newsics.com/ನ್ಯೂಸಿಕ್ಸ್
ಮಲಯಾಳಂನ ಹಿರಿಯ ನಟ ಸಂತೋಷ್ ಕೆ. ನಾಯರ್ (65) ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. 1982ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಖಳನಾಯಕ ಹಾಗೂ ಹಾಸ್ಯ ನಟನಾಗಿ ಜನಪ್ರಿಯರಾಗಿದ್ದರು.ಅಪಘಾತದ ಸಮಯದಲ್ಲಿ ಅವರ ಜೊತೆಗಿದ್ದ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
https://youtube.com/shorts/iatQVbaFb3g?si=I11csgvje-MFvvAP
1982ರಲ್ಲಿ ತೆರೆಕಂಡ ‘ಇದು ನಂಗಳುಡೆ ಕಥಾ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂತೋಷ್ ಅವರು, ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಇವರು, ವಿಶೇಷವಾಗಿ ಖಳನಟನಾಗಿ ಮತ್ತು ಹಾಸ್ಯ ನಟನಾಗಿ ಪ್ರೇಕ್ಷಕರ ಮನ ಗೆದ್ದಿದ್ದರು.
ಸಂತೋಷ್ ಅವರ ಅಭಿನಯದ ಕೊನೆಯ ಚಿತ್ರ ‘ಭರತನಾಟ್ಯಮ್ 2 ಮೋಹಿನಿಯಾಟ್ಟಂ’. ಈ ಸಿನಿಮಾ ಥಿಯೇಟರ್ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಏಪ್ರಿಲ್ 10ರಂದು ಬಿಡುಗಡೆಯಾದ ಈ ಸಿನಿಮಾ 2024ರ ‘ಭರತನಾಟ್ಯಂ’ ಸಿನಿಮಾದ ಮುಂದುವರಿದ ಭಾಗವಾಗಿದೆ.