Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಇದು ಆಸ್ಪತ್ರೆಯಲ್ಲಿ ಕೂತು ಸಾವಿನ ಸೂಚನೆ ನೀಡುವ ಬೆಕ್ಕು!
ಪ್ರಮುಖ

ಇದು ಆಸ್ಪತ್ರೆಯಲ್ಲಿ ಕೂತು ಸಾವಿನ ಸೂಚನೆ ನೀಡುವ ಬೆಕ್ಕು!

Share
2 Min Read
SHARE

newsics.com/ನ್ಯೂಸಿಕ್ಸ್

ಬೆಕ್ಕೊಂದು  ಜನರ ಮರಣದ ಬಗ್ಗೆ ನಿಖರವಾಗಿ ಭವಿಷ್ಯ ಹೇಳುತ್ತಿರುವ ಘಟನೆ  ಅಮೇರಿಕಾದ ರೋಡ್ ಐಲ್ಯಾಂಡ್‌ನಲ್ಲಿ ನಡೆದಿದೆ.

ಒಂದು ನರ್ಸಿಂಗ್ ಹೋಮ್‌ನಲ್ಲಿ ವಾಸಿಸುವ ಈ ಬೆಕ್ಕು, ಯಾವ ರೋಗಿಯ ಸಾವು ಹತ್ತಿರವಾಗಿದೆಯೋ ಅವರ ಬಳಿಯೇ ಹೋಗಿ ಕುಳಿತುಕೊಳ್ಳುತ್ತದೆ. ಬೆಕ್ಕಿನ ಈ ವರ್ತನೆಯಿಂದ ನರ್ಸಿಂಗ್ ಹೋಮ್‌ನವರಿಗೆ ಒಂದು ಕಡೆ ಅನುಕೂಲವಾಗುತ್ತಿದ್ದರೆ, ಇನ್ನೊಂದೆಡೆ ಜನರು ಗಾಬರಿಗೊಳ್ಳುತ್ತಿದ್ದಾರೆ.

100ಕ್ಕೂ ಹೆಚ್ಚು ಜನರ ನಿಖರ ಭವಿಷ್ಯ

ಅಮೆರಿಕದ ಈಶಾನ್ಯದಲ್ಲಿರುವ ರೋಡ್ ಐಲ್ಯಾಂಡ್‌ನ ‘ಸ್ಟಿಯರ್ ಹೌಸ್ ನರ್ಸಿಂಗ್ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್’ನ ಡಿಮೆನ್ಶಿಯಾ ಯುನಿಟ್‌ನಲ್ಲಿ ಈ ಬೆಕ್ಕು ಬೆಳೆದಿದೆ. ಬ್ರೌನ್ ಯೂನಿವರ್ಸಿಟಿಯ ವಯೋವಿಜ್ಞಾನಿ ಡಾ. ಡೇವಿಡ್ ಡೋಸಾ ಅವರು ತಮ್ಮ ‘ಮೇಕಿಂಗ್ ರೌಂಡ್ಸ್ ವಿತ್ ಆಸ್ಕರ್’ ಎಂಬ ಪುಸ್ತಕದಲ್ಲಿ ಈ ಬೆಕ್ಕಿನ ಬಗ್ಗೆ ವಿವರವಾಗಿ ಬರೆದಿದ್ದಾರೆ. ಆಸ್ಕರ್ ಎಂಬ ಹೆಸರಿನ ಈ ಬೆಕ್ಕು ಅಲ್ಝೈಮರ್ಸ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲೇ ವಾಸಿಸುತ್ತದೆ. ಬಿಳಿ ಬಣ್ಣದ ಈ ಬೆಕ್ಕು ಆಸ್ಪತ್ರೆಯ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಸುತ್ತುತ್ತಿರುತ್ತದೆ.

2000ನೇ ಇಸವಿಯಲ್ಲಿ ಈ ಬೆಕ್ಕನ್ನು ಥೆರಪಿಗಾಗಿ ಆಸ್ಪತ್ರೆಗೆ ತರಲಾಗಿತ್ತು. ಡಾ. ಡೋಸಾ ಹೇಳುವಂತೆ, ಈ ಬೆಕ್ಕು ಜನರ ಬೆಡ್‌ಗಳ ಮೇಲೆ ಹಾರುತ್ತಾ ಆಟವಾಡುತ್ತಿರುತ್ತದೆ. ಆದರೆ ಯಾವ ರೋಗಿ ಸಾವನ್ನಪ್ಪಲಿದ್ದಾರೋ ಅವರ ಹಾಸಿಗೆಯ ಬಳಿಯೇ ಇದು ಮೊಕ್ಕಾಂ ಹೂಡುತ್ತದೆ. ಹಲವಾರು ಬಾರಿ ಇದು ಯಾವ ರೋಗಿ ಸಾಯಲಿದ್ದಾರೋ ಅವರ ಕೋಣೆಗೇ ಹೋಗುತ್ತದೆ. ನರ್ಸಿಂಗ್ ಹೋಮ್ ಸಿಬ್ಬಂದಿ ಹಲವಾರು ಬಾರಿ ಬೆಕ್ಕನ್ನು ಬೇರೆ ಕೋಣೆಗೆ ಕಳುಹಿಸಲು ಪ್ರಯತ್ನಿಸಿದರೂ, ಅದು ಸಾವು ಸಮೀಪಿಸಿದ ರೋಗಿಯ ಕೋಣೆಯ ಬಾಗಿಲನ್ನೇ ಬಡಿಯುತ್ತಾ ಕಿರುಚುತ್ತಿರುತ್ತದೆ. ಬಾಗಿಲು ತೆರೆದ ತಕ್ಷಣ ಗಂಭೀರ ಸ್ಥಿತಿಯಲ್ಲಿರುವ ರೋಗಿಯ ಬಳಿಯೇ ಹೋಗಿ ಕುಳಿತುಕೊಳ್ಳುತ್ತದೆ.

ಬೆಕ್ಕಿನ ಈ ಭವಿಷ್ಯವಾಣಿಯನ್ನು ನಂಬುವ ಆಸ್ಪತ್ರೆಯ ಸಿಬ್ಬಂದಿ, ಯಾವ ರೋಗಿ ಸಾಯಲಿದ್ದಾರೋ ಅವರ ಸಂಬಂಧಿಕರಿಗೆ ಮೊದಲೇ ಮಾಹಿತಿಯನ್ನು ನೀಡುತ್ತಾರೆ. ಡಾ. ಡೋಸಾ ತಮ್ಮ ಪುಸ್ತಕದಲ್ಲಿ ಬರೆದಿರುವಂತೆ, ಹಲವು ಬಾರಿ ಬೆಕ್ಕನ್ನು ಬೇರೆ ರೋಗಿಯ ಬಳಿ ಕೂರಿಸಿದರೂ, ಅದು ಅಲ್ಲಿಂದ ಹಾರಿ ಸಾವು ಹತ್ತಿರವಿದ್ದ ರೋಗಿಯ ಬಳಿಯೇ ತಲುಪುತ್ತಿತ್ತು. ಅಂದು ರಾತ್ರಿಯೇ ಆ ರೋಗಿ ಸಾವನ್ನಪ್ಪುತ್ತಿದ್ದರು. ಒಂದು ಬಾರಿಯಂತೂ ಬೆಕ್ಕು ಅಂತಹ ರೋಗಿಯ ಬಳಿ ಹೋಗಿ ಕುಳಿತುಕೊಂಡಿತ್ತು. ಆದರೆ ವೈದ್ಯರಿಗೆ ಮಾತ್ರ ಆ ರೋಗಿ ಸಾಯುತ್ತಾರೆ ಎಂಬ ಸಂಶಯವೇ ಇರಲಿಲ್ಲ. ಆದರೆ ಆ ರೋಗಿ ಕೂಡ ಸಾವನ್ನಪ್ಪಿದರು. ಹೀಗೆ ಈ ಬೆಕ್ಕಿನ ಭವಿಷ್ಯದ ಮುಂದೆ ವೈದ್ಯರ ಪ್ರೆಡಿಕ್ಷನ್ ಕೂಡ ಫೇಲ್ ಆಯಿತು.

ವಿಜ್ಞಾನಿಗಳು ಏನು ಹೇಳುತ್ತಾರೆ?

ವಿಜ್ಞಾನಿಗಳ ಪ್ರಕಾರ, ಪ್ರಾಣಿಗಳಿಗೆ ರಾಸಾಯನಿಕ ಬದಲಾವಣೆ  ಮತ್ತು ವರ್ತನೆಯ ಬದಲಾವಣೆಯನ್ನು ಗುರುತಿಸುವ ಸಾಮರ್ಥ್ಯವಿರುತ್ತದೆ. ಸಾಯುವ ವ್ಯಕ್ತಿಯ ದೇಹದಲ್ಲಿ ಆಗುವ ಮೆಟಬಾಲಿಸಂ ಮತ್ತು ಉಷ್ಣಾಂಶದ ಬದಲಾವಣೆಯನ್ನು ಅವು ಗ್ರಹಿಸಿಕೊಳ್ಳುತ್ತವೆ. ಇದಲ್ಲದೆ ಅವುಗಳ ವಾಸನೆ ಹಿಡಿಯುವ ಸಾಮರ್ಥ್ಯ ಕೂಡ ಅದ್ಭುತವಾಗಿರುತ್ತದೆ. ಹೀಗಾಗಿ ದೇಹದಲ್ಲಿ ಆಗುವ ಬದಲಾವಣೆಗಳು ಮತ್ತು ಜೈವಿಕ ಪ್ರಕ್ರಿಯೆಗಳ ಬಗ್ಗೆ ಅವುಗಳಿಗೆ ಮಾಹಿತಿ ಸಿಗುತ್ತದೆ. ಇದೇ ಕಾರಣದಿಂದ ಅವು ಸಾವಿನ ಬಗ್ಗೆ ನಿಖರವಾದ ಭವಿಷ್ಯ ನುಡಿಯುತ್ತವೆ.

ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ ಎಂದ ಸಾಯಿ ಪಲ್ಲವಿ

TAGGED:This is a cat sitting in the hospital and giving death notice!
Share This Article
Facebook Twitter Copy Link Print
Previous Article ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ ಎಂದ ಸಾಯಿ ಪಲ್ಲವಿ
Next Article ರಾತ್ರೋರಾತ್ರಿ ಮಾಯವಾದ ಜೋಡೆತ್ತು! ಪೊಲೀಸರ ಮೊರೆ ಹೋದ ರೈತ

Popular Posts

Strange fever ರಾಜ್ಯದಲ್ಲಿ ವಿಚಿತ್ರ ಜ್ವರ: ಕಂಗಾಲಾದ ಜನ, ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

1 Min Read

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

2 Min Read

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

You Might Also Like

Sportsಪ್ರಮುಖವಿದೇಶ

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read
ದೇಶಪ್ರಮುಖ

Protest at Delhi | ಉಪವಾಸ ಸತ್ಯಾಗ್ರಹದಿಂದ ಸೋನಂ ವಾಂಗ್‌ಚುಕ್ ಆರೋಗ್ಯ ಹದಗೆಟ್ಟಿದೆ: ವೈದ್ಯರ ಆತಂಕ, ದೇಶಾದ್ಯಂತ ಬೆಂಬಲ ಹೆಚ್ಚಳ

2 Min Read
ವಿದೇಶSportsಪ್ರಮುಖ

Fifa World Cup Semifinal|ಫಿಫಾ ವಿಶ್ವಕಪ್ 2026: ಇಂಗ್ಲೆಂಡ್ ವಿರುದ್ಧ ಅರ್ಜೆಂಟೀನಾದ ರೋಚಕ ಕಮ್‌ಬ್ಯಾಕ್, ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಮೆಸ್ಸಿ ಪಡೆ

2 Min Read
ಆರೋಗ್ಯಪ್ರಮುಖ

Yoga Tips: ಯೋಗ ಮಾಡುವ ಮುನ್ನ ಈ ನಿಯಮಗಳು ನೆನಪಿರಲಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?