newsics.com/ನ್ಯೂಸಿಕ್ಸ್
ನವದೆಹಲಿ : ಧೂಮಪಾನಿಗಳಿಗೆ ಎಚ್ಚರಿಕೆ ಸಿಗರೇಟ್ ಬೆಲೆಗಳು ಮತ್ತೆ ಹೆಚ್ಚಾಗಲಿವೆ. ಇದರೊಂದಿಗೆ ಸಿಗರೇಟ್ ಕಂಪನಿ ಷೇರುಗಳು ಕೂಡ ತ್ವರಿತ ಏರಿಕೆ ಕಂಡಿವೆ. ಈಗ ಎಲ್ಲರ ಗಮನ ಇದು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಸಿಗರೇಟ್ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.
https://youtube.com/shorts/A7gPa–K6QY?si=UClQxtCV5fiwGWUd
ಬೆಲೆ ಏರಿಕೆಗೆ ಕಾರಣವೇನು?
ಕೇಂದ್ರ ಸರ್ಕಾರವು ಜಿಎಸ್‌ಟಿ ಮತ್ತು ಅಬಕಾರಿ ಸುಂಕವನ್ನು ಹೆಚ್ಚಿಸಿದ ಕಾರಣ, ಕಳೆದ ಫೆಬ್ರವರಿ 1 ರಿಂದಲೇ ಸಿಗರೇಟ್ ಬೆಲೆಗಳು ಏರಿಕೆಯಾಗಿದ್ದವು. ಇದರಿಂದಾಗಿ ಸಿಗರೇಟ್ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಮಾರಾಟ ಕಡಿಮೆಯಾದ ಕಾರಣ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನು ಸರಿದೂಗಿಸಲು ಕಂಪನಿಗಳು ಈಗ ಬೆಲೆ ಏರಿಕೆಯ ಮೊರೆ ಹೋಗುತ್ತಿವೆ.
ವರದಿಗಳ ಪ್ರಕಾರ, ಮೇ ತಿಂಗಳಿನಲ್ಲಿ ಸಿಗರೇಟ್ ಬೆಲೆಗಳು ಸುಮಾರು 16 ರಿಂದ 17 ಪ್ರತಿಶತದಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಸುಂಕದ ಏರಿಕೆ: ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಶೇ. 30 ರಿಂದ 40 ಕ್ಕೆ ಹೆಚ್ಚಿಸಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣ.
ಬೆಲೆ ಬದಲಾವಣೆ ಅಂದಾಜು:
ಈಗಾಗಲೇ ಕಿಂಗ್ ಸೈಜ್ ಸಿಗರೇಟ್ ಬೆಲೆ ₹20 ರಿಂದ ₹28 ಕ್ಕೆ ಏರಿದೆ.
ಗೋಲ್ಡ್ ಫ್ಲೇಕ್ ಪ್ರೀಮಿಯಂ ಪ್ಯಾಕ್ ಬೆಲೆ ₹115 ರಿಂದ ₹135 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.
ಮಾರ್ಲ್‌ಬರೋ, ಗೋಲ್ಡ್ ಫ್ಲೇಕ್ ಕಿಂಗ್ಸ್ ಮತ್ತು ಕ್ಲಾಸಿಕ್‌ನಂತಹ ಜನಪ್ರಿಯ ಬ್ರಾಂಡ್‌ಗಳ ಬೆಲೆಯೂ ಹೆಚ್ಚಾಗಲಿದೆ.