Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Wedding conspiracy ಮದುವೆ ಸಂಭ್ರಮದಲ್ಲಿದ್ದವರಿಗೆ ಸೂತಕ! ಎರಡನೇ ಯತ್ನದಲ್ಲಿ ಸಂಚು ಯಶಸ್ಸು, ಭಾವೀ ಪತ್ನಿ ಸಿಯಾ ಬಂಧನ
ದೇಶಪ್ರಮುಖ

Wedding conspiracy ಮದುವೆ ಸಂಭ್ರಮದಲ್ಲಿದ್ದವರಿಗೆ ಸೂತಕ! ಎರಡನೇ ಯತ್ನದಲ್ಲಿ ಸಂಚು ಯಶಸ್ಸು, ಭಾವೀ ಪತ್ನಿ ಸಿಯಾ ಬಂಧನ

Share
3 Min Read
SHARE

newsics.com

ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಈ ವರ್ಷದ ಕೊನೆಯಲ್ಲಿ ಭರ್ಜರಿಯಾಗಿ ಮದುವೆಯಾಗಬೇಕಿದ್ದ ಜೋಡಿ. ಇಬ್ಬರ ಕುಟುಂಬಗಳೂ ಮದುವೆಯ ಸಂಭ್ರಮದಲ್ಲಿದ್ದವು. ಆದರೆ, ಯಾರೂ ಊಹಿಸದ ಕರಾಳ ಸಂಚೊಂದು ಸಂಭ್ರಮವನ್ನು ದುರಂತವಾಗಿ ಬದಲಿಸಿದೆ.

26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್, ತನ್ನ ಸೀಕ್ರೆಟ್ ಪ್ರಿಯಕರನೊಂದಿಗೆ ಸೇರಿ ಲೋಹಗಡ್ ಕೋಟೆಯಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿ ಬರ್ಬರವಾಗಿ ಕೊಲೆ ಮಾಡಿದ್ದಾಳೆ.

ಮೊದಲು ಇದು ಕೇವಲ ಆಕಸ್ಮಿಕ ಅಪಘಾತ ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರ ತನಿಖೆ ತೀವ್ರಗೊಂಡಾಗ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಅವರ ಕ್ರೂರ ಮುಖವಾಡ ಕಳಚಿ ಬಿದ್ದಿದೆ.

ಮೊದಲ ಕೊಲೆ ಯತ್ನ: ಹಾವಿನ ನೆಪ ಮತ್ತು ಅಪ್ಪುಗೆ

ಮೃತನ ತಂದೆ ವಿಶಾಲ್ ಅಗರ್ವಾಲ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಅತ್ಯಂತ ಬೆಚ್ಚಿಬೀಳಿಸುವ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಜೂನ್ 18 ರಂದು ನಡೆದ ಕೊಲೆಗೆ ಕೇವಲ ನಾಲ್ಕು ದಿನಗಳ ಮುಂಚೆ, ಅಂದರೆ ಜೂನ್ 14 ರಂದೇ ಸಿಯಾ ಮೊದಲ ಬಾರಿಗೆ ಕೇತನ್‌ನನ್ನು ಕೊಲ್ಲಲು ಯತ್ನಿಸಿದ್ದಳು.

ಪಾಸ್‌ಪೋರ್ಟ್ ನಾಪತ್ತೆ: ಇಬ್ಬರೂ ವಿವಾಹಪೂರ್ವ ಪ್ರವಾಸಕ್ಕಾಗಿ ಬಾಲಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಆದರೆ ಅಲ್ಲಿ ಹಠಾತ್ ಆಗಿ ಕೇತನ್‌ನ ಪಾಸ್‌ಪೋರ್ಟ್ ನಾಪತ್ತೆಯಾಗಿತ್ತು ಇದರಿಂದ ಪ್ರವಾಸ ರದ್ದಾಗಿ ಇಬ್ಬರೂ ಮನೆಗೆ ಮರಳಿದ್ದರು.

ಕೋಟೆಯ ಮೇಲಿಂದ ತಳ್ಳಿದ್ದಳು: ಮೂರನೇ ದಿನ ಸಿಯಾ ಜಗಳವಾಡಿ, ತನ್ನೊಂದಿಗೆ ಲೋಹಗಡ್ ಕೋಟೆಗೆ ಬರುವಂತೆ ಕೇತನ್‌ನನ್ನು ಒಪ್ಪಿಸಿದಳು. ಕೋಟೆಯ ಮೇಲೆ ಇಬ್ಬರೇ ಇದ್ದಾಗ ಸಿಯಾ ಕೇತನ್‌ನನ್ನು ತಳ್ಳಿದ್ದಾಳೆ.

‘ಹಾವು, ಹಾವು’ ಎಂದು ನಾಟಕವಾಡಿ ಅಪ್ಪಿಕೊಂಡಳು: ಅದೃಷ್ಟವಶಾತ್ ಕೇತನ್ ಕೆಳಗೆ ಬೀಳುವಾಗ ಅಲ್ಲಿದ್ದ ಪೊದೆಯೊಂದನ್ನು ಗಟ್ಟಿಯಾಗಿ ಹಿಡಿದು ಪ್ರಾಣ ಉಳಿಸಿಕೊಂಡಿದ್ದ. ತಾನು ತಳ್ಳಿದ ರಹಸ್ಯ ಬಯಲಾಗಬಹುದು ಎಂದು ಹೆದರಿದ ಸಿಯಾ, ತಕ್ಷಣವೇ ‘ಹಾವು ಹಾವು’ ಎಂದು ಜೋರಾಗಿ ಕೂಗುತ್ತಾ ಓಡಿ ಬಂದು ಕೇತನ್‌ನನ್ನು ಬಿಗಿಯಾಗಿ ತಬ್ಬಿಕೊಂಡು ನಾಟಕವಾಡಿದ್ದಳು ಅಂದು ಕೇತನ್ ತನ್ನ ಭಾವಿ ಪತ್ನಿಯ ಕುತಂತ್ರವನ್ನು ಅರಿಯದೆ ಆಕೆಯನ್ನು ನಂಬಿಬಿಟ್ಟಿದ್ದ.

ಎರಡನೇ ಯತ್ನದಲ್ಲಿ ಯಶಸ್ಸು

ಸಿಯಾ ತನ್ನ ಬೇಕರಿ ವ್ಯವಹಾರದ ಸಂಪರ್ಕದ ಮೂಲಕ ಪರಿಚಯವಾಗಿದ್ದ ಡ್ರೈ ಫ್ರೂಟ್ಸ್​ ಕಂಪನಿ ಮಾಲೀಕ ಚೇತನ್ ಚೌಧರಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ತಮಗೆ ಅಡ್ಡಿಯಾಗಿದ್ದ ಕೇತನ್‌ನನ್ನು ಮುಗಿಸಲು ಇಬ್ಬರೂ ಸ್ಕೆಚ್ ಹಾಕಿದ್ದರು.

ಜೂನ್ 18 ರಂದು ಸಿಯಾ ಮತ್ತೆ ಕೇತನ್‌ನನ್ನು ವಿಹಾರದ ನೆಪದಲ್ಲಿ ಲೋಹಗಡ್ ಕೋಟೆಗೆ ಕರೆದೊಯ್ದಳು. ಮೊದಲೇ ಪ್ಲಾನ್ ಮಾಡಿದಂತೆ ಆಕೆಯ ಪ್ರಿಯಕರ ಚೇತನ್ ಕೂಡ ಅಲ್ಲಿಗೆ ಬಂದಿದ್ದ. ಬಿರುಗಾಳಿ ಬೀಸುತ್ತಿದ್ದ ಸಮಯದಲ್ಲಿ ಇಬ್ಬರೂ ಸೇರಿ ಕೇತನ್‌ನನ್ನು ಕೋಟೆಯ ತುದಿಯಿಂದ 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ. ತೀವ್ರವಾಗಿ ಗಾಯಗೊಂಡ ಕೇತನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಕಳ್ಳಾಟ ಬಯಲು ಮಾಡಿದ್ದೇಗೆ?

ಕೊಲೆಯ ಬಳಿಕ ಸಿಯಾ ಪೊಲೀಸರ ಮುಂದೆ, ಕೋಟೆಯ ಮೇಲೆ ಜೋರಾಗಿ ಗಾಳಿ ಬೀಸುತ್ತಿತ್ತು, ಆಗ ಕೇತನ್ ಕಾಲು ಜಾರಿ ಆಕಸ್ಮಿಕವಾಗಿ ಬಿದ್ದರು ಎಂದು ಕಣ್ಣೀರು ಹಾಕಿದ್ದಳು. ಪೊಲೀಸರು ಮೊದಲು ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿದ್ದರು. ಆದರೆ, ಕೇತನ್ ತಂದೆಯ ಅನುಮಾನ ಮತ್ತು ಸ್ಥಳೀಯ ಅಪರಾಧ ವಿಭಾಗದ ತನಿಖೆಯ ವೇಳೆ ಚೇತನ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಇಡೀ ಕೊಲೆ ಸಂಚನ್ನು ಒಪ್ಪಿಕೊಂಡಿದ್ದಾನೆ. ಆ ಮಾಹಿತಿಯ ಆಧಾರದ ಮೇಲೆ ಸಿಯಾಳನ್ನು ಕೂಡ ಬಂಧಿಸಲಾಗಿದೆ.

ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಪ್ರಕಾರ, ಕೋರ್ಟ್ ಇಬ್ಬರೂ ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ.

ರಸ್ತೆಯಲ್ಲೇ ಬೆತ್ತಲಾದ ಯುವತಿ: ಕ್ಯಾಬ್ ಚಾಲಕನ ಮೇಲೆ ಹಲ್ಲೆ, ವೈರಲ್ ವಿಡಿಯೋ ನೋಡಿ

ಗೃಹಲಕ್ಷ್ಮಿ ಗೋಲ್‌ಮಾಲ್: 19 ಸಾವಿರ ಫಲಾನುಭವಿಗಳಿಗೆ ಒಂದೇ ಖಾತೆ! ಕೋಟಿಗಟ್ಟಲೆ ಹಣ ಜಮಾ

TAGGED:A blessing for those celebrating their wedding! The conspiracy succeeds in the second attemptthe future wife Siya is arrested
Share This Article
Facebook Twitter Copy Link Print
Previous Article UP CM visit ಬೆಂಗಳೂರಿಗಿಂದು ಸಿಎಂ ಯೋಗಿ ಆದಿತ್ಯನಾಥ್, ರೋಡ್ ಶೋನಲ್ಲಿ‌ ಭಾಗಿ
Next Article MLA Birthday ಶಾಸಕರ ಹುಟ್ಟುಹಬ್ಬದಲ್ಲಿ ಬಾಡೂಟ, ಫ್ರೀ ಸೀರೆಗಾಗಿ ಮುಗಿಬಿದ್ದ ಜನ: ಐವರಿಗೆ ಗಾಯ

Popular Posts

Metro broke down… ಕೈಕೊಟ್ಟ ಮೆಟ್ರೋ ಎಫೆಕ್ಟ್: ನಮ್ಮೂರಲ್ಲಿ ಹಂಗೇನಿಲ್ಲ… ಬಸ್ಸು, ಲಾರಿ ಏನೇ ಬರ್ಲಿ ಹತ್ಕೊಂಡ್ ಹೋಯ್ತಾರೋ… ವಿಡಿಯೋ ನೋಡಿ

2 Min Read

Love that melted in fire ಪ್ರೀತಿ ಚಿಗುರೊಡೆದ ಕಟ್ಟಡದಲ್ಲೇ ಸುಟ್ಟು ಬೂದಿಯಾಯ್ತು… ಕಮರಿಹೋಯ್ತು ನೀಲೇಶ್- ಅನಾಮಿಕಾ ಬದುಕು

2 Min Read

Strict action against cross-voting ಅಡ್ಡಮತದಾನಕ್ಕೆ ಬಿಜೆಪಿ ವರಿಷ್ಠರು ಕೆಂಡಾಮಂಡಲ: ಪ್ರಶ್ನೆಗಳ ಸುರಿಮಳೆಗೆ ರಾಜ್ಯ ನಾಯಕರು ಕಂಗಾಲು

3 Min Read

ED Raid ಸಚಿವ ಸತೀಶ್ ಜಾರಕಿಹೊಳಿ ಬಾವನಿಗೆ ಇಡಿ ಶಾಕ್, ಆರು ಕಡೆ ದಾಳಿ

1 Min Read

You Might Also Like

ಕರ್ನಾಟಕಪ್ರಮುಖ

MLA Birthday ಶಾಸಕರ ಹುಟ್ಟುಹಬ್ಬದಲ್ಲಿ ಬಾಡೂಟ, ಫ್ರೀ ಸೀರೆಗಾಗಿ ಮುಗಿಬಿದ್ದ ಜನ: ಐವರಿಗೆ ಗಾಯ

1 Min Read
ಕರ್ನಾಟಕದೇಶಪ್ರಮುಖ

UP CM visit ಬೆಂಗಳೂರಿಗಿಂದು ಸಿಎಂ ಯೋಗಿ ಆದಿತ್ಯನಾಥ್, ರೋಡ್ ಶೋನಲ್ಲಿ‌ ಭಾಗಿ

2 Min Read
ಪ್ರಮುಖಕರ್ನಾಟಕದೇಶಲೈಫ್‌ಸ್ಟೈಲ್

Health care ಅತಿಯಾದ ಮೊಬೈಲ್ ಬಳಕೆಯಿಂದ ಸಾವು ಸಾಧ್ಯತೆ, ತಜ್ಞರು ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್

New Trend ಸ್ಮಶಾನದಲ್ಲಿ ಡೇಟಿಂಗ್! ಯುವಜನರ ಹೊಸ ಟ್ರೆಂಡ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?