newsics.com/ನ್ಯೂಸಿಕ್ಸ್
ಚಿನ್ನದ ದರ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಂತೆ, ಇಂದಿನ ಚಿನ್ನದ ದರ 24 ಕ್ಯಾರೆಟ್ಗೆ 1 ಗ್ರಾಂಗೆ ₹15,284 ರೂಪಾಯಿಗಳಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರಿಗೆ ಒಂದು ವರ್ಷದವರೆಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ.
https://youtube.com/shorts/QmBsVJxCxsg?si=FaYAZtjO3Xv8e1rn
ತೆಲಂಗಾಣದ ಹೈದರಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಮುಂದಿನ ಒಂದು ವರ್ಷಗಳ ಕಾಲ ಹಬ್ಬ ಹರಿದಿನಗಳಲ್ಲಿ ಚಿನ್ನವನ್ನು ಖರೀದಿಸಬೇಡಿ ಎಂದು ದೇಶವಾಸಿಗಳಿಗೆ ಮನವಿ ಮಾಡಿದರು. ಇದರೊಂದಿಗೆ, ಒಂದು ವರ್ಷದವರೆಗೆ ತಮ್ಮ ವಿದೇಶ ಪ್ರವಾಸಗಳನ್ನು ಮುಂದೂಡುವಂತೆಯೂ ಅವರು ಸಲಹೆ ನೀಡಿದ್ದಾರೆ.
ಮುಂದಿನ ಒಂದು ವರ್ಷ ಚಿನ್ನ ಖರೀದಿಸಬೇಡಿ. ಮನೆಯಲ್ಲಿ ಯಾವುದೇ ಪ್ರಮುಖ ಕಾರ್ಯಕ್ರಮ ಅಥವಾ ಮದುವೆ ಇದ್ದರೂ ಸಹ. ಜನರು ಕನಿಷ್ಠ ಒಂದು ವರ್ಷದವರೆಗೆ ಚಿನ್ನಾಭರಣ ಖರೀದಿಸುವುದನ್ನು ನಿಲ್ಲಿಸಬೇಕು. ದೇಶವು ಯುದ್ಧ ಅಥವಾ ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ ಜನರು ರಾಷ್ಟ್ರದ ಹಿತದೃಷ್ಟಿಯಿಂದ ಸರ್ಕಾರಕ್ಕೆ ತಮ್ಮ ಚಿನ್ನವನ್ನು ದಾನ ಮಾಡುತ್ತಾರೆ. ಇಂದು ಸರ್ಕಾರಕ್ಕೆ ನಿಮ್ಮ ಚಿನ್ನದ ದೇಣಿಗೆಗಳು ಅಗತ್ಯವಿಲ್ಲದಿದ್ದರೂ, ರಾಷ್ಟ್ರದ ಹಿತದೃಷ್ಟಿಯಿಂದ ಜನರು ಕನಿಷ್ಠ ಒಂದು ವರ್ಷದವರೆಗೆ ಹೊಸ ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಖರೀದಿಸುವುದನ್ನು ತಡೆಯಬೇಕು ಎಂದು ತಿಳಿಸಿದ್ದಾರೆ.
ಪ್ರಧಾನಿಯವರ ಈ ಕರೆಯ ಹಿಂದಿನ ಪ್ರಮುಖ ಕಾರಣಗಳು:
ವಿದೇಶಿ ವಿನಿಮಯ ಉಳಿತಾಯ: ಭಾರತವು ಅತಿ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಚಿನ್ನದ ಖರೀದಿ ಕಡಿಮೆಯಾದಷ್ಟೂ ದೇಶದ ವಿದೇಶಿ ವಿನಿಮಯ ಮೀಸಲು ಉಳಿತಾಯವಾಗುತ್ತದೆ ಮತ್ತು ರೂಪಾಯಿ ಮೌಲ್ಯ ಕುಸಿಯುವುದನ್ನು ತಡೆಯಬಹುದು.
ಇಂಧನ ಸಂರಕ್ಷಣೆ: ಪಶ್ಚಿಮ ಏಷ್ಯಾದ ಯುದ್ಧದಿಂದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಆದ್ದರಿಂದ, ಮೆಟ್ರೋ ರೈಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ ಇಂಧನ ಅವಲಂಬನೆಯನ್ನು ತಗ್ಗಿಸುವಂತೆ ಅವರು ಕೋರಿದ್ದಾರೆ.
ಆಹಾರ ತೈಲ ಬಳಕೆಯಲ್ಲಿ ಶೇ. 10ರಷ್ಟು ಕಡಿತ: ಅಡುಗೆ ಎಣ್ಣೆಯ ಬಳಕೆಯನ್ನು ಶೇ. 10ರಷ್ಟು ಕಡಿಮೆ ಮಾಡುವ ಮೂಲಕ ರಾಷ್ಟ್ರಕ್ಕೆ ನೆರವಾಗುವಂತೆ ಹಾಗೂ ಇದು ಆರೋಗ್ಯಕ್ಕೂ ಪೂರಕ ಎಂದು ಪ್ರಧಾನಿ ತಿಳಿಸಿದ್ದಾರೆ
https://www.newsics.com/2026/05/11/kalaburagi-a-young-man-committed-suicide-by-jumping-off-a-bridge/