newsics.com/ನ್ಯೂಸಿಕ್ಸ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಚೀನಾದ ರಾಜಧಾನಿ ಬೀಜಿಂಗ್‌ಗೆ ಆಗಮಿಸಿದ್ದು, ಎರಡು ದಿನಗಳ ಮಹತ್ವದ ಶೃಂಗಸಭೆಗೆ ವೇದಿಕೆ ಸಿದ್ಧವಾಗಿದೆ.
https://youtube.com/shorts/KY0wlwc-Du0?si=-28u12qk1-aiTIHP
ಟ್ರಂಪ್ ವಿಮಾನದಿಂದ ಇಳಿದಾಗ ಚೀನಾ ಅಧ್ಯಕ್ಷ ಕ್ಸಿ ಜಿಂಗ್ಪಿನ್ ಸ್ವತಃ ವಿಮಾನ ನಿಲ್ದಾಣಕ್ಕೆ ಬಾರದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಟ್ರಂಪ್ ಅವರ ವಿಶೇಷ ವಿಮಾನ ಬೀಜಿಂಗ್ ವಿಮಾನ ನಿಲ್ದಾಣಕ್ಕೆ ಇಳಿದಾಗ, ಚೀನಾದ ಉಪಾಧ್ಯಕ್ಷ ಹನ್ ಜೆಹಾಂಗ್ ಮತ್ತು ಹಿರಿಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಕೆಂಪು ಹಾಸು, ಗೌರವ ವಂದನೆ, ಧ್ವಜ ಹಿಡಿದ ವಿದ್ಯಾರ್ಥಿಗಳಿಂದ ಸ್ವಾಗತ ಸೇರಿ ಚೀನಾ ಭರ್ಜರಿ ಆತಿಥ್ಯ ನೀಡಿತು. ಆದರೂ ಷಿ ಜಿನ್‌ಪಿಂಗ್ ಗೈರಾಗಿರುವುದು ಕೆಲವರಿಗೆ ಅಚ್ಚರಿಯಾಯ್ತು.
ಆದರೆ ತಜ್ಞರ ಪ್ರಕಾರ ಇದು ಅವಮಾನವಲ್ಲ. ಚೀನಾದ ರಾಜತಾಂತ್ರಿಕ ಪದ್ಧತಿಯಲ್ಲಿ ರಾಷ್ಟ್ರಪತಿ ಸಾಮಾನ್ಯವಾಗಿ ವಿಮಾನ ನಿಲ್ದಾಣಕ್ಕೆ ಹೋಗುವುದಿಲ್ಲ. ಬದಲಾಗಿ ಉಪಾಧ್ಯಕ್ಷ ಅಥವಾ ಉನ್ನತ ಹುದ್ದೆಯ ಪ್ರತಿನಿಧಿ ಸ್ವಾಗತಿಸುತ್ತಾರೆ. ನಂತರ ಅಧಿಕೃತ ಸಮಾರಂಭದಲ್ಲಿ ಅಧ್ಯಕ್ಷರು ಭೇಟಿ ನೀಡುತ್ತಾರೆ. ಈ ಬಾರಿ ಉಪಾಧ್ಯಕ್ಷ ಹಾನ್ ಝೆಂಗ್ ಸ್ವಾಗತಿಸಿರುವುದು ಉನ್ನತ ಮಟ್ಟದ ಗೌರವದ ಸೂಚಕವೆಂದೇ ವಿಶ್ಲೇಷಕರು ಹೇಳುತ್ತಿದ್ದಾರೆ.
https://www.newsics.com/2026/05/14/over-400-air-india-international-flights-cancelled-till-august/