newsics.com/ನ್ಯೂಸಿಕ್ಸ್
ಮಲಪ್ಪುರಂ : ಬೀಚ್ ಬದಿಯಲ್ಲಿ 22ರ ಹರೆಯದ ಯುವತಿಯ ಮತೃದೇಹ ಪತ್ತೆಯಾಗಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಬೀಚ್‌ನಲ್ಲಿ ನಡೆದಿದೆ.
https://youtube.com/shorts/A7gPa–K6QY?si=UClQxtCV5fiwGWUd
ಮೃತ ಯುವತಿ ಪೊನ್ನಾನಿ ನಿವಾಸಿ ಫಾತಿಮಾ (22) ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಬದುಕು ಅಂತ್ಯಗೊಳಿಸಿದ ಘಟನೆ ಅಥವಾ ಬೀಚ್‌ನಲ್ಲಿ ನಡೆದ ದುರಂತ ಘಟನೆ ಎಂದೇ ಪೊಲೀಸರು ಅಂದುಕೊಂಡಿದ್ದರು. ಆದರೂ ಕೆಲ ಅನುಮಾನಗಳು ಪೊಲೀಸರನ್ನು ಕಾಡಿತ್ತು. ಹೀಗೆ ಬೀಚ್‌ನಲ್ಲಿ ಪತ್ತೆಯಾದ 22ರ ಹರೆಯದ ಫಾತಿಮಾ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ಸಂಬಂಧ ಫಾತಿಮಾ ಪತಿ ಅರೆಸ್ಟ್ ಆಗಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.
ಮೊದಲ ನೋಟಕ್ಕೆ ಇದು ಬೀಚ್‌ನಲ್ಲಿ ಆಡುವಾಗ ಕಾಲು ಜಾರಿ ಅಥವಾ ಅಸ್ವಸ್ಥಗೊಂಡು ಸಾವು ಕಂಡ ಘಟನೆ ರೀತಿ ಕಂಡುಬಂದಿತ್ತು. ಆದರೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಫಾತಿಮಾ ಕುಟುಂಬಸ್ಥರ ಕುರಿತು ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಫತಿಮಾ ಪತಿ ಕುರಿತು ವಿಚಾರಣೆ ನಡೆಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.
ಫಾತಿಮಾ ತನ್ನ ಪತಿ ಮೊಹಮ್ಮದ್ ಜೊತೆ ಬೀಚ್‌ಗೆ ಹೋಗಿದ್ದಳು. ಬೀಚ್‌ನಿಂದ ಮೊಹಮ್ಮದ್ ಮರಳಿದ್ದರೆ, ಪತ್ನಿ ಫಾತಿಮಾ ಮರಳಲೇ ಇಲ್ಲ. ಇತ್ತ ಬೀಚ್‌ನಿಂದ ಮರಳಿದ ಮೊಹಮ್ಮದ್ ಪರಪ್ಪನಂಗಡಿ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು ಬದುಕು ಅಂತ್ಯಗೊಳಿಸಲು ಪ್ರಯತ್ನಿಸಿದ್ದ. ಇದೇ ವೇಳೆ ಪೊಲೀಸರು ಮೊಹಮ್ಮದ್‌ನ ವಶಕ್ಕೆ ಪಡೆದಿದ್ದಾರೆ.
ಸದ್ಯಕ್ಕೆ, ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
https://www.newsics.com/2026/04/29/family-feud-husband-kills-owner-of-sri-sai-silks-commits-suicide/