newsics.com/ನ್ಯೂಸಿಕ್ಸ್
ಬಹುಭಾಷಾ ನಟಿ ಮುಮ್ತಾಜ್ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ. ನಟಿ ಮುಮ್ತಾಜ್ ಕನ್ನಡಕ್ಕೆ ʼಕಂಠಿʼ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಐಟಂ ಸಾಂಗ್‌ವೊಂದರಲ್ಲಿ ನಟಿ ಕಾಣಿಸಿಕೊಂಡಿದ್ದರು. ತಮಿಳು ‘ಮೋನಿಶಾ ಮತ್ತು ಮೋನಾಲಿಸಾ’ ಚಿತ್ರದ ಸಿನಿರಂಗಕ್ಕೆ ಕಾಲಿಟ್ಟರು. 1999 ರಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.
2000ರ ದಶಕದ ಆರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿದ್ದರು. ‘ಮೋನಿಶಾ ಎನ್ ಮೋನಾಲಿಸಾ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ನಂತರ ಸರಣಿ ಚಿತ್ರಗಳಲ್ಲಿ ನಟಿಸಿದರು. ವಿಶೇಷವಾಗಿ ಗ್ಲಾಮರಸ್ ಹಾಡುಗಳು ಮತ್ತು ವಿಭಿನ್ನ ಪಾತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
ನಟಿ ಮುಮ್ತಾಜ್ ಸದ್ಯ ಸಂಪೂರ್ಣವಾಗಿ ಆಧ್ಯಾತ್ಮಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಳಿ ಬಣ್ಣದ ವಸ್ತ್ರ ಧರಿಸಿ, ಅತ್ಯಂತ ಸರಳ ರೂಪದಲ್ಲಿ ಕಾಣಿಸಿಕೊಂಡಿರುವ ಅವರು, ತಮ್ಮ ಪ್ರಸ್ತುತ ಜೀವನದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ನಾನು ನಟಿಯಾಗಿದ್ದಾಗ, ನನ್ನ ಜೀವನ ಮತ್ತು ವೃತ್ತಿಜೀವನ ಎರಡೂ ಸಂಪೂರ್ಣವಾಗಿ ನಿರ್ದೇಶಕರ ಕೈಯಲ್ಲೇ ಇರುತ್ತಿತ್ತು. ಮೊದಲ ದಿನ ನನಗೊಂದು ಬಟ್ಟೆಯನ್ನು ತೋರಿಸುತ್ತಿದ್ದರು, ಆದರೆ ಶೂಟಿಂಗ್ ಸ್ಪಾಟ್‌ಗೆ ಹೋದಾಗ ಅದೇ ಬಟ್ಟೆ ಇನ್ನೂ ಚಿಕ್ಕದಾಗಿರುತ್ತಿತ್ತು. ‘ಏನ್ ಸರ್ ಇದು?’ ಎಂದು ಕೇಳಿದರೆ, ‘ನಿರ್ದೇಶಕರೇ ಬಟ್ಟೆಯ ಅಳತೆಯನ್ನು ಕಡಿಮೆ ಮಾಡಲು ಹೇಳಿದರು’ ಎನ್ನುತ್ತಿದ್ದರು.
ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ, ‘ಇದು ಗ್ಲಾಮರ್ ಸಾಂಗ್ ಮೇಡಂ, ಬಟ್ಟೆ ಚಿಕ್ಕದಾಗಿದ್ದರೇನೆ ಚೆನ್ನಾಗಿ ಕಾಣೋದು’ ಎಂದು ಹೇಳಿಬಿಡುತ್ತಿದ್ದರು. ನಿರ್ದೇಶಕರು ಹೇಳಿದ್ದನ್ನೇ ನಾನು ಕೇಳಬೇಕಾಗಿತ್ತು. ಅದುವೇ ನಿಜವಾದ ದಬ್ಬಾಳಿಕೆ. ಒಂದು ಕಲ್ಪನೆಗಾಗಿ, ಒಂದು ಅವಕಾಶಕ್ಕಾಗಿ, ಬೇರೆಯವರ ಮಾತನ್ನು ಕೇಳಿ ನಾನು ಬದುಕಿದ್ದೆ. ಆದರೆ ಇಂದು ನಾನು ಆ ಜೀವನದಿಂದ ದೂರ ಸರಿದು, ಅತ್ಯಂತ ನೆಮ್ಮದಿಯಿಂದ ಬದುಕುತ್ತಿದ್ದೇನೆ,” ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಘೋಷಿಸುವ ಅಧಿಕಾರಕ್ಕೆ ಬ್ರೇಕ್ ಹಾಕಿದ ಯುಎಸ್ ಸೆನೆಟ್