Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ದಪ್ಪಗಿದ್ದಾಳೆಂದು  80,000 ರೂ. ಖರ್ಚು ಮಾಡಿ ಪತ್ನಿಯನ್ನೇ ಕೊಂದ ಪಾಪಿ ಪತಿ 
ಪ್ರಮುಖ

ದಪ್ಪಗಿದ್ದಾಳೆಂದು  80,000 ರೂ. ಖರ್ಚು ಮಾಡಿ ಪತ್ನಿಯನ್ನೇ ಕೊಂದ ಪಾಪಿ ಪತಿ 

Share
2 Min Read
SHARE

ದಪ್ಪಗಿದ್ದಾಳೆಂದು ಎಂಟು ವರ್ಷಗಳ ದಾಂಪತ್ಯವನ್ನು ಮರೆತು ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವೈಎಸ್‌ಆರ್ ಕಡಪ ಜಿಲ್ಲೆಯಲ್ಲಿ ನಡೆದಿದೆ.

ಆಂಧ್ರದ ಮುದ್ದನೂರು ಮಂಡಲದ ಪದ್ಮಜಾ (31) ಮತ್ತು ಪ್ರೊದ್ದಟೂರಿನ ಭದ್ರಾಪಲ್ಲಿ ಕಿರಣ್ ಕುಮಾರ್ ಅವರು 2018ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಕಿರಣ್ ತನ್ನ ಪತ್ನಿಯ ಮನೆಯಲ್ಲೇ ನೆಲೆಯಾಗಿದ್ದನು (ಇಲ್ಲರಿಕಂ ಪದ್ಧತಿ). ಈ ದಂಪತಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ಕಿರಣ್ ಕಳೆದ ಐದು ವರ್ಷಗಳಿಂದ ‘ವರ್ಕ್ ಫ್ರಮ್ ಹೋಮ್’ ಮೂಲಕ ಕೆಲಸ ಮಾಡುತ್ತಿದ್ದನು.

ದ್ವೇಷಕ್ಕೆ ಕಾರಣವಾಯ್ತು ಹೆಂಡತಿಯ ಆಹಾರ ಪದ್ಧತಿ!

ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಿರಣ್‌ಗೆ ತನ್ನ ಪತ್ನಿ ಪದ್ಮಜಾ ದಿನದಿಂದ ದಿನಕ್ಕೆ ತೂಕ ಹೆಚ್ಚಿಸಿಕೊಳ್ಳುತ್ತಿರುವುದು ಅಸಮಾಧಾನ ತಂದಿತ್ತು. ಆಕೆ ಅತಿಯಾಗಿ ಜಂಕ್ ಫುಡ್ ಹಾಗೂ ಮಾಂಸಾಹಾರ ಸೇವಿಸುತ್ತಿದ್ದಾಳೆ ಎಂಬುದು ಕಿರಣ್‌ನ ಕ್ರೂರ ಆಕ್ರೋಶಕ್ಕೆ ಕಾರಣವಾಗಿತ್ತು. ಪತ್ನಿ ದಪ್ಪಗಾಗಿದ್ದಕ್ಕೆ ಅವಳಿಗೆ ಸಾವೇ ಶಿಕ್ಷೆ ಎಂದು ಆತ ನಿರ್ಧರಿಸಿದ್ದನು.

ಗೂಗಲ್‌ನಲ್ಲಿ ಕೊಲೆಗೆ ಸ್ಕೆಚ್: 80 ಸಾವಿರದ ವಿಷ ತರಿಸಿದ್ದ ಪಾಪಿ

ತನ್ನ ಪತ್ನಿಯನ್ನು ಕೊಲ್ಲಲು ಕಿರಣ್ ಅತ್ಯಂತ ಯೋಜಿತ ಸಂಚು ರೂಪಿಸಿದ್ದನು.: “ಹೆಂಡತಿಯನ್ನು ಕೊಲ್ಲುವುದು ಹೇಗೆ?” ಎಂದು ಗೂಗಲ್‌ನಲ್ಲಿ ಹುಡುಕಾಡಿದ್ದನು.ಒಂದು ವಿಡಿಯೋದಲ್ಲಿ ಸಿಕ್ಕ ಸಂಪರ್ಕ ಸಂಖ್ಯೆಯನ್ನು ಬಳಸಿ, ಬರೊಬ್ಬರಿ 80,000 ರೂಪಾಯಿ ನೀಡಿ ವಿಷವನ್ನು ಆರ್ಡರ್ ಮಾಡಿದ್ದನು.ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ಹೋಗಿ ತನ್ನ ತಂದೆ-ತಾಯಿಯ ಮನೆಯಲ್ಲೇ ಕೊಲೆ ಮಾಡಲು ನಿರ್ಧರಿಸಿದ್ದನು.

ಕೊಲೆ ನಡೆದ ರೀತಿ: ಸಿಹಿಯಲ್ಲಿ ವಿಷ, ನಂತರ ಉಸಿರುಗಟ್ಟಿಸಿ ಹತ್ಯೆ

ಏಪ್ರಿಲ್ 29ರಂದು ವಿಷದ ಪಾರ್ಸೆಲ್ ಬಂದ ತಕ್ಷಣ, ಕಿರಣ್ ಪದ್ಮಜಾಳಿಗೆ ಇಷ್ಟವಾದ ಪಾಲಕೋವ ಸಿಹಿಯಲ್ಲಿ ಅದನ್ನು ಬೆರೆಸಿ ತಿನ್ನಿಸಿದ್ದಾನೆ. ವಿಷದ ಪ್ರಭಾವದಿಂದ ಪದ್ಮಜಾ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ದಿಂಬಿನಿಂದ ಆಕೆಯ ಮುಖವನ್ನು ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆಕೆ ಸಾವನ್ನಪ್ಪಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ ಸುಮಾರು ಮೂರು ಗಂಟೆಗಳ ಕಾಲ ಆತ ಹೆಣದ ಪಕ್ಕದಲ್ಲೇ ಕುಳಿತು, ಬಳಿಕ ತನ್ನ ಪತ್ನಿಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ.

ಬಯಲಾಯ್ತು ಕಿರಾತಕನ ಕೃತ್ಯ

ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವೈದ್ಯಕೀಯ ವರದಿಯಲ್ಲಿ ವಿಷ ಸೇವನೆ ಮತ್ತು ಉಸಿರುಗಟ್ಟಿಸಿರುವುದು ದೃಢಪಟ್ಟಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಕಿರಣ್ ತನ್ನ ಪತ್ನಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಈ ಘೋರ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಸೌಂದರ್ಯದ ಹೆಸರಿನಲ್ಲಿ ಮಾನವೀಯತೆ ಮರೆತು ನಡೆಯುತ್ತಿರುವ ಇಂತಹ ಘಟನೆಗಳು ಸಮಾಜದ ವಿಕೃತ ಮನಸ್ಥಿತಿಗೆ ಕನ್ನಡಿ ಹಿಡಿಯುತ್ತಿವೆ.

ಕರ್ನಾಟಕದಲ್ಲೂ ಬರ್ತಿದೆ ಹೊಸ ರಾಜಕೀಯ ಪಕ್ಷ!

TAGGED:000 on her because she is fatSinful husband kills wife after spending Rs. 80
Share This Article
Facebook Twitter Copy Link Print
Previous Article ಕರ್ನಾಟಕದಲ್ಲೂ ಬರ್ತಿದೆ ಹೊಸ ರಾಜಕೀಯ ಪಕ್ಷ!
Next Article ನಾವು ರಾಮನ ಭಕ್ತರು. ರಾವಣನಂತೆ ವರ್ತಿಸಬಾರದು’;ಬಿಜೆಪಿ ಕಾರ್ಯಕರ್ತರಿಗೆ ಕೇಂದ್ರ ಸಚಿವ ಎಚ್ಚರಿಕೆ!

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?