Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸೈಕೋಪಾತ್ ಮಹಿಳೆಯ ಭಯಾನಕ ಕೃತ್ಯಕ್ಕೆ ಪೊಲೀಸರೇ ಶಾಕ್
ಪ್ರಮುಖ

ಸೈಕೋಪಾತ್ ಮಹಿಳೆಯ ಭಯಾನಕ ಕೃತ್ಯಕ್ಕೆ ಪೊಲೀಸರೇ ಶಾಕ್

Share
2 Min Read
SHARE

newsics.com/ನ್ಯೂಸಿಕ್ಸ್

ಸೈಕೋಪಾತ್ ಮಹಿಳೆಯ ಭಯಾನಕ ಕೃತ್ಯಕ್ಕೆ ಪೊಲೀಸರೇ ಶಾಕ್ ಆಗಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಜಾಗೃತಿಗೆ ಸುಖದೇವ್‌ಗಿರಿ ಎಂಬಾತನೊಂದಿಗೆ ಮದುವೆಯಾಗಿ, ಇಬ್ಬರು ಮುದ್ದಾದ ಮಕ್ಕಳಿದ್ದರು. ಮೇಲ್ನೋಟಕ್ಕೆ ಅದು ಸುಖಿ ಸಂಸಾರವಾಗಿತ್ತು. ಆದರೆ ಜಾಗೃತಿಯ ಚಂಚಲ ಮನಸ್ಸಿಗೆ ಅದ್ಯಾವುದೂ ಸಾಲಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಗೆ ತನ್ನ ಸ್ವಂತ ಮೈದುನ (ಗಂಡನ ತಮ್ಮ) ಶಾಂತಗಿರಿ ಮೇಲೆಯೇ ಕಣ್ಣು ಬಿತ್ತು. ವರಸೆ, ಬಾಂಧವ್ಯ ಎಲ್ಲವನ್ನೂ ಮರೆತು ಆತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದಳು. ಅಷ್ಟೇ ಅಲ್ಲ, ಒಂದು ದಿನ ಮಕ್ಕಳನ್ನು ನಡುರಸ್ತೆಯಲ್ಲೇ ಬಿಟ್ಟು ಮೈದುನನ ಕೈಹಿಡಿದು ಮನೆ ಬಿಟ್ಟು ಓಡಿಹೋದಳು. ಶಾಂತಗಿರಿಯನ್ನೇ ತನ್ನ ‘ಎರಡನೇ ಗಂಡ’ನನ್ನಾಗಿ ಮಾಡಿಕೊಂಡು ಬೇರೆ ಊರಿನಲ್ಲಿ ವಾಸಿಸತೊಡಗಿದಳು.

ಶಾಂತಗಿರಿ ಜೊತೆಗಿನ ಜೀವನವೂ ಜಾಗೃತಿಗೆ ಕೆಲವೇ ದಿನಗಳಲ್ಲಿ ಬೋರ್ ಎನಿಸಿತು! ಈ ಬಾರಿ ಆಕೆಯ ಕಣ್ಣು ಬಿದ್ದಿದ್ದು ಪಕ್ಕದ ಮನೆಯಲ್ಲಿದ್ದ ಭರತ್ ಎಂಬ ಯುವಕನ ಮೇಲೆ. ಎರಡನೇ ಗಂಡ ಶಾಂತಗಿರಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಭರತ್ ಜೊತೆ ಸರಸವಾಡಲು ಶುರುಮಾಡಿದಳು. ಆದರೆ ಈ ಕಳ್ಳಾಟ ಎರಡನೇ ಗಂಡನಿಗೆ ಗೊತ್ತಾಗಿ, ಆತು ಜಾಗೃತಿಗೆ ತೀವ್ರವಾಗಿ ಬಯ್ದು ಬುದ್ಧಿ ಹೇಳಿದ್ದಾನೆ. ತನ್ನ ಸುಖಕ್ಕೆ ಅಡ್ಡಬಂದ ಗಂಡನನ್ನು ಮುಗಿಸಲು ನಿರ್ಧರಿಸಿದ ಜಾಗೃತಿ, ಪ್ರಿಯಕರ ಭರತ್ ಜೊತೆ ಸೇರಿ ಒಂದು ರಾತ್ರಿ ನಿದ್ರೆಯಲ್ಲಿದ್ದ ಶಾಂತಗಿರಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಹೆಣವನ್ನು ಯಾರಿಗೂ ತಿಳಿಯದಂತೆ ಮಾಯ ಮಾಡಿದಳು!

ಮೊದಲ ಗಂಡನನ್ನು ಬಿಟ್ಟು, ಎರಡನೇ ಗಂಡನನ್ನು ಮುಗಿಸಿದ ಜಾಗೃತಿ, ಪ್ರಿಯಕರ ಭರತ್ ಜೊತೆ ಸೇರಿ ಬೇರೆ ಊರಿಗೆ ಪಾರಾರಿಯಾದಳು. ಆದರೆ ಆಕೆಯ ವಿಕೃತ ಬುದ್ಧಿ ಅಲ್ಲೂ ನಿಲ್ಲಲಿಲ್ಲ! ಶಾಂತಗಿರಿಯನ್ನು ಕೊಲೆ ಮಾಡಲು ಇವರಿಗೆ ದೀಪಕ್ ಎಂಬ ಸುಪಾರಿ ಕಿಲ್ಲರ್ (ರೌಡಿ) ಪರಿಚಯವಾಗಿದ್ದ. ಈಗ ಜಾಗೃತಿಯ ಕಣ್ಣು ಆ ದೀಪಕ್ ಮೇಲೆ ಬಿತ್ತು!

ಭರತ್‌ನನ್ನು ಸೈಡ್‌ಲೈನ್ ಮಾಡಿ ದೀಪಕ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿದಳು. ಕೆಲವು ದಿನಗಳ ನಂತರ ಭರತ್ ತಮಗೆ ಅಡ್ಡವಾಗುತ್ತಿದ್ದಾನೆ ಎಂದುಕೊಂಡ ಜಾಗೃತಿ, ‘ಮೊದಲ ಗಂಡನನ್ನೇ ಮುಗಿಸಿದ್ದೇನೆ, ಇನ್ನು ನೀನೆಷ್ಟು?’ ಎಂದುಕೊಂಡು ಹೊಸ ಪ್ರಿಯಕರ ದೀಪಕ್ ಸಹಾಯದಿಂದ ಹಳೇ ಪ್ರಿಯಕರ ಭರತ್‌ನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದಳು!

ಜಾಗೃತಿ ಮತ್ತು ದೀಪಕ್ ಸೇರಿ ಭರತ್‌ನನ್ನು ಮುಗಿಸಲು ಪ್ಲಾನ್ ಮಾಡುತ್ತಿದ್ದಾಗಲೇ ವಿಧಿ ಬೇರೆ ತರಹವೇ ಆಟವಾಡಿತು. ಅತ್ತ ಶಾಂತಗಿರಿಯ ನಾಪತ್ತೆ ಕೇಸ್ ಬೆನ್ನತ್ತಿದ್ದ ಪೊಲೀಸರಿಗೆ ಒಂದು ಅನಾಮಧೇಯ ಹೆಣ ಸಿಕ್ಕಿತ್ತು. ಅದರ ಜಾಡು ಹಿಡಿದು ಜಾಗೃತಿಯ ಕಾಲ್ ಡೇಟಾ ಹಾಗೂ ಮೂವ್‌ಮೆಂಟ್ಸ್ ಟ್ರ್ಯಾಕ್ ಮಾಡಿದ ಪೊಲೀಸರು, ಇಡೀ ಗ್ಯಾಂಗ್ ಅನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದರು.

ಬಂಧನದ ಬಳಿಕ ಜಾಗೃತಿ ಬಾಯ್ಬಿಟ್ಟ ನಿಜಗಳನ್ನು ಕೇಳಿ ಪೊಲೀಸರ ಮೈಂಡ್ ಬ್ಲಾಂಕ್ ಆಗಿತ್ತು. ಒಂದು ಅಕ್ರಮ ಸಂಬಂಧಕ್ಕಾಗಿ ಗಂಡನನ್ನು ಬಿಟ್ಟಳು, ಎರಡನೇ ಅಕ್ರಮ ಸಂಬಂಧಕ್ಕಾಗಿ ಎರಡನೇ ಗಂಡನನ್ನು ಕೊಂದಳು, ಇನ್ನು ಮೂರನೇ ಸಂಬಂಧಕ್ಕಾಗಿ ಮೊದಲ ಪ್ರಿಯಕರನನ್ನೇ ಕೊಲ್ಲಲು ಮುಂದಾಗಿದ್ದ ಇವಳ ವಿಕೃತ ಮನಸ್ಥಿತಿ ಕಂಡು ಇಡೀ ಸಮಾಜವೇ ತಲ್ಲಣಿಸಿದೆ. ಸದ್ಯ ಈ ‘ಕಿಲ್ಲಿಂಗ್ ಲೇಡಿ’ ಜೈಲಿನ ಕತ್ತಲು ಕೋಣೆಯಲ್ಲಿ ತನ್ನ ಪಾಪದ ಶಿಕ್ಷೆ ಅನುಭವಿಸುತ್ತಿದ್ದಾಳೆ.

ಬಿಜೆಪಿಯ ಸುವರ್ಣಯುಗ ಇನ್ನೂ ಮುಗಿದಿಲ್ಲ; ಕಾಂಗ್ರೆಸ್ ಬಗ್ಗೆ ಎಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಹೇಳಿದ್ದೇನು?

TAGGED:Police shocked by psychopath woman's horrific act
Share This Article
Facebook Twitter Copy Link Print
Previous Article ಬಿಜೆಪಿಯ ಸುವರ್ಣಯುಗ ಇನ್ನೂ ಮುಗಿದಿಲ್ಲ; ಕಾಂಗ್ರೆಸ್ ಬಗ್ಗೆ ಎಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಹೇಳಿದ್ದೇನು?
Next Article ಬೆಳಗಾವಿಯಲ್ಲಿ ಮತ್ತೊಂದು ಹೂಡಿಕೆ ಜಾಲ ಪತ್ತೆ: ಈ ಕಂಪನಿಲಿ 15 ತಿಂಗಳಿಗೆ ಹಣ ಡಬಲ್‌!

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?