newsics.com/ನ್ಯೂಸಿಕ್ಸ್
ಚೆನ್ನೈ: ತಮಿಳುನಾಡಿನಲ್ಲಿ ದಳಪತಿ ಯುಗಾರಂಭವಾಗಿದೆ. ತಮಿಳುನಾಡಿನ ನೂತನ ಸಿಎಂ ಆಗಿ ನಟ ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ಜೊತೆ 9 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ 9 ಸಚಿವರ ಪೈಕಿ ಶಿವಕಾಶಿಯ ಮೊದಲ ಮಹಿಳಾ ಶಾಸಕಿಯಾಗಿರುವ 29 ವರ್ಷದ ಕೀರ್ತನಾ ಸಿಎಂ ವಿಜಯ್ ಅವರ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿದ್ದಾರೆ.
https://youtube.com/shorts/wvfyhGYwVVw?si=koK0hviI-H0dDOsr
ಆದರೆ ಪ್ರಮಾಣ ವಚನ ಬೋಧಿಸಲು ಕಡ್ಡಾಯವಾಗಿರುವ ಚುನಾವಣಾ ಪ್ರಮಾಣಪತ್ರವನ್ನು ಸಲ್ಲಿಸಲು ವಿಫಲವಾದ ಕಾರಣ ತಮಿಳುನಾಡು ನೂತನ ಸರ್ಕಾರದ ಏಕೈಕ ಮಹಿಳಾ ಸಚಿವೆ ಎಸ್. ಕೀರ್ತನಾ ಅವರಿಗೆ ಬಿಗ್ ಶಾಕ್ ಉಂಟಾಗಿದೆ. ಸಿಎಂ ವಿಜಯ್ ಅವರ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿದ್ದಾರೆ.
ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಸೇರಿದಂತೆ ಎಲ್ಲಾ ಶಾಸಕರು ಮೊದಲು ತಮ್ಮ ಪ್ರಮಾಣಪತ್ರಗಳನ್ನು ಸಲ್ಲಿಸಿದರು ಮತ್ತು ನಂತರ ಅಧಿಕಾರಿಗಳು ಸಾಂವಿಧಾನಿಕ ಕಾರ್ಯವಿಧಾನದ ಪ್ರಕಾರ ಪ್ರಮಾಣ ವಚನ ಸ್ವೀಕರಿಸಲು ಕೇಳಿಕೊಂಡರು. ಸಂಪುಟದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಸಚಿವೆಯಾಗಿದ್ದ ಕೀರ್ತನಾ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಕೊನೆಯದಾಗಿ ಕರೆಯಲಾಯಿತು.
ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಅವರು ಕೀರ್ತನಾ ಅವರ ಹೆಸರನ್ನು ಘೋಷಿಸಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದಾಗ, ಕೀರ್ತನಾ ಮುಖ್ಯಮಂತ್ರಿಯವರ ಕುರ್ಚಿಯ ಮುಂದೆ ಇರಿಸಲಾದ ವೇದಿಕೆಯ ಕಡೆಗೆ ನಡೆದರು. ಯಾಕೆಂದರೆ ಪ್ರಮಾಣ ವಚನ ಸ್ವೀಕರಿಸುವ ಶಾಸಕರು ಹಂಗಾಮಿ ಸ್ಪೀಕರ್ ಅವರ ಬಳಿ ಬಂದು ಅನುಮತಿ ಕೇಳುವುದು ಸಂಪ್ರದಾಯ.
ಕೀರ್ತನಾ ವೇದಿಕೆಯ ಬಳಿಗೆ ಬರುತ್ತಿದ್ದಂತೆ, ಪ್ರಧಾನ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಕೈ ಎತ್ತಿ ಶಾಸಕ ಸ್ಥಾನದ ಪ್ರಮಾಣಪತ್ರ ಕೇಳಿದ್ದಾರೆ, ಇದು ವಿಧಾನಸಭಾ ಕಲಾಪಗಳ ನೇರ ಪ್ರಸಾರದಲ್ಲಿ ಕಂಡುಬಂದಿದೆ. ಆದರೆ, ಕೀರ್ತನಾ ಅವರು ಪ್ರಮಾಣಪತ್ರವನ್ನು ನೀಡಲು ಸಾಧ್ಯವಾಗಲಿಲ್ಲ, ಈ ವೇಳೆ ಅವರು ಏನು ಉತ್ತರಿಸಿದರು ಎಂಬುದು ಸ್ಪಷ್ಟವಾಗಿಲ್ಲ.
ಏನಾಯಿತು ಎಂದು ಕೇಳಿದಾಗ, ಅಧಿಕಾರಿಯೊಬ್ಬರು ಪಿಟಿಐಗೆ ಹೀಗೆ ಪ್ರಯಿಕ್ರಿಯೆ ನೀಡಿದ್ದಾರೆ; ‘ಅವರ ಚುನಾವಣಾ ಪ್ರಮಾಣಪತ್ರವು ಅವರ ಬಳಿ ಇರಲಿಲ್ಲ ಎಂದು ತೋರುತ್ತದೆ. ಅವರು ಪ್ರಮಾಣಪತ್ರವನ್ನು ಸಲ್ಲಿಸಲು ಸಾಧ್ಯವಾಗದ ಕಾರಣ, ಹಿರಿಯ ಅಧಿಕಾರಿ ಅವರಿಗೆ ಪ್ರಮಾಣವಚನ ಸ್ವೀಕರಿಸಲು ನಯವಾಗಿ ನಿರಾಕರಿಸಿದರು. ಅವರು ತಮ್ಮ ಚುನಾವಣಾ ಪ್ರಮಾಣಪತ್ರವನ್ನು ಸಲ್ಲಿಸಿದಾಗಲೇ ಪ್ರಮಾಣವಚನ ಸ್ವೀಕರಿಸಬಹುದು.
ವೇಲಾಚೇರಿ ಟಿವಿಕೆ ಶಾಸಕ ಆರ್. ಕುಮಾರ್ ಅವರು ಪ್ರಮಾಣಪತ್ರ ಸಲ್ಲಿಸಿದ ನಂತರ ಪ್ರಮಾಣ ವಚನ ಸ್ವೀಕರಿಸಲು ಕೀರ್ತನಾ ಮುಂದಾದಾಗ, ಪ್ರಧಾನ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಅವರನ್ನು ತಡೆದು, ಪ್ರಮಾಣಪತ್ರದಲ್ಲಿ ಇನ್ನೊಬ್ಬ ವ್ಯಕ್ತಿಯ ಹೆಸರು ಇದೆ ಎಂದು ತೋರಿಸಿದರು. ಆರ್ ಕುಮಾರ್ ತಮ್ಮ ಪಕ್ಕದಲ್ಲಿ ಕುಳಿತಿದ್ದ ಪಕ್ಷದ ಸಹೋದ್ಯೋಗಿಯ ಪ್ರಮಾಣಪತ್ರವನ್ನು ತಪ್ಪಾಗಿ ಸಲ್ಲಿಸಿದ್ದಾರೆ ಮತ್ತು ಅದನ್ನು ಅವರು ಶ್ರೀನಿವಾಸನ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ನಂತರ ತಿಳಿದುಬಂದಿದೆ.
https://www.newsics.com/2026/05/12/a-young-woman-who-went-to-death-row-for-opposing-love/