newsics.com/ನ್ಯೂಸಿಕ್ಸ್
ಸಾಲ ವಸೂಲಾತಿಯ ನೆಪದಲ್ಲಿ ಸಾಲ ವಸೂಲಾತಿ ಏಜೆಂಟರು ಗ್ರಾಹಕರಿಗೆ ನೀಡುವ ಕಿರುಕುಳ ಮತ್ತು ಬೆದರಿಕೆಗಳಿಗೆ ಕಡಿವಾಣ ಹಾಕಲು ಆರ್‌ಬಿಐ (RBI) ಮುಂದಾಗಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಅಕ್ಟೋಬರ್ 1, 2026 ರಿಂದ ಇವು ಜಾರಿಗೆ ಬರಲಿವೆ.
ನಿಯಮಗಳನ್ನು ಉಲ್ಲಂಘಿಸುವ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ಆರ್‌ಬಿಐ, ಸಾಲದಾತರು ಕಡ್ಡಾಯವಾಗಿ ನೈತಿಕ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಆದೇಶಿಸಿದೆ.
ಹೌದು. ಬ್ಯಾಂಕ್ ಗ್ರಾಹಕರಿಗೆ ಆರ್‌ಬಿಐ (RBI) ಸಂತಸದ ಸುದ್ದಿಯನ್ನು ನೀಡಿದೆ. ಸಾಲ ವಸೂಲಾತಿ ಏಜೆಂಟರ (Loan Recovery Agents) ದೌರ್ಜನ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದಕ್ಕಾಗಿ ಹೊಸ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್ 1, 2026 ರಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಆರ್‌ಬಿಐ ಘೋಷಿಸಿದೆ. ನಿಯಮಗಳನ್ನು ಉಲ್ಲಂಘಿಸುವ ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಸಾಲ ವಸೂಲಾತಿಯ ಹೆಸರಿನಲ್ಲಿ ಗ್ರಾಹಕರನ್ನು ಕಿರುಕುಳಕ್ಕೆ ಗುರಿಪಡಿಸಿದರೆ ಸಹಿಸುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಆದಾಗ್ಯೂ, ಕೆಲವು ಹಣಕಾಸು ಸಂಸ್ಥೆಗಳಿಗೆ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಪೇಮೆಂಟ್ ಬ್ಯಾಂಕುಗಳು ಮತ್ತು ಲೋಕಲ್ ಏರಿಯಾ ಬ್ಯಾಂಕುಗಳಿಗೆ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ.
ಹೆಚ್ಚುತ್ತಿರುವ ಸಾಲ ವಸೂಲಾತಿ ಏಜೆಂಟರ ದೌರ್ಜನ್ಯಗಳು ಇತ್ತೀಚಿನ ದಿನಗಳಲ್ಲಿ ಸಾಲ ವಸೂಲಾತಿ ಏಜೆಂಟರ ದೌರ್ಜನ್ಯಗಳು ಹೆಚ್ಚುತ್ತಿವೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರನ್ನು ಕಿರುಕುಳಕ್ಕೆ ಗುರಿಪಡಿಸುತ್ತಿವೆ. ಸಾಲ ಮರುಪಾವತಿಸದಿದ್ದರೆ ಬೆದರಿಕೆ ಹಾಕುವ ಪ್ರಕರಣಗಳು ವರದಿಯಾಗುತ್ತಿವೆ. ಇದರ ಬಗ್ಗೆ ಆರ್‌ಬಿಐಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು. ಹೀಗಾಗಿ, ಸಾಲ ವಸೂಲಾತಿ ಏಜೆಂಟರ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಆರ್‌ಬಿಐ ಕೆಲವು ಸಮಯದಿಂದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿಯೇ ಇದೀಗ ಹೊಸ ನಿಯಮಗಳನ್ನು ತಂದಿದೆ. ಈ ನಿಯಮಗಳಿಂದಾಗಿ ಭವಿಷ್ಯದಲ್ಲಿ ಬ್ಯಾಂಕ್ ಗ್ರಾಹಕರಿಗೆ ಏಜೆಂಟರ ಕಿರುಕುಳ ಕಡಿಮೆಯಾಗಲಿದೆ. ಸಾಲ ವಸೂಲಾತಿಯಲ್ಲಿ ಬ್ಯಾಂಕುಗಳು ಸೂಕ್ತವಾದ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ.