newsics.com/ನ್ಯೂಸಿಕ್ಸ್
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧೆಯೋರ್ವರಿಂದ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಈ ದೈತ್ಯ ‘ಡಿಜಿಟಲ್ ಅರೆಸ್ಟ್’ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮುಂಬೈ, ಅಲಹಾಬಾದ್ ಮತ್ತು ದೆಹಲಿ ಮೂಲದ ಐವರು ಅಂತಾರಾಜ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಗೌರವ್ ಕುಮಾರ್, ಓಂ ಪ್ರಕಾಶ್ ಸೇರಿದಂತೆ ಐವರು ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಶಿವಾಜಿನಗರದ ನಿವಾಸಿಯಾದ ಲಕ್ಷ್ಮೀ ನಾರಾಯಣ್ ಎಂಬ ವೃದ್ಧೆಯೇ ಈ ಕೋಟ್ಯಂತರ ರೂಪಾಯಿ ವಂಚನೆಗೆ ಒಳಗಾದ ದುರ್ದೈವಿ. ಸೈಬರ್ ಖದೀಮರು ಕಳೆದ ಜನವರಿ ತಿಂಗಳಿನಿಂದಲೇ ಈ ವೃದ್ಧೆಯನ್ನು ತಮ್ಮ ಡಿಜಿಟಲ್ ಜಾಲದಲ್ಲಿ ಸಿಲುಕಿಸಿದ್ದರು. ಕಾನೂನು ಬಾಹಿರ ಚಟುವಟಿಕೆ ಅಥವಾ ತನಿಖೆಯ ಹೆಸರಿನಲ್ಲಿ ವೃದ್ಧೆಯನ್ನು ಹೆದರಿಸಿ, ‘ಡಿಜಿಟಲ್ ಅರೆಸ್ಟ್’ ಮಾದರಿಯಲ್ಲಿ ಮನೆಯಲ್ಲೇ ಬಂಧಿಯಾಗುವಂತೆ ಮಾಡಿದ್ದರು. ಬಂಧನದ ಭೀತಿಯಲ್ಲಿದ್ದ ವೃದ್ಧೆಯಿಂದ ಹಂತ ಹಂತವಾಗಿ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ದೋಚಿದ್ದರು.
ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ಆಕೆ ಹೆಚ್ಚಿನ ಹಣ ಕಳೆದುಕೊಳ್ಳುವುದು ತಪ್ಪಿದೆ.ಕೂಡಲೇ ಬ್ಯಾಂಕ್ಗೆ ಬಂದ ಸಿಸಿಬಿ ಸೈಬರ್ ಪೊಲೀಸರು, ಲಕ್ಷ್ಮೀ ಅವರನ್ನು ಈ ಸಂಬಂಧ ವಿಚಾರಿಸಿದ್ದಾರೆ. ಆದರೆ ಆರಂಭದಲ್ಲಿ ಏನನ್ನೂ ಅವರು ಬಾಯು ಬಿಟ್ಟಿರಲಿಲ್ಲ. ಹೀಗಾಗಿ ತಮ್ಮದೇ ಸ್ಟೈಲ್ನಲ್ಲಿ ಪೊಲೀಸರು ಕೇಳಿದಾಗ ಡಿಜಿಟಲ್ ಅರೆಸ್ಟ್ ಸತ್ಯ ಹೊರಬಂದಿದೆ. ಕೂಡಲೇ ಸಂತ್ರಸ್ತೆಯಿಂದ ದೂರು ಪಡೆದಿರುವ ಪೊಲೀಸರು, ವಿದೇಶದಲ್ಲಿರುವ ಅವರ ಮಕ್ಕಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪ್ರಕರಣ ಸಂಬಂಧ ತನಿಖೆಗಿಳಿದ ಖಾಕಿ ಮುಂಬೈ ,ಅಲಹಬಾದ್, ದೆಹಲಿ ಮೂಲದ ಆರೋಪಿಗನ್ನು ಹೆಡೆಮುರಿ ಕಟ್ಟಿದೆ.
ಸುಲಿಗೆ ಮಾಡಿದ್ದ ಹಣವನ್ನು ಆರೋಪಿಗಳು ಒಟ್ಟು 22 ಖಾತೆಗಳಿಗೆ ವರ್ಗಾಯಿಸಿದ್ದು, 60 ಲಕ್ಷ ಹಣ ಇರುವ ಅಕೌಂಟ್ನ ಪೊಲೀಸರು ಸೀಜ್ ಮಾಡಿದ್ದಾರೆ.
Chicken Side Effects ಈ ಗ್ರೂಪ್ನವರು ಚಿಕನ್ ತಿನ್ನಬಾರದಂತೆ; ಕಾರಣವೇನು?