Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Tulsi Plant ತುಳಸಿ ಗಿಡ ಒಣಗಿ ಹೋಗಿದ್ಯಾ? 2 ರೂಪಾಯಿ ಇದ್ದರೆ ಸಾಕು ತುಳಸಿ ಗಿಡ ಸದಾ ಹಸಿರಾಗಿರುತ್ತೆ.!
ಪ್ರಮುಖಲೈಫ್‌ಸ್ಟೈಲ್

Tulsi Plant ತುಳಸಿ ಗಿಡ ಒಣಗಿ ಹೋಗಿದ್ಯಾ? 2 ರೂಪಾಯಿ ಇದ್ದರೆ ಸಾಕು ತುಳಸಿ ಗಿಡ ಸದಾ ಹಸಿರಾಗಿರುತ್ತೆ.!

Share
2 Min Read
SHARE

newsics.com/ನ್ಯೂಸಿಕ್ಸ್

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಮಹತ್ವದ ಸ್ಥಾನವಿದೆ. ತುಳಸಿಯನ್ನು ಲಕ್ಷ್ಮಿ ಯ ರೂಪವೆಂದು ಭಾವಿಸಲಾಗುತ್ತದೆ. ಮನೆ ಯಲ್ಲಿ ತುಳಸಿಯನ್ನು ಇಡುವುದ್ರಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆ. ತುಳಸಿ ಪೂಜೆ ಮಾಡಿದ್ರೆ ಭಗವಂತ ವಿಷ್ಣು ಖುಷಿಯಾಗ್ತಾನೆ ಎನ್ನಲಾಗುತ್ತದೆ. ಬೆಳಿಗ್ಗೆ ಸ್ನಾನ ಮಾಡಿ ತುಳಸಿಗೆ ನೀರು ಹಾಕಿ, ಪೂಜೆ ಮಾಡುವುದ್ರಿಂದ ಹಾಗೂ ಸಂಜೆ ತುಳಸಿ ಮುಂದೆ ದೀಪ ಹಚ್ಚುವುದ್ರಿಂದ ಲಕ್ಷ್ಮಿ ಪ್ರಸನ್ನಳಾಗ್ತಾಳೆ ಎಂದು ನಂಬಲಾಗಿದೆ.

ಆಯುರ್ವೇದದಲ್ಲೂ ತುಳಸಿಗೆ ಮಹತ್ವ ನೀಡಲಾಗಿದೆ. ಅನೇಕ ರೋಗಗಳಿಗೆ ತುಳಸಿ ಮದ್ದಾಗಿದೆ. ತುಳಸಿಯನ್ನು ಪ್ರತಿಯೊಬ್ಬ ಭಾರತೀಯರ ಮನೆ ಮುಂದೆ ನಾವು ನೋಡಬಹುದು. ಅದಕ್ಕೆ ಪ್ರತ್ಯೇಕ ಕಟ್ಟೆ ಕೂಡ ನಿರ್ಮಿಸಲಾಗುತ್ತದೆ. ಅನೇಕ ಬಾರಿ ಎಷ್ಟೇ ಆರೈಕೆ ಮಾಡಿದ್ರೂ, ಪ್ರತಿ ದಿನ ತುಳಸಿಗೆ ನೀರು ಹಾಕಿದ್ರೂ ತುಳಸಿ ಗಿಡ ಒಣಗಲು ಶುರುವಾಗುತ್ತದೆ. ಗೊಬ್ಬರ ಹಾಕಿದ್ರೂ, ಸರಿಯಾಗಿ ನೋಡಿಕೊಂಡ್ರೂ ಗಿಡ ಹಾಳಾಗುತ್ತದೆ.

ಮೇ ಮತ್ತು ಜೂನ್ ತಿಂಗಳ ತೀವ್ರ ಬಿಸಿಲು, ಬಿಸಿ ಗಾಳಿ ಮತ್ತು ಹೆಚ್ಚಿದ ಉಷ್ಣಾಂಶದಿಂದ ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು, ಒಣಗುವುದು ಹಾಗೂ ಗಿಡ ದುರ್ಬಲವಾಗುವುದು ಸಾಮಾನ್ಯ. ಕೆಲವೊಮ್ಮೆ ಗಿಡ ಸಂಪೂರ್ಣವಾಗಿ ಸತ್ತಂತೆ ಕಾಣುತ್ತದೆ. ಇದರಿಂದ ಹಲವರು ದುಬಾರಿ ಗೊಬ್ಬರಗಳನ್ನು ಖರೀದಿಸಲು ಮುಂದಾಗುತ್ತಾರೆ.

ಆದರೆ ತೋಟಗಾರಿಕೆ ತಜ್ಞರ ಪ್ರಕಾರ, ಮನೆಯಲ್ಲೇ ಇರುವ ಕೆಲವು ಸರಳ ವಸ್ತುಗಳಿಂದ ತುಳಸಿ ಗಿಡವನ್ನು ಮತ್ತೆ ಹಸಿರಾಗಿಸಬಹುದು.

ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಕಾಫಿ ಪುಡಿ ಮತ್ತು ಅರ್ಧ ಟೀಚಮಚ ಎಪ್ಸಮ್ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಈ ಮಿಶ್ರಣವನ್ನು ತುಳಸಿ ಗಿಡದ ಬೇರು ಭಾಗದ ಮಣ್ಣಿಗೆ ನಿಧಾನವಾಗಿ ಹಾಕಬೇಕು.

ಕಾಫಿ ಪುಡಿಯಲ್ಲಿ ಇರುವ ಸಾರಜನಕ ಮಣ್ಣಿಗೆ ಪೋಷಕಾಂಶ ನೀಡುತ್ತದೆ. ಎಪ್ಸಮ್ ಉಪ್ಪಿನಲ್ಲಿರುವ ಮೆಗ್ನೀಸಿಯಮ್ ಮತ್ತು ಸಲ್ಫೇಟ್ ಅಂಶಗಳು ಎಲೆಗಳನ್ನು ಮತ್ತೆ ಹಸಿರಾಗಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ ಬಿಸಿಲಿನಿಂದ ದುರ್ಬಲವಾದ ಗಿಡಗಳಿಗೆ ಇದು ಒಳ್ಳೆಯ ಟಾನಿಕ್‌ನಂತೆ ಕೆಲಸ ಮಾಡುತ್ತದೆ.

ಗಿಡಕ್ಕೆ ಮಧ್ಯಾಹ್ನ ಬಿಸಿಲಿನ ವೇಳೆ ಗೊಬ್ಬರ ಹಾಕಬೇಡಿ. ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಹಾಕುವುದು ಉತ್ತಮ. ಮಣ್ಣನ್ನು ಸ್ವಲ್ಪ ಸಡಿಲ ಮಾಡಿದ ಬಳಿಕ ದ್ರವ ಗೊಬ್ಬರ ಹಾಕಿ.ಗಿಡವನ್ನು ನೇರ ಬಿಸಿಲಿನಲ್ಲಿ ಇಡದೇ, ಸ್ವಲ್ಪ ನೆರಳಿನಲ್ಲಿಡಿ.

ಈ ರೀತಿ ವಾರಕ್ಕೊಮ್ಮೆ ಮಾಡಿದರೆ ಕೆಲವೇ ದಿನಗಳಲ್ಲಿ ತುಳಸಿ ಗಿಡದಲ್ಲಿ ಹೊಸ ಎಲೆಗಳು ಮೂಡಲು ಪ್ರಾರಂಭಿಸುತ್ತವೆ. ದುಬಾರಿ ಗೊಬ್ಬರಗಳ ಅಗತ್ಯವಿಲ್ಲದೆ ಮನೆಯಲ್ಲೇ ಇರುವ ಸರಳ ಪದಾರ್ಥಗಳಿಂದ ನಿಮ್ಮ ತುಳಸಿ ಗಿಡವನ್ನು ಆರೋಗ್ಯಕರವಾಗಿ ಬೆಳೆಸಬಹುದು.

Side effects of Mangoes ತಿನ್ನೋಕೆ ಬಲು ರುಚಿ ಅಂತ ಮಾವಿನ ಹಣ್ಣು ಹೆಚ್ಚು ತಿಂದರೆ ಆರೋಗ್ಯ ಕೆಡಿಸಿತು.!

TAGGED:Has the basil plant dried up? If you have 2 rupeesthe basil plant will always stay green!
Share This Article
Facebook Twitter Copy Link Print
Previous Article Side effects of Mangoes ತಿನ್ನೋಕೆ ಬಲು ರುಚಿ ಅಂತ ಮಾವಿನ ಹಣ್ಣು ಹೆಚ್ಚು ತಿಂದರೆ ಆರೋಗ್ಯ ಕೆಡಿಸಿತು.!
Next Article Mango ಮಾವಿನ ಹಣ್ಣನ್ನು ತಿನ್ನೋ ಮುನ್ನ ನೀರಿನಲ್ಲಿ ಏಕೆ ನೆನೆಸಬೇಕು?

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

0 Min Read
ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

3 Min Read
ಪ್ರಮುಖಮನರಂಜನೆ

ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀ‌ರ್ ಖಾನ್ ಮದುವೆ!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?