newsics.com/ನ್ಯೂಸಿಕ್ಸ್
ಸುದೀಪ್ ಪುತ್ರಿ ಸಾನ್ವಿ ಸುದೀಪ್ ನಿಧಾನಕ್ಕೆ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿರುವಂತಿದೆ. ಸಂಗೀತದ ಬಗ್ಗೆ ಆಸಕ್ತಿ ಹೊಂದಿರುವ ಸಾನ್ವಿ ಹಾಡು ಬರೆಯುವ, ಹಾಡುವ ಹವ್ಯಾಸ ಹೊಂದಿದ್ದಾರೆ. ಈಗಾಗಲೇ ಸುದೀಪ್ರ ಸೋದರಳಿಯ ಸಂಚಿತ್ರ ‘ಜಿಮ್ಮಿ’ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಅಪ್ಪ-ಅಮ್ಮನ ಮುದ್ದಿನ ಮಗಳಾದ ಸಾನ್ವಿ, ಪೋಷಕರು ಖುಷಿ ಪಡುವ ಕಾರ್ಯಗಳನ್ನು ಆಗಿದ್ದಾಂಗೆ ಮಾಡುತ್ತಿರುತ್ತಾರೆ. ಇದೀಗ ಸಾನ್ವಿ ಪುಟ್ಟ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ..
https://youtube.com/shorts/QmBsVJxCxsg?si=FaYAZtjO3Xv8e1rn
ಹೌದು,ಸುದೀಪ್ ಪುತ್ರಿ ಸಾನ್ವಿ ಬೆನ್ನಿನ ಮೇಲೆ ಅದ್ಭುತ ಗಣೇಶ ಟ್ಯಾಟೂ ಮೂಡಿದ್ದು, 8 ಗಂಟೆಗಳ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾನ್ವಿ ಸುದೀಪ್ ತಮ್ಮ ಬೆನ್ನಿನ ಮೇಲ್ಬಾಗದಲ್ಲಿ, ಅಂದರೆ ಎರಡು ಭುಜಗಳ ಮಧ್ಯಭಾಗದಲ್ಲಿ ಸಾಕ್ಷಾತ್ ಗಣೇಶನ ಚಿತ್ರವನ್ನ ಟ್ಯಾಟೂ ಮಾಡಿಸಿಕೊಂಡಿದ್ದಾರೆ. ಗಣೇಶನು ವಿಘ್ನನಿವಾರಕ ಹಾಗೂ ಸಕಲ ಕಾರ್ಯಗಳ ಆರಂಭದ ದೇವರೆಂದು ನಂಬಲಾಗುವವನು. ಸಾನ್ವಿ ಅವರಿಗೆ ಗಣೇಶನ ಮೇಲೆ ಅಪಾರ ಭಕ್ತಿ ಇದ್ದು, ತಮ್ಮ ಜೀವನದ ಹಾದಿಯಲ್ಲಿ ಗಣಪತಿಯ ಆಶೀರ್ವಾದ ಯಾವಾಗಲೂ ಬೆನ್ನಿಗಿರಲಿ ಎಂಬ ಉದ್ದೇಶದಿಂದ ಈ ವಿನ್ಯಾಸವನ್ನ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಾನ್ವಿ ಸುದೀಪ್ ಅವರು ಈ ಟ್ಯಾಟೂ ಹಾಕಿಸಿಕೊಳ್ಳುವ ಪ್ರಕ್ರಿಯೆಯ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಎಂಟು ಗಂಟೆಗಳ ಕಾಲ ತಾಳ್ಮೆಯಿಂದ ಕುಳಿತು, ನೋವನ್ನ ಸಹಿಸಿಕೊಂಡು ತಮಗೆ ಇಷ್ಟವಾದ ಕಲೆಗೆ ಮಾರುಹೋಗಿರುವುದನ್ನ ಅಭಿಮಾನಿಗಳು ಶ್ಲಾಘಿಸಿದ್ದಾರೆ.