newsics.com/ನ್ಯೂಸಿಕ್ಸ್
ದಕ್ಷಿಣ ಭಾರತದ ಖ್ಯಾತ ನಟಿಯಲ್ಲಿ ಒಬ್ಬರಾದ ನಟಿ ಸಾಯಿ ಪಲ್ಲವಿ ತಮ್ಮ ನ್ಯಾಚುರಲ್ ಬ್ಯೂಟಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಯಾವುದೇ ಗ್ಲಾಮರ್ ಇಲ್ಲದೆ ಸ್ಟಾರ್ ಹೀರೋಯಿನ್ ಆಗಿದ್ದಾರೆ ಮತ್ತು ತಮ್ಮ ಪ್ರತಿಭೆಯಿಂದ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಿರುವಾಗ ಇತ್ತೀಚೆಗೆ ನಟಿ ಸಾಯಿ ಪಲ್ಲವಿ ತಮ್ಮ ಸಿನಿಮಾ ವೃತ್ತಿಜೀವನ ಮತ್ತು ನೆಚ್ಚಿನ ನಾಯಕನ ಬಗ್ಗೆ ಹೇಳಿರುವ ಕೆಲವು ಆಸಕ್ತಿದಾಯಕ ವಿಷಯಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಸಾಮಾನ್ಯವಾಗಿ ಇಂದಿನ ಜನರೇಷನ್ ನಟಿಯರನ್ನು ನಿಮ್ಮ ಫೇವರಿಟ್ ನಟ ಯಾರು? ಎಂದು ಕೇಳಿದರೆ, ಅವರು ತಮ್ಮ ಸಮಕಾಲೀನ ಸ್ಟಾರ್ ನಟರಾದ ಮಹೇಶ್ ಬಾಬು, ಪ್ರಭಾಸ್ ಅಥವಾ ಅಲ್ಲು ಅರ್ಜುನ್ ಹೆಸರನ್ನು ಹೇಳುತ್ತಾರೆ. ಆದರೆ ಸಾಯಿ ಪಲ್ಲವಿ ಮಾತ್ರ ಯಾವುದೇ ಹಿಂಜರಿಕೆಯಿಲ್ಲದೆ, ನಾನು ಹೀರೋಯಿನ್ ಆಗಲು ಕಾರಣ ಮೆಗಾಸ್ಟಾರ್ ಚಿರಂಜೀವಿ”l ಎಂದು ಹೇಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಹೌದು, ಮೆಗಾಸ್ಟಾರ್ ಅವರ ನಟನೆ ಮತ್ತು ವ್ಯಕ್ತಿತ್ವಕ್ಕೆ ಸಾಯಿ ಪಲ್ಲವಿ ಫಿದಾ ಆಗಿದ್ದಾರೆ.
ಸಾಯಿ ಪಲ್ಲವಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ಚಿಕ್ಕವಳಿದ್ದಾಗಿನಿಂದಲೇ ಚಿರಂಜೀವಿ ಸರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು. ಪರದೆಯ ಮೇಲೆ ಅವರ ಎನರ್ಜಿ, ಆ ಅದ್ಭುತವಾದ ಸ್ಟೈಲ್ ಮತ್ತು ಯಾರಿಗೂ ಸರಿಸಾಟಿಯಿಲ್ಲದ ಅವರ ಡ್ಯಾನ್ಸ್ ನನ್ನ ಮೇಲೆ ಆಳವಾದ ಪ್ರಭಾವ ಬೀರಿವೆ. ಒಬ್ಬ ನಟ ಪ್ರೇಕ್ಷಕರನ್ನು ಹೇಗೆ ಮಂತ್ರಮುಗ್ಧರನ್ನಾಗಿ ಮಾಡಬಹುದು ಎಂಬುದನ್ನು ನಾನು ಅವರ ಮೂಲಕ ಕಲಿತೆ ಎಂದು ಸಂಭ್ರಮದಿಂದ ಹೇಳಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಕಾಲಿಟ್ಟ ನಂತರವೂ ಚಿರಂಜೀವಿ ಅವರ ಮೇಲಿನ ಅಭಿಮಾನ ಬದಲಾಗಿಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಅವರ ಸಿನಿಮಾಗಳು ಟಿವಿಯಲ್ಲಿ ಬಂದರೆ ಖಂಡಿತ ನೋಡುತ್ತೇನೆ ಎಂದು ತಿಳಿಸಿದ್ದಾರೆ . ನಟಿಯಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿಯೂ ಚಿರಂಜೀವಿ ಉತ್ತಮ ವ್ಯಕ್ತಿತ್ವ ಹೊಂದಿದ್ದಾರೆ ಎಂದುಸಾಯಿ ಪಲ್ಲವಿ ಹೊಗಳಿದ್ದಾರೆ. ಜೊತೆಗೆ ಅವರ ಸಿನಿಮಾ ಪ್ರಯಾಣವು ಅನೇಕ ಯುವ ನಟರಿಗೆ ಸ್ಪೂರ್ತಿಯಾಗಿದೆ ಎಂದು ನಟಿ ಹೇಳಿದ್ದಾರೆ.
ಸಾಯಿ ಪಲ್ಲವಿ ಅವರ ಈ ಮಾತುಗಳು ಕೇಳಿ ಮೆಗಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. “ನಮ್ಮ ಮೆಗಾಸ್ಟಾರ್ ಎನರ್ಜಿ ಅಂತಹದ್ದು!” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಸಂದರ್ಶನದಲ್ಲಿ ನಿರೂಪಕಿ ಜತೆ ವಾಗ್ವಾದ, ಮೈಕ್ ಕಿತ್ತೆಸೆದು ಹೊರ ನಡೆದ ಟ್ರಂಪ್ : ವಿಡಿಯೋ ನೋಡಿ