newsics.com/ನ್ಯೂಸಿಕ್ಸ್
ಬಾಲಿವುಡ್‌ನ ಮೋಹಕ ನಟಿ ಮತ್ತು ನಾಗಿನ್ ಧಾರಾವಾಹಿ ತಾರೆ ಮೌನಿ ರಾಯ್ ಪ್ರಸ್ತುತ ತಮ್ಮ ಚಿತ್ರಗಳಿಂದಲ್ಲ, ಬದಲಾಗಿ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. 2022 ರಲ್ಲಿ ಅದ್ಧೂರಿಯಾಗಿ ವಿವಾಹವಾದ ಮೌನಿ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ಮಾಹಿತಿಯೊಂದು ಇದೀಗ ಜೋರಾಗಿಯೇ ಕೇಳಿಬರುತ್ತಿದೆ..
https://youtube.com/shorts/wvfyhGYwVVw?si=koK0hviI-H0dDOsr
ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮೌನಿ ರಾಯ್, ಪತಿ ಸೂರಜ್ ಜೊತೆಗಿನ ಪ್ರವಾಸ ಹಾಗೂ ಡೇಟಿಂಗ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅವರು ಯಾವುದೇ ಫೋಟೋ ಹಂಚಿಕೊಂಡಿಲ್ಲ. ಇದಕ್ಕಿಂತಲೂ ಹೆಚ್ಚಾಗಿ, ಇಬ್ಬರೂ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿಲ್ಲ ಎಂಬುದು ಅಭಿಮಾನಿಗಳ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲದೆ, ಈ ಹಿಂದೆ ನೂಪುರ್ ಸನೋನ್ ಮದುವೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಫೋಟೋಗಳನ್ನು ಸಹ ಈಗ ಡಿಲೀಟ್ ಮಾಡಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಮೌನಿ ಮತ್ತು ಸೂರಜ್ 2022ರ ಜನವರಿ 27 ರಂದು ಗೋವಾದಲ್ಲಿ ಮಲಯಾಳಿ ಮತ್ತು ಬಂಗಾಳಿ ಸಂಪ್ರದಾಯದಂತೆ ಮದುವೆಯಾಗಿದ್ದರು. ಸೂರಜ್ ನಂಬಿಯಾರ್ ದುಬೈ ಮೂಲದ ಹೂಡಿಕೆ ಬ್ಯಾಂಕರ್ ಮತ್ತು ಉದ್ಯಮಿಯಾಗಿದ್ದಾರೆ. ಪ್ರಸ್ತುತ ಹರಡುತ್ತಿರುವ ಈ ವಿಚ್ಛೇದನದ ಸುದ್ದಿಯ ಬಗ್ಗೆ ದಂಪತಿಗಳಿಬ್ಬರೂ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
https://www.newsics.com/2026/05/12/neet-exam-scheduled-for-may-3rd-cancelled/