newsics.com | ನ್ಯೂಸಿಕ್ಸ್
ಬೆಂಗಳೂರು: ಕಾನೂನು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಸದ್ಯ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಕುಟುಂಬಕ್ಕೆ ಈಗ ಮತ್ತೊಂದು ಹೊಸ ತಲೆನೋವು ಎದುರಾಗಿದೆ.
ನಟ ದರ್ಶನ್ ಪುತ್ರ ವಿನೀಶ್ ಚಲಾಯಿಸುತ್ತಿದ್ದ ಐಷಾರಾಮಿ ಕಾರು ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್.ನಗರ) ಭೀಕರ ರಸ್ತೆ ಅಪಘಾತಕ್ಕೀಡಾಗಿದೆ.
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಐಷಾರಾಮಿ ಕಾರು
ಚಲಿಸುತ್ತಿದ್ದ KA 01 MU 9969 ನೋಂದಣಿ ಸಂಖ್ಯೆಯ ಫೋರ್ಡ್ ಎಂಡೋವರ್ (Ford Endeavour) ಐಷಾರಾಮಿ ಕಾರು, ಮುಂಭಾಗದಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸವಾರನಿಗೆ ಆಘಾತವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿನೀಶ್ ಅವರ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಈ ಘಟನೆಗೆ ನೇರ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿನೀಶ್‌ಗೆ ಜನರಿಂದ ತರಾಟೆ
ಅಪಘಾತ ಸಂಭವಿಸುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ದ್ವಿಚಕ್ರ ವಾಹನ ಸವಾರ ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ವಿನೀಶ್ ಮತ್ತು ಸ್ಥಳೀಯರ ನಡುವೆ ರಸ್ತೆಯಲ್ಲೇ ಭಾರೀ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆದಿದೆ. ದರ್ಶನ್ ಪುತ್ರ ಎಂಬ ಯಾವುದೇ ಮುಲಾಜಿಲ್ಲದೆ ಸಾರ್ವಜನಿಕರು ಸ್ಥಳದಲ್ಲೇ ವಿನೀಶ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗಾಗಲೇ ಕೊಲೆ ಪ್ರಕರಣದಲ್ಲಿ ತಂದೆ ದರ್ಶನ್ ಜೈಲು ಸೇರಿ ಇಡೀ ಕುಟುಂಬ ಕಷ್ಟದ ದಿನಗಳನ್ನು ಎದುರಿಸುತ್ತಿರುವ ಬೆನ್ನಲ್ಲೇ, ಈಗ ಮಗ ವಿನೀಶ್ ರಸ್ತೆ ಅಪಘಾತ ಮತ್ತು ಗದ್ದಲದ ಮೂಲಕ ಹೊಸ ಕಾನೂನು ಸಂಕಷ್ಟ ತಂದುಕೊಂಡಿರುವುದು ದರ್ಶನ್ ಕುಟುಂಬಕ್ಕೆ ಮತ್ತಷ್ಟು ಮುಜುಗರ ಹಾಗೂ ತಲೆನೋವು ತಂದಿಟ್ಟಿದೆ.
Bail application dismissed ಪೋಕ್ಸೊ ಕೇಸ್: ವಚನಾನಂದ ಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಜಾ
In-charge Ministers ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ಯಾರಿಗೆ ಯಾವ ಜಿಲ್ಲೆ?