newsics.com/ನ್ಯೂಸಿಕ್ಸ್
ಬೆಂಗಳೂರು: ಲೋಕಸಭೆ ಚುನಾವಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಡಿಸಿಎಂ ಹುದ್ದೆಗಾಗಿ ಆಂತರಿಕ ಬೇಡಿಕೆಗಳು ತೀವ್ರಗೊಂಡಿದ್ದು, ಪ್ರಬಲ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಹೈಕಮಾಂಡ್ ನಡೆಸಿದ ಕಸರತ್ತುಗಳು ಸದ್ಯಕ್ಕೆ ಕೈಗೂಡಿದಂತೆ ಕಾಣುತ್ತಿಲ್ಲ.
ವಿಶೇಷವಾಗಿ ಹಿರಿಯ ನಾಯಕ ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಹೈಕಮಾಂಡ್ ಸಂಧಾನ ಸೂತ್ರವೊಂದನ್ನು ಮುಂದಿಟ್ಟಿತ್ತು. ಪರಮೇಶ್ವರ್ ಅವರಿಗೆ ಎರಡು ಪ್ರಮುಖ ಆಫರ್ ನಡಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿಧಾನಸಭೆ ಸ್ಪೀಕರ್ ಹುದ್ದೆಯನ್ನು ವಹಿಸಿಕೊಳ್ಳುವಂತೆ ಹೈಕಮಾಂಡ್ ನಾಯಕರು ಪ್ರಸ್ತಾಪಿಸಿದ್ದರು. ಆದರೆ, ಈ ಎರಡೂ ಆಫರ್‌ಗಳನ್ನು ಜಿ. ಪರಮೇಶ್ವರ್ ಅವರು ನೇರವಾಗಿಯೇ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಹೈಕಮಾಂಡ್ ನೀಡಿದ ಆಫರ್‌ಗಳಿಗೆ ಪ್ರತಿಕ್ರಿಯಿಸಿರುವ ಜಿ. ಪರಮೇಶ್ವರ್, ಕಳೆದ ಅವಧಿಯಲ್ಲಿ ಈಗಾಗಲೇ ಸತತವಾಗಿ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ, ಅದು ನನಗೆ ಸಾಕಾಗಿದೆ. ಇನ್ನು ಸ್ಪೀಕರ್ ಸ್ಥಾನ ವಹಿಸಿಕೊಳ್ಳಲು ನನಗೆ ಆಸಕ್ತಿಯಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಹೈಕಮಾಂಡ್‌ನ ಪ್ರಾಥಮಿಕ ಸಂಧಾನ ಯತ್ನ ವಿಫಲವಾದಂತಾಗಿದೆ.
KPCC President ಯಾರಿಗೆ ಕೆಪಿಸಿಸಿ ಪಟ್ಟ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಏನಂದ್ರು?