ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಾವಿನ ಮರಿ ಪತ್ತೆಯಾದ ಘಟನೆ ಬಿಹಾರದ(Bihar) ಸಹರ್ಸಾ ಜಿಲ್ಲೆಯಲ್ಲಿನಡೆದಿದೆ. ಇದರಿಂದಾಗಿ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂ,ಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಹರ್ಸಾ ಜಿಲ್ಲೆಯ ಮಹಿಷಿ ಬ್ಲಾಕ್‌ನ ಬಲುವಾಹಾ ಸರ್ಕಾರಿ ಮಾಧ್ಯಮ ಶಾಲೆ.ಘಟನೆ: ಗುರುವಾರ (ಮೇ 7, 2026) ಮಧ್ಯಾಹ್ನದ ಬಿಸಿಯೂಟದಲ್ಲಿ ಮೃತ ಹಾವಿನ ಮರಿಯೊಂದು ಪತ್ತೆಯಾಗಿದೆ. ಊಟ ಸೇವಿಸಿದ ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿ ಮತ್ತು ತಲೆಸುತ್ತಿನಿಂದ ಅಸ್ವಸ್ಥರಾಗಿದ್ದಾರೆ.
ತನಿಖೆ: ಜಿಲ್ಲಾಧಿಕಾರಿ ದೀಪೇಶ್ ಕುಮಾರ್ ಅವರು ಈ ಕುರಿತು ತನಿಖೆಗೆ ಆದೇಶಿಸಿದ್ದು, ಬಿಸಿಯೂಟ ಪೂರೈಸುವ NGO ಮತ್ತು ಶಾಲಾ ಆಡಳಿತದ ವಿರುದ್ಧ ಫ್‌ಐಆರ್ (FIR) ದಾಖಲಿಸಲು ಸೂಚಿಸಿದ್ದಾರೆ. ಆಹಾರದ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ..