ಮ ಮಗ ವೈಶಾಕ್ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲಿಗೆ ತೆರಳಿ ನೋಡಿದಾಗ ನಟಿ ಕೃಷಿ ತಾಪಂಡ ಫ್ಲಾಟ್‌ನ ಕೋಣೆ ಬೆಡ್ ಮೇಲೆ ವೈಶಾಕ್ ಮೃತ ದೇಹ ಅಂಗಾತ ಮಲಗಿದ್ದ ಸ್ಥಿತಿಯಲ್ಲಿತ್ತು.
ವೈಶಾಕ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲಿ ತುಂಡಾದ ಅರ್ಧ ಸೀರೆಯೂ ಬಿದ್ದಿತ್ತು. ವೈಶಾಕ್ ಕುತ್ತಿಗೆ ಭಾಗದಲ್ಲಿ ಗುರುತು ಇತ್ತು. ಅವರ ಸಾವಿನ ಬಗ್ಗೆ ನಮಗೆ ಯಾರ ಮೇಲೂ ಅನುಮಾನವಿಲ್ಲ. ಆದರೂ ಮರಣೋತ್ತರ ಪರೀಕ್ಷೆ ನಡೆಸಿ, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಹಚ್ಚುವಂತೆ ಮೇಘನಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ವೈಶಾಕ್ ಪತ್ನಿ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು, ಶವವನ್ನು ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಜಾಮೀನಿನ ಮೇಲೆ ಹೊರಗಿದ್ದ ವೈಶಾಕ್
ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಳೆದ ಫೆಬ್ರುವರಿಯಲ್ಲಿ ವೈಶಾಕ್ ಅವರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದರು. ಬೆದರಿಕೆ ಪತ್ರ ಕಳುಹಿಸಿದ ನಂತರ ಕೃಷಿ ಮನೆಯಲ್ಲೇ ಇದ್ದ ವೈಶಾಕ್ ಅವರನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ವೈಶಾಕ್ ಬಿಡುಗಡೆ ಆಗಿದ್ದರು.
ನಟ ದರ್ಶನ್ ಮಗ ಚಲಾಯಿಸುತ್ತಿದ್ದ ಕಾರು ಅಪಘಾತ, ರಸ್ತೆಯಲ್ಲೇ ವಿನೀಶ್‌ಗೆ ತರಾಟೆ