8 ವರ್ಷಗಳಿಂದ PSI ಜೊತೆ ಪ್ರೀತಿಯಲ್ಲಿದ್ದ ಲೇಡಿ ಪೇದೆ ಇದೀಗ ಮತ್ತೊಬ್ಬನ ಜೊತೆ ಹಸೆಮಣೆ ಏರ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇಅಲ್ಲದೇ, 35 ಲಕ್ಷ ಪಡೆದು, 3 ಬಾರಿ ಅಬಾರ್ಷನ್ ಮಾಡಿಸಿಕೊಂಡು,ಪ್ರಿಯಕರನೇ ಬೇಡ ಅಂತಿದ್ದಾಳೆ..
ಹೌದು, ಯಾದಗಿರಿ ಇಂಟಲಿಜೆನ್ಸ್ ಪಿಎಸ್‌ಐ ವೀರೇಶ್ ಆಲೂರು ಹಾಗೂ ರಾಯಚೂರು ಗ್ರಾಮೀಣ ಠಾಣೆ ಪೇದೆ ಜಯಶ್ರೀ ಯರಗಲ್ ನಡುವಿನ ಪ್ರೀತಿ ಗಲಾಟೆ ಇದೀಗ ಬೀದಿಗೆ ಬಂದಿದೆ. ಪಿಎಸ್‌ಐ ಮತ್ತು ಲೇಡಿ ಪೇದೆ ನಡುವಿನ ಪ್ರೀತಿಯಲ್ಲಿ ಬಿರುಕು ಮೂಡಿದೆ. 8 ವರ್ಷಗಳ ಪ್ರಣಯದಾಟಕ್ಕೆ ಜಾತಿ ಅಡ್ಡಿಯಾಗಲಿಲ್ಲ. ಇದೀಗ ಮದುವೆ ವಿಷಯ ಬಂದಾಗ ಜಾತಿ ಅಡ್ಡ ಬರ್ತಿದೆ ಎಂದು ವೀರೇಶ್ ಲವ್ ಮೇಲೆ ಆರೋಪಗಳ ಸುರಿಮಳೆ ಗೈದಿದ್ದಾರೆ.
ವೀರೇಶ್ ಆಲೂರು ಲಿಂಗಾಯತ ಪಂಚಮಸಾಲಿಗೆ ಸೇರಿದವರಾಗಿದ್ದು, ಲೇಡಿ ಪೇದೆ ಜಯಶ್ರೀ ಕಬ್ಬಲಿಗ ಜಾತಿಯವರು ಎನ್ನಲಾಗ್ತಿದೆ. 8 ವರ್ಷ ಜೊತೆಯಾಗಿ ಊರು ಸುತ್ತಿ ರೊಮ್ಯಾನ್ಸ್ ಮಾಡಿದವಳು ಈಗ ಮದುವೆ ಬೇಡ ಅಂತಿದ್ದಾರೆ. ಪ್ರಿಯತಮೆಯಿಂದಲೇ ಲವ್, ಸೆಕ್ಸ್, ದೋಖಾ ಆಗಿದೆ ಎಂದು ಪಿಎಸ್‌ಐ ಆರೋಪ ಮಾಡ್ತಿದ್ದಾರೆ.
ಪ್ರಿಯತಮ ಪಿಎಸ್‌ಐಗೆ ಕೈಕೊಟ್ಟ ಲವರ್ ಲೇಡಿ ಪೇದೆ ಇದೀಗ ಮೇಲೆ 7ರಂದು ರಾಯಚೂರಿನಲ್ಲಿ ಬೇರೊಬ್ಬ ಯುವಕನನ್ನ ಮದುವೆಯಾಗಲು ಮುಂದಾಗಿದ್ದಾಳೆ ಎಂದು ಪಿಎಸ್‌ಐ ಆರೋಪ ಮಾಡ್ತಿದ್ದಾರೆ. ವೀರೇಶ್ ಆಲೂರು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೆವಾಡದವರಾಗಿದ್ದು, ಜಯಶ್ರೀ ವಿಜಯಪುರ ಆಲ್‌ಮೇಲ್ ತಾಲ್ಲೂಕಿನ ಬಳಗಾನೂರಿನವರಾಗಿದ್ದಾರೆ. ಈ ಜೋಡಿ ನಡುವೆ ಕೋಚಿಂಗ್ ಸೆಂಟರ್‌ನಲ್ಲಿ ಪ್ರೀತಿ ಮೂಡಿತ್ತಂತೆ.
2017ರಲ್ಲಿ ಪಿಎಸ್‌ಐ ಆಗಿ ವೀರೇಶ್ ಸೆಲೆಕ್ಟ್ ಆಗಿದ್ದ. ಕೋಚಿಂಗ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಸನ್ಮಾನದಲ್ಲಿ ಇಬ್ಬರಿಗೂ ಪರಿಚಯವಾಗಿದ್ದು, ಬಳಿಕ ಸ್ನೇಹ ಪ್ರೀತಿಗೆ ತಿರುಗಿದೆ. ಇದಾದ ಮೇಲೆ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ಆಗಿದ್ದು, ಇಬ್ಬರು ಗಂಡ ಹೆಂಡತಿಯಂತೆ ಒಂದೇ ರೂಮಿನಲ್ಲಿ ಒಟ್ಟಿಗೆ ಇದ್ದರು ಎನ್ನಲಾಗ್ತಿದೆ.
ರಾಯಚೂರಿನ ಬಾಲಮರೆಮ್ಮ ಟೆಂಪಲ್ನಲ್ಲಿ ಹಾರ ಬದಲಿಸಿಕೊಂಡಿದ್ದ ಒಟ್ಟಿಗೆ ಒಂದೇ ರೂಮ್ನಲ್ಲಿ ಇದ್ದರಂತೆ. ಅಷ್ಟೇ ಅಲ್ಲದೇ ಜಯಶ್ರೀ ಆರೋಗ್ಯದ ನೆಪ ಹೇಳಿ ಪ್ರೇಮಿಯಿಂದ 5 ಲಕ್ಷ ಹಣ ಪಡೆದು 3 ಬಾರಿ ಅರ್ಬಾಷನ್ ಮಾಡಿಸಿಕೊಂಡಿದ್ದಳು ಎನ್ನಲಾಗ್ತಿದೆ.
ಕೊಪ್ಪಳದಲ್ಲಿ ಇಬ್ಬರೂ ಒಂದೇ ರೂಮಿನಲ್ಲಿ 3 ವರ್ಷ ವಾಸವಾಗಿದ್ರು. SDA ಹುದ್ದೆ ಬಿಟ್ಟು ಪೇದೆ ಹುದ್ದೆಗೆ ಜಯಶ್ರೀ ಆಯ್ಕೆ ಆಗಿದ್ದರಂತೆ. ಇತ್ತ ವೀರೇಶ್ ರಾಯಚೂರಿನಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರ ಪ್ರೀತಿ ಗಲಾಟೆ ಬೀದಿಗೆ ಬಂದಿತ್ತು. ಬಳಿಕ ಸಿಂದಗಿ ಮಾಜಿ ಶಾಸಕ ಶರಣಪ್ಪ ಸುಣಗಾರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ನಡೆದಿತ್ತಂತೆ. ಈ ವೇಳೆ ಮದುವೆಗೆ ಒಪ್ಪಿದ್ದ ಲೇಡಿ ಪೇದೆ ಬಳಿಕ ಕೈ ಕೊಟ್ಟಿದ್ದಾರೆ ಎನ್ನುವ ಆರೋಪವಿದೆ.
ರಾಯಚೂರು ಎಸ್ಪಿ, ಡಿಎಸ್ಪಿಯಿಂದ ರಾಜಿ ಪಂಚಾಯಿತಿ ನಡೆದಿದೆ. ಆದ್ರೂ ಮದುವೆಗೆ ಲೇಡಿ ಪೇದೆ ಒಪ್ಪಿಲ್ಲ. ಇತ್ತ ನನಗೆ ಅವಳೇ ಬೇಕು ಎಂದು ವೀರೇಶ್ ಪಟ್ಟು ಹಿಡಿದಿದ್ದಾನೆ. ಪಿಎಸ್‌ಐ ವೀರೇಶ್, ಜಯಶ್ರೀ ಕುಟುಂಬಕ್ಕೆ 35 ಲಕ್ಷ ಕೊಟ್ಟು ಊರಲ್ಲಿ ಮನೆ ಕಟ್ಟಿಸಿಕೊಟ್ಟಿದ್ದರಂತೆ, ಜೊತೆಗೆ ಆಕೆಯ ತಮ್ಮನಿಗೂ ಟ್ರಾಕ್ಟರ್ ಕೊಡಿಸಿದ್ದೆ. ಈಗ ಹುಡುಗಿಯೂ ಇಲ್ಲ ಹಣವೂ ಇಲ್ಲದಂತಾಗಿದೆ. ನನಗೆ ನ್ಯಾಯ ಬೇಕು ಅಂತ ಪಿಎಸ್‌ಐ ಮಾಧ್ಯಮ ಮುಂದೆ ಕಣ್ಣೀರಿಟ್ಟಿದ್ದಾರೆ.
ದಳಪತಿ ವಿಜಯ್ ಗೆ ಸಾಥ್ ಕೊಟ್ಟ ಕಾಂಗ್ರೆಸ್; ಸಂಪುಟದಲ್ಲಿ 2 ಸ್ಥಾನಕ್ಕೆ ಬೇಡಿಕೆ