Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್
ಪ್ರಮುಖಮನರಂಜನೆ

ಪೆದ್ದಿ’ ಚಿತ್ರದ ಆಕ್ಷೇಪಾರ್ಹ ಶಾಟ್‌ಗಳಿಗೆ ಜಾನ್ವಿ ಕಪೂರ್ ವಿರೋಧ? ನಟಿಯ ಮೆಸೇಜ್ ಲೀಕ್

Share
2 Min Read
SHARE

newsics.com/ನ್ಯೂಸಿಕ್ಸ್

ಟಾಲಿವುಡ್ ನಟ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್  ನಟನೆಯ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದ್ದರೂ, ಚಿತ್ರದಲ್ಲಿ ಮಹಿಳೆಯರನ್ನು ಬಿಂಬಿಸಿರುವ ರೀತಿಯ ಬಗ್ಗೆ ತೀವ್ರ ವಿವಾದ ವ್ಯಕ್ತವಾಗಿದೆ. ಈ ವಿವಾದದ ಬೆನ್ನಲ್ಲೇ ನಿರ್ದೇಶಕ ಬುಚ್ಚಿ ಬಾಬು ಸನಾ ಇತ್ತೀಚೆಗಷ್ಟೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು.
ಆದರೆ, ಇದೀಗ ಜಾನ್ವಿ ಕಪೂರ್ ಅವರು ತಮ್ಮ ಫ್ಯಾನ್ ಕ್ಲಬ್‌ಗಳೊಂದಿಗೆ ನಡೆಸಿರುವ ಆಘಾತಕಾರಿ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಇಂಟರ್ನೆಟ್‌ನಲ್ಲಿ ಲೀಕ್ ಆಗಿದ್ದು, ಸಂಚಲನ ಮೂಡಿಸಿವೆ.

ಚಿತ್ರದಲ್ಲಿ ತಮ್ಮ ಪಾತ್ರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗುತ್ತಿದೆ ಎಂದು ಶೂಟಿಂಗ್ ಹಂತದಲ್ಲೇ ಜಾನ್ವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದನ್ನು ಈ ಲೀಕ್ ಆದ ಮೆಸೇಜ್‌ಗಳು ಸಾಬೀತುಪಡಿಸುತ್ತಿವೆ. ಅಕ್ಟೋಬರ್ 30ರಂದು ನಡೆದಿರುವ ಚಾಟ್‌ನಲ್ಲಿ ಜಾನ್ವಿ ಕಪೂರ್, ಚಿತ್ರೀಕರಣದ ವೇಳೆ ತಮಗೆ ಮುಜುಗರ ತರುವಂತಹ ಆ್ಯಂಗಲ್‌ಗಳನ್ನು ಬಳಸದಂತೆ ನಿರ್ದೇಶಕರಿಗೆ ಖಡಕ್ ಆಗಿ ಹೇಳಿದ್ದಾಗಿ ಬರೆದುಕೊಂಡಿದ್ದಾರೆ.

‘ನಾನು ನಿರ್ದೇಶಕರಿಗೆ ನನ್ನ ಎದೆ ಮತ್ತು ಸೊಂಟದ ಭಾಗದ ಕ್ಲೋಸಪ್ ಶಾಟ್‌ಗಳನ್ನು ತೆಗೆದುಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ’ ಎಂದು ಜಾನ್ವಿ ಕಪೂರ್ ಉಲ್ಲೇಖಿಸಿದ್ದಾರೆ. ಇದೇ ಚಾಟ್‌ನಲ್ಲಿ ಜಾನ್ವಿ ಕಪೂರ್ ಅವರು ನಟ ರಾಮ್ ಚರಣ್ ಅವರ ನಡೆಗೆ ಧನ್ಯವಾದ ತಿಳಿಸಿದ್ದಾರೆ. ‘ರಾಮ್ ಸರ್ ತುಂಬಾ ಒಳ್ಳೆಯವರು. ಅವರು ನನ್ನ ಪರವಾಗಿ ನಿಂತು ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಬೈದಿದ್ದರು. ಇನ್ನೊಮ್ಮೆ ಆಕೆಯ ಇಂತಹ ಆ್ಯಂಗಲ್‌ಗಳನ್ನು ಶೂಟ್ ಮಾಡಬೇಡಿ ಅಂತ ಗದರಿಸಿದ್ದರು. ಇದರಿಂದಾಗಿ ನಿರ್ದೇಶಕರು ಬೇಸರ ಮಾಡಿಕೊಂಡಿದ್ದರು’ ಎಂದು ಜಾನ್ವಿ ಮೆಸೇಜ್‌ನಲ್ಲಿ ತಿಳಿಸಿದ್ದಾರೆ.

ಗೇಮ್ ಚೇಂಜರ್’ ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಎದುರಿಸಿದ ಇಂತಹದೇ ಪರಿಸ್ಥಿತಿಯನ್ನು ಅಭಿಮಾನಿಯೊಬ್ಬರು ನೆನಪಿಸಿದಾಗ, ಜಾನ್ವಿ ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ. ‘ಇಲ್ಲ, ಪೆದ್ದಿ ಸಿನಿಮಾದಲ್ಲಿ ಅವರು ಶೂಟ್ ಮಾಡುತ್ತಿದ್ದ ಆ್ಯಂಗಲ್‌ಗಳು ಅದಕ್ಕಿಂತಲೂ ಕೆಟ್ಟದಾಗಿದ್ದವು. ಆದರೆ ರಾಮ್ ಸರ್ ತಡೆದರು. ಸೌತ್ ಇಂಡಸ್ಟ್ರಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ’ ಎಂದು ಜಾನ್ವಿ ಅವರು ದಕ್ಷಿಣದ ಚಿತ್ರರಂಗದ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಕೆಲವು ನಟಿಯರ ಪೋಷಕರು ಶೂಟಿಂಗ್ ಸೆಟ್‌ಗೆ ಬರುವ ಬಗ್ಗೆ ಫ್ಯಾನ್ಸ್ ಪ್ರಸ್ತಾಪಿಸಿದ್ದಾರೆ. ಆದಕ್ಕೆ ಜಾನ್ವಿ ಈ ರೀತಿ ಉತ್ತರಿಸಿದ್ದಾರೆ. ‘ಒಂದು ವೇಳೆ ನನ್ನ ತಂದೆ ಬೋನಿ ಕಪೂರ್ ಸೆಟ್‌ಗೆ ಬಂದರೆ ಪರಿಸ್ಥಿತಿ ಉಗ್ರ ರೂಪ ಪಡೆದುಕೊಳ್ಳುತ್ತದೆ’ ಎಂದಿದ್ದಾರೆ. ಈ ರೀತಿಯ ಘಟನೆಯಿಂದ ಜಾನ್ವಿ ಕಪೂರ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂಬುದು ಚಾಟ್ಸ್‌ನಿಂದ ತಿಳಿಯುತ್ತದೆ. ‘ನಾನು ಇವರೊಂದಿಗೆ ವಾದ ಮಾಡಿ ಸಾಕಾಗಿಹೋಗಿದೆ. ಇನ್ನು ಸಾಕು, ಇನ್ಮುಂದೆ ಸಿನಿಮಾವೇ ಬೇಡ’ ಎಂದು ಜಾನ್ವಿ ಭಾವುಕರಾಗಿ ಮೆಸೇಜ್ ಮಾಡಿದ್ದಾರೆ.

 

https://www.instagram.com/reel/DZPAhvNJfL7/?igsh=MWR6YzA1dzY1NWw0cA==

 

ಅಮೇಜಾನ್ ಪ್ರೈಮ್-ಎಂಎಕ್ಸ್ ಪ್ಲೇಯರ್ ವಿಲೀನ: ಭಾರತದ ಅತಿ ದೊಡ್ಡ ಒಟಿಟಿ ಪ್ಲಾಟ್‌ಫಾರ್ಮ್ ಸೃಷ್ಟಿ!

 

TAGGED:Janhvi Kapoor objects to objectionable shots in the film 'Peddi'? Actress's message leaked
Share This Article
Facebook Twitter Copy Link Print
Previous Article ಎಬೋಲಾ ವೈರಸ್‌ ಅಪಾಯಕಾರಿ, ಆದ್ರೆ ಈ ಸಲಹೆ ಪಾಲಿಸಿದ್ರೆ ಹತ್ತಿರವೂ ಸುಳಿಯಲ್ಲ!
Next Article Suraj Hegde no more AICC ಕಾರ್ಯದರ್ಶಿ,‌ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಇನ್ನಿಲ್ಲ

Popular Posts

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

You Might Also Like

ದೇಶಪ್ರಮುಖ

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read
ಕರ್ನಾಟಕಪ್ರಮುಖ

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read
ಕರ್ನಾಟಕದೇಶಪ್ರಮುಖ

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read
ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?