newsics.com/ನ್ಯೂಸಿಕ್ಸ್
ಎಪಿಕ್ ಚಿತ್ರದ ಬೋಲ್ಡ್ ಟೀಸರ್ ಬಿಡುಗಡೆಯಾಗಿದೆ. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಇದರಲ್ಲಿ ನಟಿಸಿದ್ದಾರೆ.
ಈ ಕಥೆಯಲ್ಲಿ ಆನಂದ್ ದೇವರಕೊಂಡ ಇಂಟ್ರೋವರ್ಟ್ (ಅಂತರ್ಮುಖಿ) ಪಾತ್ರದಲ್ಲಿ ಕಾಣಿಸಿಕೊಂಡರೆ, ವೈಷ್ಣವಿ ಚೈತನ್ಯ ಸಂಪೂರ್ಣವಾಗಿ ಎಕ್ಸ್ಟ್ರೋವರ್ಟ್ (ಬಹಿರ್ಮುಖಿ) ಪಾತ್ರದಲ್ಲಿ ಮಿಂಚಲಿದ್ದಾರೆ. ಇಬ್ಬರ ನಡುವಿನ ಲಿಪ್ಲಾಕ್ ದೃಶ್ಯಗಳು ಮತ್ತು ಬೋಲ್ಡ್ ರೊಮ್ಯಾನ್ಸ್ ಗಮನ ಸೆಳೆಯುತ್ತಿದೆ. ರೊಮ್ಯಾಂಟಿಕ್ ಹೀರೋ ಆಗಿ ವಿಜಯ್ ದೇವರಕೊಂಡ ಗುರುತಿಸಿಕೊಂಡಿದ್ದು, ಈಗ ತಮ್ಮ ಆನಂದ್ ಕೂಡ ಅಣ್ಣನ ದಾರಿಯಲ್ಲೇ ಸಾಗುತ್ತಿದ್ದಾರೆ.
ಹೈದರಾಬಾದ್ನ ಎಎಂಬಿ ಸಿನಿಮಾಸ್ನಲ್ಲಿ ನಡೆದ ‘ಎಪಿಕ್’ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ಆನಂದ್ ದೇವರಕೊಂಡ ಮಾತನಾಡಿದರು. ‘ಆದಿತ್ಯ ಹಾಸನ್ ಈ ಕಥೆ ಹೇಳಿದಾಗ, ನನ್ನ ಕಥೆಯನ್ನೇ ನನಗೆ ಹೇಳಿದಂತಾಯಿತು. ಯಾಕಂದ್ರೆ ನಾನೂ ವಿದೇಶದಲ್ಲಿ ಓದಿದ್ದೇನೆ. ಈ ಕಥೆಯ ಭಾವನೆಗಳು ಎಲ್ಲರಿಗೂ ಇಷ್ಟವಾಗುತ್ತವೆ. ಸಿತಾರ ಎಂಟರ್ಟೈನ್ಮೆಂಟ್ಸ್ ಸಂಸ್ಥೆಯಲ್ಲಿ ಸಿನಿಮಾ ಮಾಡಿದ್ದು ಖುಷಿ ತಂದಿದೆ. ಜರ್ಸಿ, ಟಿಲ್ಲು, ಮ್ಯಾಡ್ನಂತಹ ಹಿಟ್ ಸಿನಿಮಾಗಳ ಸಾಲಿಗೆ ಎಪಿಕ್ ಸೇರುತ್ತದೆ’ ಎಂದರು.