newsics.com/ನ್ಯೂಸಿಕ್ಸ್
ಬೆಂಗಳೂರು: ನಗರದ ಪ್ರಮುಖ ಲಾಡ್ಜ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಜೀವಂತ ಗುಂಡುಗಳು ಪತ್ತೆಯಾಗಿದೆ.
ಲಾಡ್ಜ್‌ನಲ್ಲಿ ಶಂಕಿತ ವ್ಯಕ್ತಿಯೊಬ್ಬ ತಂಗಿರುವ ಮತ್ತು ಆತನ ಬಳಿ ಮಾರಕಾಸ್ತ್ರಗಳು ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.
ಈ ಮಾಹಿತಿ ಆಧರಿಸಿ ಪೊಲೀಸರು ತಕ್ಷಣವೇ ಲಾಡ್ಜ್ ರೂಮ್ ಮೇಲೆ ದಾಳಿ ನಡೆಸಿದಾಗ ಜೀವಂತ ಬುಲೆಟ್‌ಗಳು ಪತ್ತೆಯಾಗಿವೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾನೂನುಬಾಹಿರವಾಗಿ ಈ ಜೀವಂತ ಗುಂಡುಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ ಶಂಕಿತ ಆರೋಪಿಯನ್ನು ಸ್ಥಳದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರಿನ ರೌಡಿಶೀಟರ್‌ಗಳಿಗೆ ಅಥವಾ ಅಪರಾಧ ಕೃತ್ಯ ಎಸಗಲು ಈ ಗುಂಡುಗಳನ್ನು ತರಲಾಗಿದ್ದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿದೇಶದಲ್ಲಿ ಮಾಡೆಲಿಂಗ್ ಕೆಲಸದ ಆಮಿಷವೊಡ್ಡಿ ಅತ್ಯಾ*ಚಾರ; ಅಲೀನಾ, ಸಿಂಧು ಅರೆಸ್ಟ್!